ವರ್ಷವಾದ್ರೂ ರಾಘವೇಶ್ವರರ ಸೆರೆ ಯಾಕಿಲ್ಲ?

ಬಾಪು ಅಸಾರಾಮ್, ಸ್ವಾಮಿ ನಿತ್ಯಾನಂದ ಪ್ರಕರಣಗಳಲ್ಲಿ ಮೂರನೇ ಪಕ್ಷ ಸಲ್ಲಿಸಿದ ದೂರು ಪರಿಗಣಿಸಿ ಆರೋಪಿಗಳನ್ನು ಬಂಧಿಸಿ ಚಾರ್ಜ್‍ಶೀಟ್ ಹಾಕಲಾಗಿದೆ...
ರಾಘವೇಶ್ವರ ಶ್ರೀ (ಸಂಗ್ರಹ ಚಿತ್ರ)
ರಾಘವೇಶ್ವರ ಶ್ರೀ (ಸಂಗ್ರಹ ಚಿತ್ರ)

ಬೆಂಗಳೂರು: ಬಾಪು ಅಸಾರಾಮ್, ಸ್ವಾಮಿ ನಿತ್ಯಾನಂದ ಪ್ರಕರಣಗಳಲ್ಲಿ ಮೂರನೇ ಪಕ್ಷ ಸಲ್ಲಿಸಿದ ದೂರು ಪರಿಗಣಿಸಿ ಆರೋಪಿಗಳನ್ನು ಬಂಧಿಸಿ ಚಾರ್ಜ್‍ಶೀಟ್ ಹಾಕಲಾಗಿದೆ.

ಆದರೆ, ರಾಘವೇಶ್ವರ ಶ್ರೀಗಳ ಪ್ರಕರಣದಲ್ಲಿ ಅತ್ಯಾಚಾರ ಸಂತ್ರಸ್ತೆಯೇ ನೇರವಾಗಿ ದೂರು ನೀಡಿ ವರ್ಷ ಕಳೆದರೂ ಇದುವರೆಗೆ ಬಂಧನವೂ ಇಲ್ಲ, ಚಾರ್ಜ್‍ಶೀಟ್ ಕೂಡ ಹಾಕಿಲ್ಲ. ಇದು ರಾಜ್ಯ  ಸರ್ಕಾರದ ರಾಜಕೀಯ ಇಚ್ಛಾಶಕ್ತಿಯ ಕೊರತೆ ತೋರಿಸುತ್ತದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಳಂ ಆರೋಪಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರೇಮಲತಾ ದಿವಾಕರ್ ಪ್ರಕರಣದಲ್ಲಿ ದೂರು ದಾಖಲಾಗಿ ವರ್ಷವಾದರೂ ಚಾರ್ಜ್‍ಶೀಟ್ ಸಲ್ಲಿಸಿಲ್ಲ.

ನಾನೇ ಎರಡು ಬಾರಿ ಬಂದುಹೋಗಿದ್ದರೂ, ಲೋಪರಹಿತ ಚಾರ್ಜ್‍ಶೀಟ್  ಸಲ್ಲಿಸುವ ಉದ್ದೇಶದಿಂದ ತಡವಾಗಿದೆ ಎನ್ನುವ ಕಾರಣ ನೀಡಲಾಗಿದೆ. ಈ ಮಧ್ಯೆ, 24 ವರ್ಷದ ಯುವತಿಯೊಬ್ಬಳು ಶ್ರೀಗಳ ವಿರುದ್ಧ ಅತ್ಯಾಚಾರದ ದೂರು ಸಲ್ಲಿಸಿದ್ದಾಳೆ.  ಹೀಗಿದ್ದರೂ   ಚಾರ್ಜ್‍ಶೀಟ್ ಸಲ್ಲಿಕೆಗೆ ಸರ್ಕಾರ ವಿಳಂಬ ಮಾಡಲು ಕಾರಣವೇನು ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com