ಅನಿಲ್ ಅಂಬಾನಿ
ಅನಿಲ್ ಅಂಬಾನಿ

ಬೆಂಗಳೂರಿನಲ್ಲಿ ಏರೋಸ್ಪೇಸ್ ರಿಸರ್ಚ್ ಸೆಂಟರ್ ಸ್ಥಾಪನೆ: ಅನಿಲ್ ಅಂಬಾನಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಏರೋಸ್ಪೇಸ್ ರಿಸರ್ಚ್ ಸೆಂಟರ್ ಆರಂಭಿಸುವುದಾಗಿ...
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಏರೋಸ್ಪೇಸ್ ರಿಸರ್ಚ್ ಸೆಂಟರ್ ಆರಂಭಿಸುವುದಾಗಿ ರಿಲಯನ್ಸ್ ಗ್ರೂಫ್ ಅಧ್ಯಕ್ಷ ಅನಿಲ್ ಅಂಬಾನಿ ಬುಧವಾರ ಹೇಳಿದ್ದಾರೆ.
ಇಂದು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಾತನಾಡಿದ ಅಂಬಾನಿ, ಸಿಲಿಕಾನ್ ಸಿಟಿಯ ವೈಟ್ ಫೀಲ್ಡ್ ನಲ್ಲಿ ದಿ.ಧೀರೂಭಾಯಿ ಅಂಬಾನಿ ಅವರ ಹೆಸರಿನಲ್ಲಿ ಏರೋಸ್ಪೇಸ್ ರಿಸರ್ಚ್ ಸೆಂಟರ್ ಸ್ಥಾಪಿಸುವುದಾಗಿ ತಿಳಿಸಿದರು,
ಈ ರಿಸರ್ಚ್ ಸೆಂಟರ್ ದೇಶದ ಮೊದಲ ಖಾಸಗಿ ಸಂಶೋಧನಾ ಕೇಂದ್ರವಾಗಲಿದ್ದು, ಇದರಿಂದ ಸುಮಾರು 1500 ಇಂಜಿನಿಯರ್ ಗಳಿಗೆ ಉದ್ಯೋಗ ಸಿಗಲಿದೆ ಎಂದು ಉದ್ಯಮಿ ಅನಿಲ್ ಅಂಬಾನಿ ಹೇಳಿದರು,
ಇದೇ ವೇಳೆ ಮಾತನಾಡಿದ ಖ್ಯಾತ ಉದ್ಯಮಿ ಕುಮಾರಮಂಗಲಂ ಬಿರ್ಲಾ ಅವರು, ಹರಿಹರದಲ್ಲಿ 1 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ಸಿಮೆಂಟ್ ಉದ್ಯಮ ಸ್ಥಾಪಿಸುವುದಾಗಿ ತಿಳಿಸಿದರು.
ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇಂದು ಬೆಳಗ್ಗೆ ಚಾಲನೆ ನೀಡಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತ್ ಕುಮಾರ್, ಕೈಗಾರಿಕಾ ಸಚಿವ ಆರ್. ವಿ.ದೇಶಪಾಂಡೆ ಹಾಗೂ ಉದ್ಯಮಿ ರತನ್ ಟಾಟಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Related Stories

No stories found.

Advertisement

X

Advertisement

X
Kannada Prabha
www.kannadaprabha.com