ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಗೆ ಚಿಕಿತ್ಸೆ ನೀಡಲು ಹಣ ಕಟ್ಟಿ ಎಂದ ವೈದ್ಯರು!

ಇತ್ತೀಚಿನ ದಿನಗಳಲ್ಲಿ ಪ್ರಾಣಕ್ಕಿಂತ ಹಣಕ್ಕೆ ಬೆಲೆಯೇ ಜಾಸ್ತಿ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದಿರುವ ಈ ಘಟನೆಯೇ ಉದಾಹರಣೆ ಎನ್ನಬಹುದು. ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯೊಬ್ಬಳಿಗೆ ಪೋಷಕರು ಚಿಕಿತ್ಸೆ ಕೊಡಿಸಲು ಪರದಾಡಿರುವ ಘಟನೆಯೊಂದು...
ಹಣಕಟ್ಟಿ ಚಿಕಿತ್ಸೆ ಕೊಡ್ತೀವಿ ಎಂದ ವೈದ್ಯರು! (ಸಾಂದರ್ಭಿಕ  ಚಿತ್ರ)
ಹಣಕಟ್ಟಿ ಚಿಕಿತ್ಸೆ ಕೊಡ್ತೀವಿ ಎಂದ ವೈದ್ಯರು! (ಸಾಂದರ್ಭಿಕ ಚಿತ್ರ)

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರಾಣಕ್ಕಿಂತ ಹಣಕ್ಕೆ ಬೆಲೆಯೇ ಜಾಸ್ತಿ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದಿರುವ ಈ ಘಟನೆಯೇ ಉದಾಹರಣೆ ಎನ್ನಬಹುದು. ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯೊಬ್ಬಳಿಗೆ ಪೋಷಕರು ಚಿಕಿತ್ಸೆ ಕೊಡಿಸಲು ಪರದಾಡಿರುವ ಘಟನೆಯೊಂದು ನಗರದ ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಶನಿವಾರ ನಡೆದಿದೆ.

ನಿನ್ನೆ ಬೆಳಿಗ್ಗೆ ಆದಾವ ಕಾರಣಕ್ಕೋ ಏನೋ 13 ವರ್ಷದ ಭಾರ್ಗವಿ ಎಂಬ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಂತರ ಆಕೆಯನ್ನು ಪೋಷಕರು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಕರೆತಂದಿದ್ದಾರೆ. ಬಾಲಕಿಯನ್ನು ದಾಖಲಿಸಿಕೊಂಡ ವೈದ್ಯರು ಆಕೆಗೆ ನೀಡಬೇಕಿದ್ದ ಪ್ರಥಮ ಚಿಕಿತ್ಸೆಯನ್ನು ನೀಡಿದ್ದಾರೆ.

ಕೆಲವು ಗಂಟೆಗಳಾದ ಮೇಲೆ ಬಾಲಕಿಯನ್ನು ಕೆಲವು ಪರೀಕ್ಷೆಗೆ ಕಳುಹಿಸಿರುವ ವೈದ್ಯರು ನಂತರ ಮುಂಗಡ ಙಮವನ್ನು ಪಾವತಿ ಮಾಡದೆ ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ 3-4 ತಾಸುಗಳ ಕಾಲ ಸತಾಯಿಸಿದ್ದಾರೆ. ಅಲ್ಲದೆ, ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡುವಂತೆ ತಿಳಿಸಿದ್ದಾರೆ.

ನಂತರ ಬಾಲಕಿಗೆ ವೆಂಟಿಲೇಟರ್ ಅಗತ್ಯವಿರುವುದರಿಂದ ಸಿಬ್ಬಂದಿಗಳು 30 ಸಾವಿರ ಹಣವನ್ನು ಕಟ್ಟುವಂತೆ ತಿಳಿಸಿದ್ದಾರೆ. ಹೀಗಾಗಿ ಪೋಷಕರು 108 ಆ್ಯಂಬುಲೆನ್ಸ್ ಗೆ ಕರೆಮಾಡಿದ್ದಾರೆ. ಕರೆ ಮಾಡಿ 2 ತಾಸು ಕಳೆದ ನಂತರ ವೆಂಟಿಲೇಟರ್ ಇಲ್ಲದೆಯೇ ಆ್ಯುಂಬುಲೆನ್ಸ್ ಬಂದಿತ್ತು. ನಂತರ ಆಡಳಿತ ಮಂಡಳಿಯವರು ವೆಂಟಿಲೇಟರ್ ಇರುವ ಆ್ಯಂಬುಲೆನ್ಸ್'ನ್ನು ಕಳುಹಿಸುತ್ತೇವೆಂದು ಹೇಳಿದರು ಆದರೆ ಯಾವುದೇ ವಾಹನ ಬರಲಿಲ್ಲ ಎಂದು ಬಾಲಕಿಯ ತಾಯಿ ಹೇಳಿಕೊಂಡಿದ್ದಾರೆ.

ಬಾಲಕಿಯ ತಾಯಿ ಕೇಳಿಕೊಂಡಿದ್ದರು ಆಸ್ಪತ್ರೆಯ ಸಿಬ್ಬಂದಿಗಳು ಯಾವುದೇ ಸ್ಪಂದನೆ ನೀಡಿಲ್ಲ. ನಂತರ ಮಾಧ್ಯಮದವರು ಆಸ್ಪತ್ರೆಗೆ ಹೋದ ಮೇಲೆ ವೈದ್ಯರು ಎಚ್ಚೆತ್ತುಕೊಂಡು ಚಿಕಿತ್ಸೆ ನೀಡಿದ್ದಾರೆ. ಬಾಲಕಿಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ವೈದ್ಯರು ಮತ್ತೊಂದು ಆಸ್ಪತ್ರೆಗೆ ರವಾನೆ ಮಾಡುವಂತೆ ಸಲಹೆ ನೀಡಿದ್ದಾರೆ. ಇದರಿಂದ ತೀವ್ರವಾಗಿ ಕೆಂಡಾಮಂಡಲವಾಗಿರುವ ಬಾಲಯಿ ತಾಯಿ ಸಾಧ್ಯವಿಲ್ಲ ಎಂದು ಹೇಳಿ ಆಸ್ಪತ್ರೆಯ ಆವರಣದಲ್ಲೇ ಪ್ರತಿಭಟನೆ ಮಾಡಿದ್ದಾರೆ. ನಂತರ ಸುದ್ದಿ ತಿಳಿದ ವಿವೇಕನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಆ್ಯಂಬುಲೆನ್ಸ್ ಕಾರ್ಯ ವೈಫಲ್ಯ ಕುರಿತಂತೆ ಮಾತನಾಡಿರುವ 108 ಆ್ಯಂಬುಲೆನ್ಸ್ ಸೇವೆ ಹಿರಿಯ ವ್ಯವಸ್ಥಾಪಕ ಎಸ್.ಎಸ್.ಪರ್ವೇಜ್ ಅವರು, ಆ ಸಮಯದಲ್ಲಿ ಎಲ್ಲಾ ಆ್ಂಯಬುಲೆನ್ಸ್ ಗಳು ಕಾರ್ಯ ನಿರ್ವಹಿಸುತ್ತಿದ್ದವು. ವೆಂಟಿಲೇಟರ್ ಇರುವ ಆ್ಂಯುಬುಲೆನ್ಸ್ ಗಳ ಸೇವೆಯನ್ನು ನೋಡುಕೊಳ್ಳುತ್ತಿರುವುದು ವಿವೇಕನಗರದ ಹೆಚ್ಎಸ್ಆರ್ ಲೇಔಟ್ ನಲ್ಲಿ ಎಂದು ಹೇಳಿದ್ದಾರೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸೇಂಟ್ ಫಿಲೋಮಿನಾ ಆಸ್ಪತ್ರೆಯ ವೈದ್ಯ ಡಾ.ಶಂಕರ್ ಪ್ರಸಾದ್ ಅವರು, ಬಾಲಕಿಯನ್ನು ಆಸ್ಪತ್ರೆಗೆ ಕರೆತರುತ್ತಿದ್ದಂತೆ ಆಕೆಗೆ ಹೃದಯ ಮತ್ತು ಶ್ವಾಸಕೋಶ ಪ್ರಚೋದಕ ಚಿಕಿತ್ಸೆಯನ್ನು ನೀಡಲಾಗಿತ್ತು. ಅಲ್ಲದೆ, ಸಿಟಿ ಸ್ಕ್ಯಾನ್'ನ್ನು ಮಾಡಿಸಲಾಗಿತ್ತು. ಬಾಲಕಿ ಆಸ್ಪತ್ರೆಗೆ ಬಂದಾಗ ನಾಡಿ ಮಿಡಿತವೇ ಇರಲಿಲ್ಲ. ನಂತರ ಆಕೆಗೆ ಚಿಕಿತ್ಸೆ ನೀಡಿ ಬದುಕಿಸಲಾಗಿತ್ತು. ನಂತರ ಆಕೆಗೆ ವೆಂಟಿಲೇಟರ್ ಅಗತ್ಯವಿದ್ದರಿಂದ ಪೋಷಕರಿಗೆ ತಿಳಿಸಲಾಗಿತ್ತು. ಬಾಲಕಿಯ ಪೋಷಕರ ಆಯ್ಕೆಯಂತೆಯೇ ವೆಂಟಿಲೇಟರ್ ಇರುವ ಆ್ಯಂಬುಲೆನ್ಸ್ ಕಳುಹಿಸಿಕೊಡಲಾಗಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com