ಪಾಕ್ ಪರ ಹೇಳಿಕೆ ವಿವಾದ, ನಾನು ಕ್ಷಮೆ ಕೇಳಲ್ಲ: ನಟಿ ರಮ್ಯಾ ಸ್ಪಷ್ಟನೆ

ಪಾಕಿಸ್ತಾನ ನರಕ ಅಲ್ಲ, ಅಲ್ಲಿನ ಜನ ತುಂಬಾ ಒಳ್ಳೆಯವರು ಎಂದ ಹೇಳಿಕೆ ನೀಡಿ ಜನರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ನಟಿ, ಮಾಜಿ ಸಂಸದೆ ರಮ್ಯಾ ಅವರು ತಮ್ಮ...
ರಮ್ಯಾ
ರಮ್ಯಾ

ಬೆಂಗಳೂರು: ಪಾಕಿಸ್ತಾನ ನರಕ ಅಲ್ಲ, ಅಲ್ಲಿನ ಜನ ತುಂಬಾ ಒಳ್ಳೆಯವರು ಎಂಬ ಹೇಳಿಕೆ ನೀಡಿ ಜನರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ನಟಿ, ಮಾಜಿ ಸಂಸದೆ ರಮ್ಯಾ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳುವ ಇರಾದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನಕ್ಕೆ ತೆರಳಿದ್ದ ನಾನು ಅಲ್ಲಿನ ಅನುಭವದ ಬಗ್ಗೆ ಮಾತನಾಡಿದ್ದೇ ಅಷ್ಟೇ. ನಾನು ಪಾಕಿಸ್ತಾನದ ಪರವಾಗಿ ಮಾತನಾಡಿಲ್ಲ. ಮಾಧ್ಯಮದವರು ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿದ್ದೆ. ಹೀಗಾಗಿ ನಾನು ನನ್ನು ಹೇಳಿಕೆ ಸಂಬಂಧ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ಹೇಳುವ ಹಕ್ಕಿದೆ. ಪಾಕ್ ಬಗ್ಗೆ ಹೇಳಿಕೆ ನನ್ನ ವೈಯಕ್ತಿಕ ಅಭಿಪ್ರಾಯ. ಬೇರೆಯವರು ಪಾಕಿಸ್ತಾನವನ್ನು ವಿರೋಧಿಸುತ್ತಾರೆ ಅಂತ ಎಲ್ಲರೂ ಒಂದೇ ಸಿದ್ದಾಂತಕ್ಕೆ ಅನುಗುಣವಾಗಿರಬೇಕಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನ ಪರ ಹೇಳಿಕೆ ಹಿನ್ನೆಲೆ ರಮ್ಯಾ ವಿರುದ್ಧ ದೇಶದ್ರೋಹ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಲಾಗಿದ್ದು, ನನ್ನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವ ಮೂಲಕ ಬಿಜೆಪಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ರಮ್ಯಾ ಹೇಳಿಕೆ ವಿರುದ್ಧ ಕೊಡಗು ಪ್ರಗತಿ ರಂಗದ ಜಿಲ್ಲಾಧ್ಯಕ್ಷ ಹಾಗೂ ವಕೀಲ ವಿಠಲ ಗೌಡ ಅವರು ಜೆಎಂಎಫ್ ಸಿ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದು, ದೂರು ಅಂಗೀಕರಿಸಿರುವ ಕೋರ್ಟ್ ಆಗಸ್ಟ್ 27ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಪಾಕಿಸ್ತಾನಕ್ಕೆ ಹೋಗುವುದು ನರಕಕ್ಕೆ ಹೋಗುವುದಕ್ಕೆ ಸಮಾನ ಎಂದು ಹೇಳಿದ್ದ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಗೆ ಟಾಂಗ್ ಕೊಡುವ ಭರದಲ್ಲಿ ಪಾಕ್ ಪರ ಹೊಗಳಿಕೆಯ ಮಾತುಗಳನ್ನಾಡಿ ರಮ್ಯಾ ವಿವಾದಕ್ಕೆ ಸಿಲುಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com