
ಚೆನ್ನೈ: ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಭಾರಿ ಆತಂಕ ಸೃಷ್ಟಿಸಿರುವ ವರ್ಧಾ ಚಂಡಮಾರುತಕ್ಕೆ ಹೆಸರು ನೀಡಿದ್ದು ಪಾಕಿಸ್ತಾನ ಎಂಬ ಕುತೂಹಲಕಾರಿ ಅಂಶ ಬೆಳಕಿದೆ ಬಂದಿದೆ.
ಸಾಮಾನ್ಯವಾಗಿ ಹಿಂದೂ ಮಹಾಸಾಗರದಲ್ಲಿ ಸಂಭವಿಸುವ ಚಂಡಮಾರುತಗಳಿಗೆ ಅದರ ಸದಸ್ಯ ರಾಷ್ಟ್ರಗಳು ಹೆಸರು ನೀಡುತ್ತವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಥೈಲ್ಯಾಂಡ್, ಮಯನ್ಮಾರ್, ಮಾಲ್ಡೀವ್ಸ್ ಮತ್ತು ಒಮನ್ ದೇಶಗಳು ಸದಸ್ಯ ರಾಷ್ಟ್ರಗಳಾಗಿದ್ದು, ಪ್ರಸ್ತುತ ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ವರ್ಧಾ ಚಂಡಮಾರುತಕ್ಕೆ ಪಾಕಿಸ್ತಾನ ಹೆಸರು ನೀಡಿತ್ತು ಎಂದು ತಿಳಿದುಬಂದಿದೆ. ಕಳೆದ ಬಾರಿ ಚೆನ್ನೈಗೆ ಅಪ್ಪಳಿಸಿದ್ದ ನಾಡಾ ಚಂಡಮಾರುತಕ್ಕೆ ಒಮನ್ ಹೆಸರು ನೀಡಿತ್ತು.
ವರ್ಧಾ ಎಂದರೆ ಕೆಂಪು ಗುಲಾಬಿ ಎಂಬ ಅರ್ಥವಿದೆ.
Advertisement