ಉನ್ನತ ಶಿಕ್ಷಣದಲ್ಲಿ ಮೀಸಲು ಯಾಕೆ?

Published On :
ನವದೆಹಲಿ: ರಾಷ್ಟ್ರೀಯ ಹಿತಾಸಕ್ತಿಗಾಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ಬಗೆಯ ಮೀಸಲಾತಿಯನ್ನು ತೊಡೆದುಹಾಕುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ. ಸ್ವಾತಂತ್ರ್ಯ ಬಂದ 68 ವರ್ಷಗಳ ಬಳಿಕವೂ ಕೆಲವರು ಅನುಭವಿಸುತ್ತಿರುವ ಸೌಭಾಗ್ಯ ಬದಲಾಗಿಲ್ಲ. ರಾಷ್ಟ್ರದ ಹಿತಾಸಕ್ತಿಯ ರಕ್ಷಣೆಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ಬಗೆಯ ಮೀಸಲು ರದ್ದು ಮಾಡುವುದು ಅಗತ್ಯ. ಈ ಕುರಿತು ಕೇಂದ್ರ ವಸ್ತುನಿಷ್ಠವಾಗಿಯೋಚಿಸಿ ಪರಿಣಾಮಕಾರಿ ಕ್ರಮ ಕೈಗೊಳ್ಳ ಬೇಕು. ಸೂಪರ್ ಸ್ಪೆಶಾಲಿಟಿ ಕೋರ್ಸ್ ಗಳಿಗೆ ಮೆರಿಟ್ ಮಾತ್ರವೇ ಮಾನದಂಡವಾಗಿರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಲವಾರು ಬಾರಿ ಹೇಳಿದ್ದಾಗ್ಯೂ, ಮೀಸಲಾತಿಯು ಪ್ರತಿಭೆಯ ಮೇಲೆ ಹಿಡಿತ ಸಾಧಿಸಿದೆ ಎಂದು ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ.ಪಿ.ಸಿ.ಪಂತ್ ಅವರಿದ್ದ ಪೀಠ ಹೇಳಿದೆ. ಈ ಕುರಿತು ವಿಚಾರಣಾ ಕೋರ್ಟ್ 27 ವರ್ಷಗಳ ಹಿಂದೆ ನೀಡಿದ್ದ ತೀರ್ಪಿನ ಸಂದೇಶವ ನ್ನೇ ಇಂದೂ ತಾನು ಕೊಡಬಯಸುತ್ತೇನೆ
ಎಂದು ಕೋರ್ಟ್ ಹೇಳಿದೆ.
1988ರಲ್ಲಿ ಈ ಕುರಿತು 2 ತೀರ್ಪುಗಳನ್ನು ಕೋರ್ಟ್ ನೀಡಿತ್ತು. ವೈದ್ಯಕೀಯ ಸಂಸ್ಥೆಗಳಲ್ಲಿ ಸೂಪರ್ ಸ್ಪೆಶಾಲಿಟಿ ಕೋರ್ಸ್ಗಳಿಗೆ ಮೀಸಲು ಇರಬಾರದು ಎಂದು ಹೇಳಲಾಗಿತ್ತು. ಆಂಧ್ರ, ತೆಲಂಗಾಣ, ತಮಿಳುನಾಡುಗಳ ಕೆಲ ವೈದ್ಯ ಕೀಯ ಸೂಪರ್ ಸ್ಪೆಶಾಲಿಟಿ ಕೋರ್ಸ್ಗಳಿಗೆ ಸೇರ್ಪಡೆಯ ಅರ್ಹತೆಗೆ ಈ ರಾಜ್ಯಗಳ ಕಾಯಂ ನಿವಾಸಿಯಾಗಿರುವುದು ಅಗತ್ಯ ಎಂಬ ನಿಯಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಗಳ ವಿಚಾರಣೆ ವೇಳೆ ಕೋರ್ಟ್ ಈ ಮಾತುಗಳನ್ನು ಹೇಳಿದೆ. ತಮಿಳುನಾಡಿನಲ್ಲಿ ಈ ನಿಯಮ ಸಿಂಧುವೇ ಎಂದು ಪರಿಶೀಲಿಸಲುಕೋರ್ಟ್ ಒಪ್ಪಿದೆ. ಆದರೆ ಆಂಧ್ರ, ತೆಲಂಗಾಣ ಗಳಿಗೆ ವಿನಾಯಿತಿ ನೀಡುವುದಾಗಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


