ಉಪಲೋಕಾ ವಿರುದ್ಧ ಶೀಘ್ರ ದಾಖಲೆ ಸಲ್ಲಿಕೆ

ಇಷ್ಟು ದಿನ ತಣ್ಣಗಿದ್ದ ಉಪ ಲೋಕಾಯುಕ್ತ ನ್ಯಾ. ಸುಭಾಷ್ ಬಿ ಆಡಿ ವಿಚಾರ ಮತ್ತೆ ಸದ್ದು ಮಾಡಲಾರಂಭಿಸಿದೆ. ನ್ಯಾ.ಆಡಿ ಪದಚ್ಯುತಿ ಪ್ರಸ್ತಾವವನ್ನು ಇನ್ನೊಂದು ವಾರದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಸಲ್ಲಿಸಲಾಗುವುದು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ...
ಸ್ಪೀಕರ್ ಕಾಗೋಡು ತಿಮ್ಮಪ್ಪ (ಸಂಗ್ರಹ ಚಿತ್ರ)
ಸ್ಪೀಕರ್ ಕಾಗೋಡು ತಿಮ್ಮಪ್ಪ (ಸಂಗ್ರಹ ಚಿತ್ರ)

ಬೆಂಗಳೂರು: ಇಷ್ಟು ದಿನ ತಣ್ಣಗಿದ್ದ ಉಪ ಲೋಕಾಯುಕ್ತ ನ್ಯಾ. ಸುಭಾಷ್ ಬಿ ಆಡಿ ವಿಚಾರ ಮತ್ತೆ ಸದ್ದು ಮಾಡಲಾರಂಭಿಸಿದೆ. ನ್ಯಾ.ಆಡಿ ಪದಚ್ಯುತಿ ಪ್ರಸ್ತಾವವನ್ನು ಇನ್ನೊಂದು ವಾರದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಸಲ್ಲಿಸಲಾಗುವುದು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಈ ಮೂಲಕ ನ್ಯಾ. ಸುಭಾಷ್ ಅಡಿ ಅವರ ಪ್ರಸ್ತಾಪ ಸ್ವೀಕೃತವಾಗಿಲ್ಲ, ಅಂಗೀಕಾರವಾಗಿಲ್ಲ ಎಂಬ ಗೊಂದಲಗಳಿಗೆ ಅವರು ತೆರೆ ಎಳೆದಿದ್ದಾರೆ. ನ್ಯಾ. ಸುಭಾಷ್ ಬಿ ಆಡಿ ವಿರುದ್ಧ ಕೆಲ ಶಾಸಕರು ಸಹಿ ಸಂಗ್ರಹಿಸಿ ಸಲ್ಲಿಸಿರುವ ಮನವಿ ಸಂಬಂಧ ದಾಖಲೆಗಳ ಕಲೆ ಹಾಕಲಾಗಿದೆ. ವಾರದೊಳಗೆ ಹೈಕೋರ್ಟ್ ಮುಖ್ಯ ನ್ಯಾಯಮೂತಿರ್ ಗೆ ಪೂರಕ ದಾಖಲೆಗಳನ್ನು ಸಲ್ಲಿಸುವುದಾಗಿ ಕಾಗೋಡು ತಿಮ್ಮಪ್ಪ ಸುದ್ದಿಗಾರರಿಗೆ ವಿವರಿಸಿದರು.

ಜತೆಗೆ ನ್ಯಾ. ಆಡಿ ವಿರುದ್ಧದ ಆರೋಪದ ಸಂಬಂಧದ ದಾಖಲೆಗಳು ಲಭ್ಯವಾಗಿರುವುದರಿಂದ ಈ ಮಾಹಿತಿಗಳನ್ನು ಹೈಕೋರ್ಟ್‍ಗೆ ಸಲ್ಲಿಸುತ್ತೇವೆ. ಮುಖ್ಯ ನ್ಯಾಯಮೂರ್ತಿಗಳು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಬೆಂಗಳೂರಿನಲ್ಲೇ ಜಂಟಿ ಅಧಿವೇಶನ: ನೂತನ ವರ್ಷದ ಉಭಯ ಸದನಗಳ ಜಂಟಿ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಬೇಕೆಂಬ ವಿಚಾರದಲ್ಲಿ ಸರ್ಕಾರ ಯಾವುದೇ ನಿರ್ಧಾರ ಪ್ರಕಟಿಸಿಲ್ಲವಾದ್ದರಿಂದ ಬೆಂಗಳೂರಿ ನಲ್ಲೇ ನಡೆಸಲಾಗುವುದು. ಯಾವ ದಿನಾಂಕ ದಂದು ನಡೆಸಬೇಕು ಎಂಬುದರ ಬಗ್ಗೆ ಸರ್ಕಾರ ಸೂಚನೆ ನೀಡಲಿದೆ. ಒಂದು ವೇಳೆ ಜಿಪಂ, ತಾಪಂ ಚುನಾವಣೆ ಘೋಷಣೆ ಯಾದಲ್ಲಿ ಇಡೀ ಪ್ರಕ್ರಿಯೆ ಮುಗಿದ ಬಳಿಕ ಅಧಿವೇಶನ ನಡೆಸಲಾಗುವುದು ಎಂದು ತಿಮ್ಮಪ್ಪ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com