
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರ ಹಗರಣದ ಸಂಬಂಧ ತನಿಖೆ ನಡೆಸಿದ ವಿಶೇಷ ತನಿಖಾ ದಳ (ಎಸ್‍ಐಟಿ) ಬುಧವಾರ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಹಲವು ಕುತೂಹಲಕಾರಿ ಅಂಶಗಳು ಬಯಲಿಗೆ ಬಂದಿವೆ.
ಹಣಕ್ಕಾಗಿ ಬೆದರಿಸಲು ವಿವಿಧ ಇಲಾಖೆಗಳ ಎಂಜಿನಿಯರುಗಳಿಗೆ ಕರೆ ಮಾಡುತ್ತಿದ್ದದ್ದು ಬೆಳಕಿಗೆ ಬಂದಿವೆ. ಈ ಸಂಬಂಧ ಎಂಜಿನಿಯರುಗಳು, ಐಎಎಸ್, ಐಪಿಎಸ್ ಅಧಿಕಾರಿಗಳು, ಲೋಕಾಯುಕ್ತ ಕಚೇರಿ ಸಿಬ್ಬಂದಿಯ ಮೌಖಿಕ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಸೈಯ್ಯದ್ ರಿಯಾಜ್ ಮಾಧ್ಯಮಗಳ ಮೂಲಕ ಪ್ರಕರಣದಲ್ಲಿ ಸೋನಿಯಾ ನಾರಂಗ್ ಭಾಗಿಯಾಗಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಸಾರಕ್ಕೆ ಯತ್ನಿಸಿದ್ದ ಅಂಶವೂ ಚಾರ್ಜ್ ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ. ರಿಯಾಜ್ ತಮ್ಮ ಪಿಎ ಮೂಲಕ ವರದಿಗಾರರಿಗೆ ಕರೆ ಮಾಡಿ ಸೋನಿಯಾ ನಾರಂಗ್ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದರು.
ಚಾರ್ಜ್‍ಶೀಟ್‍ನಲ್ಲಿರುವ ಪ್ರಮುಖ ಸಾಕ್ಷಿಗಳು
-ಲೋಕಾಯುಕ್ತ ಕಚೇರಿಯಿಂದ ವಶಪಡಿಸಿಕೊಳ್ಳಲಾದ ಸಿಸಿ ಕ್ಯಾಮೆರಾ ಹಾಗೂ ಡಿವಿಆರ್
- ಆರೋಪಿಗಳಾದ ವಿ.ಭಾಸ್ಕರ್, ಅಶೋಕ್ ಕುಮಾರ್ ಹೈದ್ರಾಬಾದ್‍ಗೆ ವಿಮಾನದಲ್ಲಿ ತೆರಳಿ ಅಲ್ಲಿನ ಅವಾಸಾ ಹೋಟೆಲ್‍ನಲ್ಲಿ ಅಶ್ವಿನ್‍ರಾವ್ ಅವರನ್ನು ಭೇಟಿಯಾಗಿರುವ ಬಗ್ಗೆ ದಾಖಲೆ.
-ರೇಸ್ ವ್ಯೂವ್ ಹೋಟೆಲ್‍ನಲ್ಲಿ ಅಶೋಕ್ ಕುಮಾರ್ ಹೋಟೆಲ್ ಮಾಡಿರುವುದು.
- ಅಶೋಕ್ ಕುಮಾರ್, ರಿಯಾಜ್ ಜತೆ ಲೋಕಾಯುಕ್ತ ಕಚೇರಿ ಸಿಬ್ಬಂದಿ ಪ್ರಮೋದ್ ಮೊಬೈಲ್‍ನಲ್ಲಿ ಸಂಭಾಷಣೆ ದಾಖಲೆಗಳು.
- ಶ್ರೀನಿವಾಸಗೌಡ ಆರ್‍ಟಿಐ ಅಡಿ ಪಂಚಾಯತ್ ರಾಜ್ ಇಲಾಖೆಯಿಂದ ಪಡೆದ ದಾಖಲೆಗಳು.
- ಲೋಕಾ ಕಚೇರಿಯಿಂದ ಎಂಜಿನಿಯರ್ ಕೃಷ್ಣ ಮೂರ್ತಿ ಮೊಬೈಲ್‍ಗೆ ಕರೆ ದಾಖಲೆಗಳು.
- ನ್ಯಾ.ವೈ.ಭಾಸ್ಕರ್‍ರಾವ್ ಅವರು ಆರೋಪಿ ವಿ. ಭಾಸ್ಕರ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಬಗೆಗಿನ ದಾಖಲೆಗಳು.
- ಬೆದರಿಕೆ, ತಮ್ಮ ನಡುವಿನ ಸಂಭಾಷಣೆಗಾಗಿ ಬಳಸಿದ 13 ಸಿಮ್ ಕಾರ್ಡ್ ಕಾಲ್ ಡಿಟೇಲ್ಸ್.
- ಡೀಲ್‍ಗಳಿಗಾಗಿ ಈ ನಿವಾರಣ ಟ್ರಸ್ಟ್ ಗೆ ಸಂಬಂಧಿಸಿದ ದಾಖಲೆಗಳು
- ಅಶ್ವಿನ್‍ರಾವ್ ತನ್ನ ಕಾರನ್ನು ಅನಧಿಕೃತವಾಗಿ ರೇನ್‍ಬೋ ವಿಸ್ಟಾ ಅಪಾರ್ಟ್‍ಮೆಂಟ್‍ನಲ್ಲಿ ನಿಲ್ಲಿಸಲು ಮಾಡಿದ್ದ ಸಂಚು
- ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಹಾಗೂ ಡಿವೈಎಸ್ಪಿ ಪ್ರಸನ್ನರಾಜು ಅವರು ದೂರುದಾರ ಎಂಜಿನಿಯರ್ ಕೃಷ್ಣಮೂರ್ತಿ ಅವರಿಂದ ಪಡೆದ ದೂರು ಹಾಗೂ ಹೇಳಿಕೆ ಪ್ರತಿ
- ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗೆ ಹಣಕ್ಕಾಗಿ ಬೆದರಿಕೆ ಮಾಹಿತಿ.
- ಭೂ ದಾಖಲೆಗಳ ತಿದ್ದುಪಡಿಗಾಗಿ ಬಿಡಿಎ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಕರೆಗಳ ಮಾಹಿತಿ
- ಅಶ್ವಿನ್‍ರಾವ್‍ಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಅಕೌಂಟ್‍ಗಳು
- ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಂತಿ ಅವರ ಹೇಳಿಕೆ
- ಎಂಜಿನಿಯರ್‍ಗಳು, ಐಎಎಸ್, ಐಪಿಎಸ್ ಲೋಕಾಯುಕ್ತ ಕಚೇರಿ ಸಿಬ್ಬಂದಿ ಸೇರಿ 71 ಅಧಿಕಾರಿ, ಸಿಬ್ಬಂದಿಯ ಮೌಖಿಕ ಹೇಳಿಕೆ
Advertisement