ನಗರದಲ್ಲಿ ದುಷ್ಕರ್ಮಿಗಳ ಪುಂಡಾಟ: 10 ಹೆಚ್ಚು ವಾಹನಗಳು ಜಖಂ (ಸಾಂದರ್ಭಿಕ ಚಿತ್ರ)
ಪ್ರಧಾನ ಸುದ್ದಿ
ನಗರದಲ್ಲಿ ದುಷ್ಕರ್ಮಿಗಳ ಪುಂಡಾಟ: 10ಕ್ಕೂಹೆಚ್ಚು ವಾಹನಗಳು ಜಖಂ
ಉದ್ಯಾನ ನಗರಿಯಲ್ಲಿ ದುಷ್ಕರ್ಮಿಗಳ ಅಟ್ಟಾಹಾಸ ಮತ್ತೆ ಮುಂದುವರೆದಿದ್ದು, ಮನೆಯೆದುರು ನಿಲ್ಲಿಸಿದ್ದ 10 ಹೆಚ್ಚು ವಾಹನಗಳ ಮೇಲೆ ದಾಳಿ ಮಾಡಿರುವ ಘಟನೆ ಬನಶಂಕರಿಯ ಪ್ರಗತಿಪುರದಲ್ಲಿ ಗುರುವಾರ ನಡೆದಿದೆ...
ಬೆಂಗಳೂರು: ಉದ್ಯಾನ ನಗರಿಯಲ್ಲಿ ದುಷ್ಕರ್ಮಿಗಳ ಅಟ್ಟಾಹಾಸ ಮತ್ತೆ ಮುಂದುವರೆದಿದ್ದು, ಮನೆಯೆದುರು ನಿಲ್ಲಿಸಿದ್ದ 10 ಹೆಚ್ಚು ವಾಹನಗಳ ಮೇಲೆ ದಾಳಿ ಮಾಡಿರುವ ಘಟನೆ ಬನಶಂಕರಿಯ ಪ್ರಗತಿಪುರದಲ್ಲಿ ಗುರುವಾರ ನಡೆದಿದೆ.
ಇಂದು ಬೆಳಿಗ್ಗೆ ಕಾರಿನಲ್ಲಿ ಬಂದು ದುಷ್ಕರ್ಮಿಗಳು ಗುಂಪೊಂದು ರಾಡ್ ತೆಗೆದುಕೊಂಡು ಮನೆಯೆದುರು ನಿಲ್ಲಿಸಲಾಗಿದ್ದ ವಾಹನಗಳ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಕಾರೊಂದರಲ್ಲಿ ಚಾಲಕನೊಬ್ಬ ಮಲಗಿದ್ದ ಕಾರಣ ಗುಂಪಿನ ಪುಂಡಾಟಿಕೆ ಕಂಡು ಕೂಗಿದ್ದಾನೆ. ಈ ವೇಳೆ ಚಾಲಕನಿಗೆ ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿ ತಮ್ಮ ಪುಂಡಾಟವನ್ನು ಮುಂದುವರೆಸಿದ್ದಾರೆ. ಘಟನೆಯಲ್ಲಿ ಕಾರು, ಆಟೋ, ಟೆಂಪೋ ಸೇರಿ 10 ವಾಹನಗಳು ಜಖಂಗೊಂಡಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಕುಮಾರಸ್ವಾಮಿ ಲೇ ಔಟ್'ನಲ್ಲಿ ಪ್ರಕರಣ ದಾಖಲಾಗಿತ್ತು, ಸ್ಥಳಕ್ಕಾಗಮಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿನ್ನೆ ಕೂಡ ಉತ್ತರಹಳ್ಳಿಯಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ದುಷ್ಕರ್ಮಿಗಳ ಗುಂಪೊಂದು ವಾಹನಗಳ ಮೇಲೆ ದಾಳಿ ಮಾಡಿ ಹಲವು ವಾಹನಗಳನ್ನು ಜಖಂಗೊಳಿಸಿದ್ದರು. ಇಂದು ಕೂಡ ಇದೇ ರೀತಿಯ ಘಟನೆ ಬನಶಂಕರಿಯಲ್ಲಿ ನಡೆದಿದ್ದು, ಎರಡೂ ಘಟನೆಗಳಲ್ಲೂ ಒಂದೇ ಗುಂಪಿನ ಕೈವಾಡಿವಿರುವುದಾಗಿ ಹಲವು ಶಂಕೆಗಳು ವ್ಯಕ್ತವಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ