ನೋಟು ಹಿಂಪಡೆತ ನಿರ್ಧಾರ ವಿಚಿತ್ರ; ಪ್ರಯೋಜನ ಅಸ್ಪಷ್ಟ: ನೊಬೆಲ್ ಪ್ರಶಸ್ತಿ ವಿಜೇತ ಕ್ರುಗ್ಮನ್
ಕೇಂದ್ರ ಸರ್ಕಾರದ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರ ವಿಚಿತ್ರ ಎಂದು ಶುಕ್ರವಾರ ಬಣ್ಣಿಸಿರುವ ನೊಬೆಲ್ ಪ್ರಶಸ್ತಿ ವಿಜೇತ ಅಮೆರಿಕಾದ ಆರ್ಥಿಕತಜ್ಞ ಪಾಲ್ ಕ್ರುಗ್ಮನ್
ನೊಬೆಲ್ ಪ್ರಶಸ್ತಿ ವಿಜೇತ ಅಮೆರಿಕಾದ ಆರ್ಥಿಕತಜ್ಞ ಪಾಲ್ ಕ್ರುಗ್ಮನ್
ನವದೆಹಲಿ: ಕೇಂದ್ರ ಸರ್ಕಾರದ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರ ವಿಚಿತ್ರ ಎಂದು ಶುಕ್ರವಾರ ಬಣ್ಣಿಸಿರುವ ನೊಬೆಲ್ ಪ್ರಶಸ್ತಿ ವಿಜೇತ ಅಮೆರಿಕಾದ ಆರ್ಥಿಕತಜ್ಞ ಪಾಲ್ ಕ್ರುಗ್ಮನ್ ಇದರಿಂದ ಯಾವುದೇ ಗಣನೀಯ ಲಾಭ ಇರುವುದು ಕಾಣಿಸುವುದಿಲ್ಲ ಎಂದಿದ್ದಾರೆ.
ಹಿಂದುಸ್ತಾನ್ ಟೈಮ್ಸ್ ಶೃಂಗಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕ್ರುಗ್ಮನ್ "ಇದನ್ನು ಬಹಳ ವಿಚಿತ್ರ ಎಂದು ಬಣ್ಣಿಸಬಹುದು" ಎಂದಿದ್ದಾರೆ. "ಕಾನೂನುಬಾಹಿರವಾಗಿ ಶೇಖರಿಸಿರುವ ನಗದಿನ ತೊಂದರೆ ನಿವಾರಿಸಲು ಇದು ಬಹಳ ಹಾನಿಕಾರಕ ನಿರ್ಧಾರದನಂತೆ ಕಾಣುತ್ತಿದೆ ಮತ್ತು ಇದರಿಂದ ಹೊರಹೊಮ್ಮುವ ಯಾವುದೇ ದೀರ್ಘ ಕಾಲದ ಪ್ರಯೋಜನಗಳು ಸ್ಪಷ್ಟವಾಗಿಲ್ಲ" ಎಂದು ಅವರು ಹೇಳಿದ್ದಾರೆ.
"ಒಂದು ವರ್ಷದ ನಂತರ" ಪರಿಸ್ಥಿತಿ ಮರುಕಳಿಸಲಿದ್ದು ಜನ ಮತ್ತೆ ಕಾನೂನುಬಾಹಿರವಾಗಿ ನಗದನ್ನು ಶೇಖರಿಸಿಕೊಳ್ಳುವ ಮಾರ್ಗಗಳನ್ನು ಹುಡುಕಿಕೊಳ್ಳಲಿದ್ದಾರೆ ಎಂದು ಕೂಡ ಅವರು ಹೇಳಿದ್ದಾರೆ.
ಆದರೆ ಈ ನಿರ್ಧಾರ ಕೆಲವು ಜನರ ವರ್ತನೆಯಲ್ಲಿ ಒಂದು ಶಾಶ್ವತ ಬದಲಾವಣೆ ತರಬಹುದಾದ ಸಾಧ್ಯತೆ ಇದ್ದು, ಇನ್ನು ಮುಂದೆ ಅವರು ಅನಧಿಕೃತ ನಗದಲ್ಲಿ ವ್ಯವಹರಿಸುವಾಗ ಬಹಳ ಎಚ್ಚರಿಕೆಯಿಂದ ಮತ್ತು ಸಂಕೀರ್ಣತೆಯಿಂದ ಕೆಲಸ ಮಾಡುವ ಸಾಧ್ಯತೆ ಇದೆ ಎಂದು ಕೂಡ ಅವರು ಹೇಳಿದ್ದಾರೆ.