ಭಾರತದ ಗ್ರೀನ್ ಎನರ್ಜಿ ಯೋಜನೆಗೆ ಜರ್ಮನಿ ಸಾಲ

ಭಾರತದ ಬಹು ಉದ್ದೇಶಿತ ಗ್ರೀನ್ ಎನರ್ಜಿ ಯೋಜನೆಗಾಗಿ ಜರ್ಮನಿ ಬರೊಬ್ಬರಿ 915 ಕೋಟಿ ರು. (125 ಮಿಲಿಯನ್ ಯೂರೋ) ಸಾಲ ನೀಡುವುದಾಗಿ ಘೋಷಣೆ ಮಾಡಿದೆ...
ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ (ಸಂಗ್ರಹ ಚಿತ್ರ)

ಬೆಂಗಳೂರು: ಭಾರತದ ಬಹು ಉದ್ದೇಶಿತ ಗ್ರೀನ್ ಎನರ್ಜಿ ಯೋಜನೆಗಾಗಿ ಜರ್ಮನಿ ಬರೊಬ್ಬರಿ 915 ಕೋಟಿ ರು. (125 ಮಿಲಿಯನ್ ಯೂರೋ) ಸಾಲ ನೀಡುವುದಾಗಿ ಘೋಷಣೆ ಮಾಡಿದೆ.

ಗ್ರೀನ್ ಎನರ್ಜಿ ಯೋಜನೆಯ ಅಡಿಯಲ್ಲಿ ಹಿಮಾಚಲ ಪ್ರದೇಶ ಮತ್ತು ನೆರೆಯ ಆಂಧ್ರಪ್ರದೇಶ ರಾಜ್ಯದಲ್ಲಿ ಕೇಂದ್ರ ಸರ್ಕಾರ ಎರಡು ಪ್ರಮುಖ ಯೋಜನೆಗಳನ್ನು ಹಮ್ಮಿಕೊಂಡಿದ್ದು. ಇದಕ್ಕೆ ಜರ್ಮನಿ ಸಾಲ ನೀಡುವುದಾಗಿ ಹೇಳಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. "ಭಾರತ ಸರ್ಕಾರ ಮತ್ತು ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ಮಂಗಳವಾರ ಪ್ರಮುಖ ಒಪ್ಪಂದಗಳಿಗೆ ಸಹಿಹಾಕಿದ್ದು, ಗ್ರೀನ್ ಎನರ್ಜಿ ಯೋಜನೆಯ ಅಡಿಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಸುಮಾರು 915 ಕೋಟಿ ರು. ಮೌಲ್ಯದ ಸಾಲ ನೀಡಿಕೆ ಒಪ್ಪಂದಕ್ಕೆ ಜರ್ಮನಿ ಸಹಿ ಮಾಡಿದೆ ಎಂದು ವಿತ್ತ ಸಚಿವಾಲಯ ಹೇಳಿದೆ.

ಇನ್ನು ಜರ್ಮನಿ ಸಹಿ ಮಾಡಿರುವ ಒಪ್ಪಂದದ ಪ್ರಕಾರ ಹಿಮಾಚಲ ಪ್ರದೇಶಕ್ಕೆ 57 ಮಿಲಿಯನ್ ಯೂರೋ ಮತ್ತು ಆಂಧ್ರ ಪ್ರದೇಶಕ್ಕೆ 68 ಮಿಲಿಯನ್ ಯೂರೋ ಹಣವನ್ನು ಮೀಸಲಿಡಲಾಗಿದೆ. ಹಿಮಾಚಲ ಪ್ರದೇಶಕ್ಕೆ ಮೀಸಲಿಟ್ಟಿರುವ ಹಣವನ್ನು ಸಂದರ್ಭಕ್ಕೆ ಅನುಸಾರವಾಗಿ ವಿಸ್ತರಿಸಬಹುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಉಭಯ ದೇಶಗಳ ಈ ಸಾಲದ ಒಪ್ಪಂದಕ್ಕೆ ಕೇಂದ್ರ ವಿತ್ತ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಮತ್ತು ಕೆಎಫ್ ಡಬ್ಲ್ಯೂ ಬೋರ್ಡ್ ಮ್ಯಾನೇಜ್ ಮೆಂಟ್ ಸದಸ್ಯರಾದ ರೋಲ್ಯಾಂಡ್ ಸಿಲ್ಲಾರ್ ಅವರು ಸಹಿ ಹಾಕಿದರು.

ಇಂಡೋ-ಜರ್ಮನಿ ಸಹಭಾಗಿತ್ವದಲ್ಲಿ ನಡೆದ ಆರ್ಥಿಕ ಒಪ್ಪಂದಗಳ ಪೈಕಿ ನವೀಕರಿಸಬಹುದಾದ ಶಕ್ತಿ ವಿಭಾಗ ಪ್ರಮುಖವಾಗಿದ್ದು, ನವೀಕರಿಸಬಹುದಾದ ಶಕ್ತಿ ಯೋಜನೆಗೆ ಪ್ರಸರಣ ಮತ್ತು ಮೂಲಸೌಕರ್ಯ ಒದಗಿಸುವುದು ಉಭಯ ದೇಶಗಳ ಪ್ರಮುಖ ಚಿಂತನೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com