ಅಡಿ ಪದಚ್ಯುತಿ ವಿರೋಧಿಸಿ ಹಿರಿಯ ವಕೀಲರಿಂದ ಸಹಿ ಸಂಗ್ರಹ ಅಭಿಯಾನ

ಉಪಲೋಕಾಯುಕ್ತ ಸುಭಾಷ್ ಬಿ. ಅಡಿ ಪದಚ್ಯುತಿ ವಿಚಾರ ಸಿಎಂ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ...
ಉಪಲೋಕಾಯುಕ್ತ ಸುಭಾಷ್ ಬಿ. ಅಡಿ (ಸಂಗ್ರಹ ಚಿತ್ರ)
ಉಪಲೋಕಾಯುಕ್ತ ಸುಭಾಷ್ ಬಿ. ಅಡಿ (ಸಂಗ್ರಹ ಚಿತ್ರ)

ಬೆಂಗಳೂರು: ಉಪಲೋಕಾಯುಕ್ತ ಸುಭಾಷ್ ಬಿ. ಅಡಿ ಪದಚ್ಯುತಿ ವಿಚಾರ ಸಿಎಂ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಒಂದೆಡೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೇ ವಿರೋಧ ವ್ಯಕ್ತವಾಗಿದ್ದರೆ, ಇನ್ನೊಂದೆಡೆ ಹಿರಿಯ ನ್ಯಾಯವಾದಿಗಳು ಸರ್ಕಾರದ ನಿಲುವನ್ನು ಖಂಡಿಸಿ ಸಹಿ ಸಂಗ್ರಹ ಅಭಿಯಾನ  ಆರಂಭಿಸಿದ್ದಾರೆ. ಇದೆಲ್ಲದರ ಮಧ್ಯೆ ಕಾಗೋಡು ತಿಮ್ಮಪ್ಪ ಅವರು, ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ.ಉಪ ಲೋಕಾಯುಕ್ತ ಪದಚ್ಯುತಿ ಸಂಬಂಧ ಕಾಂಗ್ರೆಸ್ ಸಲ್ಲಿಸಿರುವ ಪ್ರಸ್ತಾವದ ಬಗ್ಗೆ ಸ್ಪೀಕರ್ ಕಡತ ಪರಿಶೀಲನೆ ನಡೆಸಿದ್ದು, ಇನ್ನೊಂದು ವಾರದಲ್ಲಿ ಪ್ರಸ್ತಾಪವನ್ನು ಹೈಕೋರ್ಟ್  ಮುಖ್ಯನ್ಯಾಯಮೂರ್ತಿಗಳಿಗೆ ಕಳುಹಿಸಿಕೊಡಲು ಮುಂದಾಗಿದ್ದಾರೆ.

ಹಿರಿಯ ವಕೀಲರ ಅಭಿಯಾನ: ಅಡಿ ಪದಚ್ಯುತಿ ಪ್ರಕ್ರಿಯೆಯನ್ನು ನ್ಯಾಯಾಂಗದ ಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಪದಚ್ಯುತಿಗೆ ಸ್ಪೀಕರ್ ಅವಕಾಶ ನೀಡಬಾರದು ಎಂದು  ಹೈಕೋರ್ಟ್ ನ ಹಿರಿಯ ನ್ಯಾಯವಾದಿಗಳು ಸಹಿ ಸಂಗ್ರಹ ಆರಂಭಿಸಿದ್ದಾರೆ. ಬಿ.ವಿ.ಆಚಾರ್ಯ, ಜಯಕುಮಾರ್ ಎಸ್. ಪಾಟೀಲ್, ಕೆ.ಕಸ್ತೂರಿ, ಎಚ್.ಸುಬ್ರಹ್ಮಣ್ಯ, ಕೆ.ಸುಬ್ಬರಾವ್, ಡಿ.ಎನ್ ನಂಜುಡ ರೆಡ್ಡಿ, ಉದಯ್ ಹೊಳ್ಳ, ಸಜ್ಜನ್ ಪೂವಯ್ಯ, ಆರ್.ಎಲ್.ಪಾಟೀಲ್, ಎಂ. ಶಿವಪ್ಪ, ಡಿ.ಎಲ್.ಎನ್.ರಾವ್, ಸಿ.ಎಚ್. ಜಾದವ್, ಸಿ.ವಿ.ನಾಗೇಶ್, ಬಿ.ಎಂ. ಶ್ಯಾಪ್ರಸಾದ್ ಸೇರಿ 21  ನ್ಯಾಯವಾದಿಗಳು ಸಹಿ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com