ಕಳಸಾಬಂಡೂರಿಗೆ ಕಾಂಗ್ರೆಸ್ ಅಡ್ಡಿ: ವೆಂಕಯ್ಯನಾಯ್ಡು

ಉತ್ತರ ಕರ್ನಾಟಕಕ್ಕೆ ಕುಡಿಯುವ ನೀರು ಪೂರೈಸುವ ಕಳಸಾಬಂಡೂರಿ ನಾಲಾ ಯೋಜನೆ ಕುರಿತು ಈಗ ಆಗುತ್ತಿರುವ ಎಲ್ಲ ಅಡೆತಡೆಗಳಿಗೆ ಆಗಿನ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಆರೋಪಿಸಿದ್ದಾರೆ...
ಕೇಂದ್ರ ಸಚಿವ ವೆಂಕಯ್ಯನಾಯ್ಡು (ಸಂಗ್ರಹ ಚಿತ್ರ)
ಕೇಂದ್ರ ಸಚಿವ ವೆಂಕಯ್ಯನಾಯ್ಡು (ಸಂಗ್ರಹ ಚಿತ್ರ)

ಬೆಂಗಳೂರು: ಉತ್ತರ ಕರ್ನಾಟಕಕ್ಕೆ ಕುಡಿಯುವ ನೀರು ಪೂರೈಸುವ ಕಳಸಾಬಂಡೂರಿ ನಾಲಾ ಯೋಜನೆ ಕುರಿತು ಈಗ ಆಗುತ್ತಿರುವ ಎಲ್ಲ ಅಡೆತಡೆಗಳಿಗೆ ಆಗಿನ ಕಾಂಗ್ರೆಸ್ ಸರ್ಕಾರವೇ ನೇರ  ಹೊಣೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಆರೋಪಿಸಿದ್ದಾರೆ.

ಕಳೆದ 10 ವರ್ಷ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಈ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಮುಂದಿಟ್ಟುಕೊಂಡು ಆಡಳಿತ ನಡೆಸುತ್ತಿದ್ದ ಸೋನಿಯಾ ಗಾಂಧಿ ಆಗ ಏನು ಮಾಡುತ್ತಿದ್ದರು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆ  ಸಂಬಂಧ ಈಗ ಆಗಿರುವ ಅಡೆತಡೆ ಹೊಣೆಯನ್ನು ಕಾಂಗ್ರೆಸ್ ಹೊರಬೇಕು. 2002ರಲ್ಲಿ ಈ ಯೋಜನೆ ಸಮಸ್ಯೆ ಆರಂಭವಾಯಿತು. ನಂತರ 2006ರಲ್ಲಿ ಗೋವಾ ಸರ್ಕಾರ ಈ ಸಂಬಂಧ  ಸುಪ್ರೀಂ ಕೋರ್ಟ್‍ನಲ್ಲಿ ದಾವೆ ಹೂಡಿತ್ತು. ಈ ನಡುವೆ 2007ರಲ್ಲಿ ಚುನಾವಣೆ ಬಂದ ಕಾರಣ ಕಾಂಗ್ರೆಸ್ ಸರ್ಕಾರ ಇದನ್ನೇ ಬಂಡವಾಳವನ್ನಾಗಿಟ್ಟುಕೊಂಡು ಚುನಾವಣೆ ಎದುರಿಸಿತು.  ಕರ್ನಾಟಕಕ್ಕೆ ನೀರು ಒದಗಿಸಲು ಸೋನಿಯಾ ಗಾಂಧಿ ಅವರಿಗೆ ಇಷ್ಟವಿರಲಿಲ್ಲ ಎಂದು ಆರೋಪಿಸಿದರು.

ಮರೆತಂದಿದೆ?
ಮಹದಾಯಿ ಯೋಜನೆ ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿ ಅವರ ಮೇಲೆ ಆರೋಪ ಮಾಡಿದ್ದಾರೆ. ಹಾಗಾಗಿ ಸಿಎಂ  ಆದವರಿಗೆ ಈ ಯೋಜನೆ ಬಗ್ಗೆ ಸಂಪೂರ್ಣ ತಿಳಿದಿರಬೇಕು ಹಾಗೂ ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಅರಿಯಬೇಕು. ಆದರೆ ಅವರು ಅದನ್ನು ಮರೆತಂತಿದೆ. ಹಾಗಾಗಿ ಈ ರೀತಿ  ಆರೋಪ ಮಾಡುತ್ತಿದ್ದಾರೆ ಎಂದರು.

ಮಹದಾಯಿ ಯೋಜನೆ ಬಗ್ಗೆ ನಾನೀಗ ಮಾತನಾಡುವುದು ಸರಿಯಲ್ಲ, ಆ ವಿಚಾರ ಈಗ ನ್ಯಾಯಮಂಡಳಿಯಲ್ಲಿದೆ. ಇಂಥ ಸಂದರ್ಭದಲ್ಲಿ ನಾನು ಪತ್ರಿಕಾಗೋಷ್ಠಿಯಲ್ಲಿ ಚರ್ಚಿಸುವುದು ಎಷ್ಟು ಸರಿ ?  ಈ ವಿಚಾರದಲ್ಲಿ ನಾನು ಮಾತ್ರ ಅಲ್ಲ. ಯಾರೂ ಮಾತನಾಡುವುದಿಲ್ಲ. ಯಾರೂ ಮಾತನಾಡಲೂ ಬಾರದು.
-ಮನೋಹರ ಪರ್ರಿಕರ್
ಕೇಂದ್ರ ರಕ್ಷಣಾ ಸಚಿವ (ಗೋವಾ ಮಾಜಿ ಸಿಎಂ)


ಸರ್ಕಾರದ ಕೆಲಸ ಕಾರ್ಯದಲ್ಲಿ ಆರ್‍ಎಸ್‍ಎಸ್ ಮಧ್ಯ ಪ್ರವೇಶಿಸುತ್ತಿಲ್ಲ. ದೇಶದ ಅಭಿವೃದ್ಧಿ ವಿಚಾರದಲ್ಲಿ ಕೆಲ ವಿಚಾರ ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಅದರ ಟೀಕೆಸಲ್ಲ. ಇದನ್ನು  ಹೊರತುಪಡಿಸಿ ಸರ್ಕಾರದ ಕಾರ್ಯವೈಖರಿಯಲ್ಲಿ ಆರ್‍ಎಸ್‍ಎಸ್ ಮೂಗು ತೂರಿಸುವ ಪ್ರಮೇಯವೇ ಇಲ್ಲ.
-ಎಂ.ವೆಂಕಯ್ಯ ನಾಯ್ಡು ಕೇಂದ್ರ ಸಚಿವ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com