ಕಾಶ್ಮೀರ ಪಂಡಿತರ ನೋವನ್ನು ಚಿತ್ರಿಸುವ 'ಕದಡಿದ ಕಣಿವೆ' ನಾಳೆ ಬಿಡುಗಡೆ

ಪತ್ರಕರ್ತ ರಾಹುಲ್ ಪಂಡಿತ ವಿರಚಿತ 'ಅವರ್ ಮೂನ್ ಹ್ಯಾಸ್ ಬ್ಲಡ್ ಕ್ಲಾಟ್ಸ್' ಪುಸ್ತಕ ಕನ್ನಡಕ್ಕೆ ಅನುವಾದಗೊಂಡಿದೆ. ಕಾಶ್ಮೀರದಲ್ಲಿ ನಡೆದ ಕೋಮು ಗಲಭೆಗಳಿಂದಾಗಿ ತಮ್ಮ
ಕದಡಿದ ಕಣಿವೆ ಇಂಗ್ಲಿಶ್ ಅವತರಿಣಿಕೆಯ ಮುಖಪುಟ
ಕದಡಿದ ಕಣಿವೆ ಇಂಗ್ಲಿಶ್ ಅವತರಿಣಿಕೆಯ ಮುಖಪುಟ
Updated on: 

ಬೆಂಗಳೂರು: ಪತ್ರಕರ್ತ ರಾಹುಲ್ ಪಂಡಿತ ವಿರಚಿತ 'ಅವರ್ ಮೂನ್ ಹ್ಯಾಸ್ ಬ್ಲಡ್ ಕ್ಲಾಟ್ಸ್' ಪುಸ್ತಕ ಕನ್ನಡಕ್ಕೆ ಅನುವಾದಗೊಂಡಿದೆ. ಕಾಶ್ಮೀರದಲ್ಲಿ ನಡೆದ ಕೋಮು ಗಲಭೆಗಳಿಂದಾಗಿ ತಮ್ಮ ಮೂಲ ನಿವಾಸವನ್ನು ತೊರೆಯಬೇಕಾಗಿ ಬಂದ ಸಾವಿರಾರು ಕಾಶ್ಮೀರಿ ಪಂಡಿತರ ಸಮುದಾಯನ ನೋವಿನ ಚಿತ್ರಣದ ಕಥೆ ಹೇಳುವ ಈ ಪುಸ್ತಕವನ್ನು ಅನುವಾದಿಸಿರುವವರು ಪತ್ರಕರ್ತ ಬಿ ಎಸ್ ಜಯಪ್ರಕಾಶ್ ನಾರಾಯಣ.

ನಾಳೆ ಭಾನುವಾರ (೧ ನೇ ನವೆಂಬರ್ ೨೦೧೫) ಸಂಜೆ ೫:೩೦ ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪುಸ್ತಕದ ಬಿಡುಗಡೆ ನೆರವೇರಲಿದ್ದು, ಆರ್ ಕೆ ಮಟ್ಟು (ಪತ್ರಕರ್ತ, ಅಧ್ಯಕ್ಷರು ಕಾಶ್ಮೀರಿ ಪಂಡಿತರ ಒಕ್ಕೂಟ), ಕೆ ಸಿ ರಘು, ಎಸ್ ಸೂರ್ಯಪ್ರಕಾಶ್ ಪಂಡಿತ್ ಮತ್ತು ಡಾ. ಜಿ ಬಿ ಹರೀಶ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಸಂತ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕಕ್ಕೆ, ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರ ಬೆನ್ನುಡಿಯೂ ಇದ್ದು, ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಆಯೋಜಕರ ವಿನಂತಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com