ಭಗವದ್ಗೀತೆಯ ಶ್ಲೋಕವನ್ನು ಟ್ವೀಟ್ ಮಾಡುವ ಮೂಲಕ ಜಗ್ಗೇಶ್ ಗೆ ಟಾಂಗ್ ನೀಡಿದ ರಮ್ಯಾ
ಬೆಂಗಳೂರು: ಎಂಟಾಣೆ ಜ್ಞಾನ, ಅನುಭವ ಇಲ್ಲದವರು ಪಾಕಿಸ್ತಾನವನ್ನು ಹೊಗಳುತ್ತಾರೆ ಎಂದು ರಮ್ಯಾಗೆ ಟಾಂಗ್ ನೀಡಿದ್ದ ನಟ ಜಗ್ಗೇಶ್ ಗೆ ರಮ್ಯಾ ಭಗವದ್ಗೀತೆಯ ಶ್ಲೋಕವನ್ನು ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.
ರಮ್ಯಾ ತಮ್ಮ ಟ್ವೀಟರ ನಲ್ಲಿ ಕೋಪವು ಭ್ರಮೆ ಅಥವಾ ಹತಾಶೆಯನ್ನು ಸೂಚಿಸುತ್ತದೆ. ಈ ಕೋಪದಿಂದ ಉಂಟಾಗುವ ಭ್ರಮೆಗಳು ವ್ಯಕ್ತಿಯ ಮನಸ್ಸು ಸಮತೋಲನ ಕಳೆದುಕೊಳ್ಳುವಂತೆ ಮಾಡಿ ಗೊಂದಲಕ್ಕೀಡು ಮಾಡುತ್ತವೆ. ಆಗ, ಆ ಮನಸ್ಸು ಸರಿ-ತಪ್ಪುಗಳನ್ನು ನಿರ್ಧರಿಸುವ ವಿವೇಚನೆಯನ್ನೂ ಕಳೆದುಕೊಳ್ಳುತ್ತದೆ ಎಂದು ರಮ್ಯಾ ಟಾಂಗ್ ನೀಡಿದ್ದಾರೆ.
ನಿನ್ನೆ ಎಬಿವಿಪಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಜಗ್ಗೇಶ್ ಮಾತನಾಡಿ ಶತ್ರು ದೇಶವನ್ನು ರಮ್ಯಾ ಹೊಗಳಿದ್ದು ನಮ್ಮೊಳಗೆ ಬೆಂಕಿ ಉರಿಯುವಂತೆ ಮಾಡಿದೆ. ಕೇವಲ ಮತ ಬ್ಯಾಂಕ್ ಗಾಗಿ ದೇಶ ವಿರೋಧಿ ಹೇಳಿಕೆ ನೀಡಬೇಡಿ. ನಿಮ್ಮಂತವರ ಅವಶ್ಯಕತೆ ಭಾರತಕ್ಕಿಲ್ಲ ಎಂದು ಕಿಡಿಕಾರಿದ್ದರು. ಅಲ್ಲದೆ ಎಂಟಾಣೆ ಅಕ್ಷರ ಜ್ಞಾನ ಇಲ್ಲದವರೂ ಪಾಕಿಸ್ತಾನವನ್ನು ಹೊಗಳುತ್ತಾರೆ ಎಂದು ಹೇಳಿದ್ದರು.
ಪಾಕಿಸ್ತಾನಕ್ಕೆ ಹೋಗುವುದು, ನರಕಕ್ಕೆ ಹೋಗುವುದು ಎರಡೂ ಒಂದೇ ಎಂದು ಹೇಳಿದ್ದ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ ಟಾಂಗ್ ನೀಡುವ ಭರದಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು, ಪಾಕಿಸ್ತಾನ ನರಕ ಅಲ್ಲ. ಅಲ್ಲಿನ ಜನ ತುಂಬಾ ಒಳ್ಳೆಯವರು ಎಂದು ಹೊಗಳಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ