ಅಭಿವೃದ್ಧಿ ಬ್ಯಾಂಕ್ ನಿಂದ ಭಾರತಕ್ಕೆ 250 ಮಿಲಿಯನ್ ಡಾಲರ್ ಸಾಲ ಮಂಜೂರು

ಭಾರತದ ಮಹತ್ವಾಕಾಂಕ್ಷಿ ಯೋಜನೆಗೆ ನ್ಯೂ ಡೆವಲೆಪ್ ಮೆಂಟ್ ಬ್ಯಾಂಕ್ ನಿಂದ 250 ಮಿಲಿಯನ್ ಡಾಲರ್ ಸಾಲ ಮಂಜೂರಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ...
ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷ ಕೆವಿ ಕಾಮತ್ (ಸಂಗ್ರಹ ಚಿತ್ರ)
ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷ ಕೆವಿ ಕಾಮತ್ (ಸಂಗ್ರಹ ಚಿತ್ರ)

ವಾಷಿಂಗ್ಟನ್: ಭಾರತದ ಮಹತ್ವಾಕಾಂಕ್ಷಿ ಯೋಜನೆಗೆ ನ್ಯೂ ಡೆವಲೆಪ್ ಮೆಂಟ್ ಬ್ಯಾಂಕ್ ನಿಂದ 250 ಮಿಲಿಯನ್ ಡಾಲರ್ ಸಾಲ ಮಂಜೂರಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯದ  ಮೂಲಗಳು ತಿಳಿಸಿವೆ.

ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಒಕ್ಕೂಟದಿಂದ ಸ್ಥಾಪನೆಯಾಗಿರುವ ಬ್ರಿಕ್ಸ್ ಬ್ಯಾಂಕ್ ಎಂದೇ ಕರೆಯಲ್ಪಡುವ ಡೆವಲಪ್ ಮೆಂಟ್ ಬ್ಯಾಂಕ್ ನಿಂದ ಇದೇ ಮೊದಲ  ಬಾರಿಗೆ ಭಾರತಕ್ಕೆ ನಾಲ್ಕು ವಿವಿಧ ಸಾಲ ಮಂಜೂರಾಗಿದ್ದು, ಈ ಪೈಕಿ ಭಾರತದ ಉದ್ದೇಶಿತ ಹೊಸ ಮತ್ತು ನವೀಕರಿಸಬಹುದಾದ ಇಂಧನ ಶಕ್ತಿ ಯೋಜನೆಗಾಗಿ ಡೆವಲಪ್ ಮೆಂಟ್ ಬ್ಯಾಂಕ್ 250  ಮಿಲಿಯನ್ ಡಾಲರ್ ಸಾಲ ಮಂಜೂರು ಮಾಡಿದೆ ಎಂದು ಕೇಂದ್ರ ಹಣಕಾಸು ಇಲಾಖೆಯ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಅವರು ಟ್ವೀಟ್ ಮಾಡಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿ ಇಂದು ನಡೆದ ವಿವಿಧ ದೇಶಗಳ ವಿತ್ತ ಸಚಿವರ ಸಭೆಯಲ್ಲಿ ಪಾಲ್ಗೊಂಡಿದ್ದ ಶಕ್ತಿಕಾಂತ ದಾಸ್ ಸಭೆಯಲ್ಲಿ ಪ್ರಮುಖ ಆರ್ಥಿಕ ನೀತಿಗಳ ಕುರಿತು ಚರ್ಚಿಸಲಾಯಿತು ಎಂದು  ಹೇಳಿದ್ದಾರೆ. ಡೆವಲೆಪ್ ಮೆಂಟ್ ಬ್ಯಾಂಕ್ ನಿಂದ ಭಾರತಕ್ಕೆ ಸೋಲಾರ್ ಯೋಜನೆ ಸೇರಿದಂತೆ ನಾಲ್ಕು ಪ್ರಮುಖ ವಿಭಾಗಗಳಲ್ಲಿ ಸಾಲ ಮಂಜೂರಾಗಿರುವುದು ಉತ್ತಮ ಬೆಳವಣಿಗೆಯಾಗಿದೆ  ಎಂದು ಶಕ್ತಿಕಾಂತ್ ದಾಸ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಅಭಿವೃದ್ಧಿ ಶೀಲ ರಾಷ್ಟ್ರಗಳ ಅಭಿವೃದ್ಧಿಗಾಗಿ ಮತ್ತು ವಿಶ್ವಬ್ಯಾಂಕ್ ಗೆ ಪರ್ಯಾಯವಾಗಿ ಆರಂಭವಾದ ಬ್ರಿಕ್ಸ್ ಬ್ಯಾಂಕ್ ಗೆ ಮೊದಲ ಅಧ್ಯಕ್ಷರಾಗಿ ಕನ್ನಡಿಗೆ ಕೆವಿ ಕಾಮತ್ ಆಯ್ಕೆಯಾಗಿದ್ದರು. ಇದೀಗ  ಭಾರತದ ಬಹು ಉದ್ದೇಶಿತ ಯೋಜನೆಗಳಿಗೆ ಬ್ರಿಕ್ಸ್ ಬ್ಯಾಂಕ್ ನಿಂದ ಸಾಲ ಮಂಜೂರಾಗಿರುವುದು ಭಾರತೀಯರಲ್ಲಿ ಹರ್ಷ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com