ಮುರುಘಾ ಮಠ ಶ್ರೀಗಳ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

ಮಠದ ಆಸ್ತಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಲ್ಲಿ ಗೈರು ಹಾಜರಾದ ಪರಿಣಾಮ ಮುರುಘಾಮಠದ ಶ್ರೀ ಡಾ.ಶಿವಮೂರ್ತಿ ಸ್ವಾಮೀಜಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ...
ಮುರಘಾ ಮಠದ ಶ್ರೀ ಡಾ.ಶಿವಮೂರ್ತಿ ಸ್ವಾಮೀಜಿಗಳು (ಸಂಗ್ರಹ ಚಿತ್ರ)
ಮುರಘಾ ಮಠದ ಶ್ರೀ ಡಾ.ಶಿವಮೂರ್ತಿ ಸ್ವಾಮೀಜಿಗಳು (ಸಂಗ್ರಹ ಚಿತ್ರ)

ಬೆಂಗಳೂರು: ಮಠದ ಆಸ್ತಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಲ್ಲಿ ಗೈರು ಹಾಜರಾದ ಪರಿಣಾಮ ಮುರುಘಾಮಠದ ಶ್ರೀ ಡಾ.ಶಿವಮೂರ್ತಿ ಸ್ವಾಮೀಜಿಗಳ ವಿರುದ್ಧ ಜಾಮೀನು ರಹಿತ  ವಾರಂಟ್ ಜಾರಿಯಾಗಿದೆ.

ಮುರುಘಾ ಮಠಕ್ಕೆ ಸೇರಿದ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪ ಸಂಬಂಧ ದಾಖಲಾಗಿದ್ದ ಪ್ರಕರಣದ ವಿಚಾರಣೆಗೆ ಶ್ರೀಗಳು ಗೈರು ಹಾಜರಾಗಿದ್ದರಿಂದ ಅವರ ವಿರುದ್ಧ  ಬೆಂಗಳೂರಿನ 4ನೇ ಎಸಿಎಂಎಂ ಕೋರ್ಟ್ ಮಂಗಳವಾರ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

ಈ ಹಿಂದೆ ಮುರುಘಾ ಮಠಕ್ಕೆ ಸೇರಿದೆ ಎನ್ನಲಾದ ಕೆಂಗೇರಿಯ ಸೂಲಿಕೆರೆಯಲ್ಲಿನ 7ಎಕರೆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆಂದು ಆರೋಪಿಸಿ ಪಿಎಸ್ ಪ್ರಕಾಶ್ ಎಂಬವರು  ದೂರು ದಾಖಲಿಸಿದ್ದರು. ಈ ಬಗ್ಗೆ ಪೊಲೀಸರು ಆರೋಪಪಟ್ಟಿ ಕೂಡಾ ಸಲ್ಲಿಸಿದ್ದರು. ಆದರೆ ಮಂಗಳವಾರ ನಡೆದ ವಿಚಾರಣೆಗೆ ಡಾ.ಶಿವಮೂರ್ತಿ ಮುರುಘಾ ಶರಣರು ಗೈರಾಗಿದ್ದರು. ಈ  ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com