ಮನೋಹರ್ ಪರಿಕ್ಕರ್ ಹಾಗೂ ಆ್ಯಷ್ಟನ್ ಕಾರ್ಟರ್ (ಸಂಗ್ರಹ ಚಿತ್ರ)
ಮನೋಹರ್ ಪರಿಕ್ಕರ್ ಹಾಗೂ ಆ್ಯಷ್ಟನ್ ಕಾರ್ಟರ್ (ಸಂಗ್ರಹ ಚಿತ್ರ)

ಭಾರತೀಯ ಸೇನಾ ನೆಲೆಗೆ ಬಲ ನೀಡಲಿರುವ ಅಮೆರಿಕ ಪಡೆಗಳು!

ಭಾರತೀಯ ಸೇನಾ ನೆಲೆಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಕೇಂದ್ರ ರಕ್ಷಣ ಸಚಿವ ಮನೋಹರ್ ಪರಿಕ್ಕರ್ ಅವರು ಅಮೆರಿಕದೊಂದಿಗೆ ಸೇರಿ ಮಹತ್ವದ ಭದ್ರತಾ ವ್ಯವಸ್ಥಾಪನಾ ವಿನಿಮಯ ಒಪ್ಪಂದಕ್ಕೆ ಸಹಿ..

ವಾಷಿಂಗ್ಟನ್‌: ಭಾರತೀಯ ಸೇನಾ ನೆಲೆಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಕೇಂದ್ರ ರಕ್ಷಣ ಸಚಿವ ಮನೋಹರ್ ಪರಿಕ್ಕರ್ ಅವರು ಅಮೆರಿಕದೊಂದಿಗೆ ಸೇರಿ ಮಹತ್ವದ ಭದ್ರತಾ  ವ್ಯವಸ್ಥಾಪನಾ ವಿನಿಮಯ ಒಪ್ಪಂದಕ್ಕೆ ಸಹಿ, ನೂತನ ಒಪ್ಪಂದದ ಅನ್ವಯ ಇನ್ನು ಮುಂದೆ ಅಮೆರಿಕ ಭಾರತೀಯ ಸೇನಾ ನೆಲೆಗಳನ್ನು ಬಳಕೆ ಮಾಡಲು ಅವಕಾಶ ನೀಡಿದಂತಾಗಿದೆ.

ಕೇವಲ ಭಾರತ ಮಾತ್ರವಲ್ಲದೇ ಅಮೆರಿಕದ ಸೇನಾ ನೆಲೆಗಳನ್ನು ಕೂಡ ಭಾರತ ಬಳಕೆ ಮಾಡಿಕೊಳ್ಳವ ಅವಕಾಶವನ್ನು ಈ ಮಹತ್ವದ ಒಪ್ಪಂದ ಕಲ್ಪಿಸಿದ್ದು, ಇಂಧನ, ಸರಕು ಸಾಮಗ್ರಿ  ಮರುಭರ್ತಿ ಹಾಗೂ ದುರಸ್ತಿಯಂತಹ ಚಟುವಟಿಕೆಗಳಿಗಾಗಿ ಪರಸ್ಪರರ ಸೇನಾ ನೆಲೆಗಳು ಮತ್ತು ಸ್ವತ್ತನ್ನು ಉಭಯ ದೇಶಗಳು ಬಳಸಿಕೊಳ್ಳ ಬಹುದಾಗಿದೆ. ಈ ನೂತನ ಒಪ್ಪಂದದ ಅನ್ವಯ  ಇನ್ನು ಮುಂದೆ ಭಾರತದ ಸೇನಾ ನೆಲೆಗಳನ್ನು ಅಮೆರಿಕ ತನ್ನ ಕಾರ್ಯಚಟುವಟಿಕೆಗಳಿಗೆ ಬಳಸಿಕೊಳ್ಳಲು ಹಾದಿ ಸುಗಮವಾದಂತಾಗಿದೆ.

ಸೋಮವಾರ ಅಮೆರಿಕಕ್ಕೆ ಪ್ರಯಾಣ ಮಾಡಿದ್ದ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಮಂಗಳವಾರ ಅಮೆರಿಕ ರಕ್ಷಣಾ ಕಾರ್ಯದರ್ಶಿ ಆ್ಯಷ್ಟನ್ ಕಾರ್ಟರ್ ರನ್ನು ಭೇಟಿ ಮಾಡಿ  ಉದ್ದೇಶಿತ ಭದ್ರತಾ ವ್ಯವಸ್ಥಾಪನಾ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿದರು. ಇನ್ನು ಅಮೆರಿಕ ಪ್ರಮುಖ ಎದುರಾಳಿ ರಷ್ಟಾ ಹಾಗೂ ಭಾರತದ ಎದುರಾಳಿ ಚೀನಾ ಹಾಗೂ ಪಾಕಿಸ್ತಾನಕ್ಕೆ ಈ  ನೂತನ ಒಪ್ಪಂದ ದೊಡ್ಡ ತಲೆನೋವಾಗುವ ಸಾಧ್ಯತೆಗಳಿದ್ದು, ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಉಭಯ ದೇಶಗಳ ತಮ್ಮ ಸಾಂಪ್ರದಾಯಿಕ ಎದುರಾಳಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿವೆ.

ಪರಿಕ್ಕರ್ ಗೆ ಪೆಂಟಗನ್ ಅತ್ಯುನ್ನತ ಗೌರವ

ಇದೇ ವೇಳೆ ಅಮೆರಿಕದ ರಕ್ಷಣಾ ಕಾರ್ಯಾಲಯ ಪೆಂಟಗನ್ ಭೇಟಿ ನೀಡಿದ್ದ ಮನೋಹರ್ ಪರಿಕ್ಕರ್ ಅವರಿಗೆ ಅಲ್ಲಿನ ಅತ್ಯುನ್ನತ ಗೌರವ ನೀಡಲಾಯಿತು. ಅತ್ಯುನ್ನತ ಗೌರವ ಪಡೆಯಲಿರುವ  ಪರಿಕ್ಕರ್ ಅವರನ್ನು ಗಣ್ಯರ ರಾಷ್ಟ್ರಗೀತೆ ನುಡಿಸುವ ಮೂಲಕ ಸ್ವಾಗತಿಸಲಾಯಿತು.

Related Stories

No stories found.

Advertisement

X
Kannada Prabha
www.kannadaprabha.com