ಭಾರತ್ ಬಂದ್: ಜನಜೀವನ ಅಸ್ತವ್ಯಸ್ತ, ಹಲವೆಡೆ ಮಿಶ್ರ ಪ್ರತಿಕ್ರಿಯೆ

ಕೇಂದ್ರಸರ್ಕಾರದ ಕಾರ್ಮಿಕ ನೀತಿಯನ್ನು ವಿರೋಧಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಕರ್ನಾಟಕದಲ್ಲಿ...
ಭಾರತ್ ಬಂದ್ (ಸಂಗ್ರಹ ಚಿತ್ರ)
ಭಾರತ್ ಬಂದ್ (ಸಂಗ್ರಹ ಚಿತ್ರ)

ಬೆಂಗಳೂರು: ಕೇಂದ್ರಸರ್ಕಾರದ ಕಾರ್ಮಿಕ ನೀತಿಯನ್ನು ವಿರೋಧಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್  ಬಂದ್ ಗೆ ಕರ್ನಾಟಕದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆಘೋಷಣೆ ಮಾಡಲಾಗಿದೆ.

ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಪ್ರಮುಖ ನಗರಗಳಾದ ಮೈಸೂರು, ಹಾಸನ, ಧಾರವಾಡ, ಬೆಳಗಾವಿ ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಬಂದ್ ಗೆ ವ್ಯಾಪಕ ಬೆಂಬಲ  ವ್ಯಕ್ತವಾಗಿದೆ. ಪ್ರಮುಖ ಬಸ್ ನಿಲ್ದಾಣಗಳಲ್ಲಿ ಜನ  ಸಂಚಾರ ಮತ್ತು ವಾಹನ ಸಂಚಾರಗಳು ವಿರಳವಾಗಿದ್ದು, ರಾಯಚೂರಿನಲ್ಲಿ ವಿವಿಧ ಸಂಘಟನೆಗಳಿಂದ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ. ಇನ್ನು   ಬೆಂಗಳೂರಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಆಟೋಗಳ ಸಂಚಾರ ಸಾಮಾನ್ಯವಾಗಿದೆ.

23 ಬಸ್ ಗಳ ಮೇಲೆ ತೂರಾಟ
ಇದೇ ವೇಳೆ ಬಂದ್ ಆಚರಣೆ ವೇಳೆ ಕೆಲ ಅಹಿತಕರ ಘಟನೆಗಳು ನಡೆದಿದ್ದು, ನಗರದ ವಿವಿಧೆಡೆ ಬಿಎಂಟಿಸಿ ಸುಮಾರು 21 ಬಸ್ ಗಳಿಗೆ ಮತ್ತು ಕೆಎಸ್ ಆರ್ ಟಿಸಿ ಸಂಸ್ಥೆಯ 2 ಬಸ್ ಗಳ ಮೇಲೆ  ಕಲ್ಲು ತೂರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ದಕ್ಷಿಣ ಕನ್ನಡದ ಬೆಳ್ತಂಗಡಿ ಪಟ್ಟಣದಲ್ಲಿ ಲಾರಿ ಮತ್ತು ಬಸ್ ಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ಮಾಹಿತಿಗಳು  ಬಂದಿವೆ.

ಇನ್ನೂ ಗೊಂದಲ
ಖಾಸಗಿ ವಾಹನ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಸಂಘಟನೆಯ ಮುಖಂಡ ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ. ಇದೇ ವೇಳೆ ಆಟೋ ಚಾಲಕ ಸಂಘಟನೆಗಳಲ್ಲೂ  ಕೂಡಾ ಬಂದ್ ಮಾಡಬೇಕೊ ಬೇಡವೋ ಎನ್ನುವ ಗೊಂದಲ ಇರುವುದರಿಂದ ಆಟೋ ಲಭ್ಯತೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೂ, ಹೊರಗೆ ತೆರಳಲು ಸಾರ್ವಜನಿಕ ವಾಹನಗಳ ಬದಲು ಸ್ವಂತ  ವಾಹನಗಳ ಮೇಲೆ ಅವಲಂಬನೆ ಸೂಕ್ತ. ಬಂದ್ ವೇಳೆ ಬೆಂಗಳೂರಿನಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದ್ದು ಪ್ರಮುಖ ಪ್ರದೇಶಗಳಲ್ಲಿ ಪೊಲೀಸರ ಜತೆಗೆ 15 ಕೆಎಸ್‍ಆರ್‍ಪಿ ತುಕಡಿ  ನಿಯೋಜಿಸಲಾಗುವುದು. ಬಲವಂತ ವಾಗಿ ಬಂದ್ ಮಾಡಿಸಿದರೆ ಕ್ರಮ.
-ಎನ್ ಎಸ್ ಮೇಘರಿಖ್, ನಗರ ಪೊಲೀಸ್ ಆಯುಕ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com