ಫೇಸ್ಬುಕ್ ಇತಿಹಾಸದಲ್ಲಿ ಭಾರತದ ಪಾತ್ರ ಮಹತ್ವ: ಜ್ಯೂಕರ್ ಬರ್ಗ್

೧೦ ವರ್ಷದ ಹಿಂದೆ ತನ್ನ ಸಂಸ್ಥೆ ಕಷ್ಟದ ಸಮಯ ಎದುರಿಸುತ್ತಿದ್ದಾಗ ಹಾಗೂ ಅದನ್ನು ಮಾರಾಟ ಮಾಡಬೇಕೆಂದುಕೊಂಡಿದ್ದಾಗ, ಭಾರತವನ್ನು ಜ್ಞಾನದ ದೇಗುಲ ಎಂದು
ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜ್ಯೂಕರ್ ಬರ್ಗ್ ಸಂವಾದ ನಡೆಸಿದ ಭಾರತ ಪ್ರಧಾನಿ ನರೇಂದ್ರ ಮೋದಿ
ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜ್ಯೂಕರ್ ಬರ್ಗ್ ಸಂವಾದ ನಡೆಸಿದ ಭಾರತ ಪ್ರಧಾನಿ ನರೇಂದ್ರ ಮೋದಿ

ಸ್ಯಾನೋಯಿ: ೧೦ ವರ್ಷದ ಹಿಂದೆ ತನ್ನ ಸಂಸ್ಥೆ ಕಷ್ಟದ ಸಮಯ ಎದುರಿಸುತ್ತಿದ್ದಾಗ ಹಾಗೂ ಅದನ್ನು ಮಾರಾಟ ಮಾಡಬೇಕೆಂದುಕೊಂಡಿದ್ದಾಗ, ಭಾರತವನ್ನು ಜ್ಞಾನದ ದೇಗುಲ ಎಂದು ಪರಿಗಣಿಸಿ ಅಲ್ಲಿಂದ ಸ್ಫೂರ್ತಿ ಪಡೆದು, ಫೇಸ್ಬುಕ್ ಅನ್ನು ಮರುನಿರ್ಮಿಸಿದ್ದಾಗಿ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜ್ಯೂಕರ್ ಬರ್ಗ್ ಹೇಳಿದ್ದಾರೆ.

"ಹಲವಾರು ಕಾರಣಗಳಿಗಾಗಿ ಭಾರತದ ಬಗ್ಗೆ ವ್ಯಯಕ್ತಿವಾಗಿ ಆಸಕ್ತಿ ಉಳ್ಳವನಾಗಿದ್ದೇನೆ" ಎಂದು ೩೧ ವರ್ಷದ ಫೇಸ್ಬುಕ್ ಕಾರ್ಯ ನಿರ್ವಾಹಕ ಅಧಿಕಾರಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ಸಂವಾದದ ವೇಳೆ ತಿಳಿಸಿದ್ದಾರೆ.

"ಫೇಸ್ಬುಕ್ ಇತಿಹಾಸದಲ್ಲಿ ಭಾರತದ ಪಾತ್ರ ಮಹತ್ವ" ಎಂದು ತಿಳಿಸಿದ ಅವರು ಫೇಸ್ಬುಕು ೧೦ ವರ್ಷದ ಹಿಂದೆ ಕಷ್ಟದ ಸಮಯವನ್ನು ಎದುರಿಸುತ್ತಿದ್ದಾಗ, ತಮ್ಮ ಗುರು ಆಪಲ್ ಸಂಸ್ಥೆ ಮಾಜಿ ಸಿಇಒ ದಿವಂಗತ ಸ್ಟೀವ್ ಜಾಬ್ಸ್ "ಭಾರತದ ದೇವಾಲಯನ್ನು ಭೇಟಿ ಮಾಡು" ಎಂದು ತಿಳಿಸಿದ್ದನ್ನು ನೆನಪಿಸಿಕೊಂಡಿದ್ದಾರೆ ಮಾರ್ಕ್ ಜ್ಯೂಕರ್ ಬರ್ಗ್.

"ಆದುದರಿಂದ ನಾನು ಒಂದು ತಿಂಗಳವರೆಗೆ ಭಾರತದ ಪ್ರವಾಸ ಮಾಡಿದ್ದೆ" ಆ ಪ್ರವಾಸ ನನ್ನಲ್ಲಿ ಆತ್ಮಸ್ಥೈರ್ಯ ತುಂಬಿದ್ದರಿಂದ ಫೇಸ್ಬುಕ್ಕನ್ನು ಮಲ್ಟಿ ಬಿಲಿಯನ್ ಸಂಸ್ಥೆಯಾಗಿ ಮರು ನಿರ್ಮಾಣ ಮಾಡಲು ಸಾಧ್ಯವಾಯಿತು ಎಂದಿದ್ದಾರೆ. "ಯಾವುದನ್ನಾದರೂ ಪ್ರಾರಂಭಿಸುವ ಮುಂಚೆ ದೇವಾಲಯಕ್ಕೆ ಭೇಟಿ ನಿಡಬೇಕು" ಎಂದು ಜ್ಯೂಕರ್ ಬರ್ಗ್ ತಿಳಿಸಿದ್ದಾರೆ.

ಇದಕ್ಕೂ ಮುಂಚೆ ಮಾತನಾಡಿದ್ದ ಮೋದಿ, ಜ್ಯೂಕರ್ ಬರ್ಗ್ ಕಥೆ ಕೇಳಿ ವಿಶ್ವವೇ ಆಶ್ಚರ್ಯ ಪಡುತ್ತದೆ "ನೀವು ಭಾರತದ ದೇವಾಲಯದಿಂದ ಸ್ಫೂರ್ತಿ ಪಡೆದ ಕಥೆ" . "ಭಾರತದಲ್ಲಿ ಬಹಳಷ್ಟು ಭರವಸೆ ಇದೆ. ನೀವು ಭಾರತಕ್ಕೆ ಭರವಸೆ ಇಟ್ಟು ದೇವಾಲಯಕ್ಕೆ ಬಂದಿರಿ, ಈಗ ಯಾವ ಹಂತ ತಲುಪಿದ್ದೀರಿ ನೋಡಿ. ನಿಮ್ಮ ಅನುಭವವೇ ಆಶಾವಾದವನ್ನು ತೋರಿಸುತ್ತದೆ. ಭಾರತದಲ್ಲಿ ಆ ಏನೋ ಒಂದು ವಿಶೇಷತೆ ಇದೆ" ಎಂದು ಅವರು ಹೇಳಿದ್ದಾರೆ.

ಜನರನ್ನು ಸಂಪರ್ಕಿಸಲು ಮೋದಿ ಸಾಮಾಜಿಕ ಅಂತರ್ಜಾಲವನ್ನು ಬಳಸುವ ಬಗೆಯನ್ನು ಪ್ರಸಂಶಿಸಿದ ಫೇಸ್ಬುಕ್ ಸಿಇಒ "ಆದರೆ ಇನ್ನೂ ಬಿಲಿಯನ್ ಗಟ್ಟಲೆ ಮಂದಿ ಅಂತರ್ಜಾಲದಿಂದ ವಂಚಿತರಾಗಿದ್ದಾರೆ" ಎಂದಿದ್ದಾರೆ.

"ನೀವು ವಿಶ್ವದ ಬಿಲಿಯನ್ ಗಟ್ಟಲೆ ಜನರ ಧ್ವನಿಯಾಗಲಿದ್ದೀರಿ ಎಂದು ನಂಬುತ್ತೇನೆ" ಎಂದು ಮೋದಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com