ಬೇರೆ ಯಾರೂ ಇಲ್ಲವೇ?: ದೇವೇಗೌಡ

ಲೋಕಾಯುಕ್ತ ಹುದ್ದೆಗೆ ನ್ಯಾ. ವಿಕ್ರಂಜಿತ್ ಸೆನ್ ಮತ್ತು ನ್ಯಾ. ಎಸ್.ಆರ್. ನಾಯಕ್ ಇಬ್ಬರ ಹೆಸರನ್ನೇ ಪ್ರತಿ ದಿನ ಸರ್ಕಾರ ಎಳೆದಾಡುತ್ತಿದೆ. ದೇಶದಲ್ಲಿ ಅವರಿಬ್ಬರನ್ನು ಹೊರತುಪಡಿಸಿ ಮತ್ಯಾರು ಗೌರವಾನ್ವಿತ..
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ (ಸಂಗ್ರಹ ಚಿತ್ರ)
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ (ಸಂಗ್ರಹ ಚಿತ್ರ)

ಬೆಂಗಳೂರು: ಲೋಕಾಯುಕ್ತ ಹುದ್ದೆಗೆ ನ್ಯಾ. ವಿಕ್ರಂಜಿತ್ ಸೆನ್ ಮತ್ತು ನ್ಯಾ. ಎಸ್.ಆರ್. ನಾಯಕ್ ಇಬ್ಬರ ಹೆಸರನ್ನೇ ಪ್ರತಿ ದಿನ ಸರ್ಕಾರ ಎಳೆದಾಡುತ್ತಿದೆ. ದೇಶದಲ್ಲಿ ಅವರಿಬ್ಬರನ್ನು ಹೊರತುಪಡಿಸಿ ಮತ್ಯಾರು ಗೌರವಾನ್ವಿತ ನ್ಯಾಯಮೂರ್ತಿಗಳು ಸಿಗುವುದಿಲ್ಲವೇ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.

"ಸಣ್ಣ ಪುಟ್ಟ ವಿಷಯವನ್ನೇ ದೊಡ್ಡದಾಗಿ ಮಾಡಿ ಅವರು ಲೋಕಾಯುಕ್ತರಾಗಲು ಅರ್ಹತೆ ಇಲ್ಲ ಎನ್ನುವ ರಾಜಕಾರಣಿಗಳ ಬಂಡವಾಳ ಮೊದಲು ತಿಳಿಸಲಿ. ಯಾರು ರಿಯಲ್ ಎಸ್ಟೇಟ್‍ನಲ್ಲಿ  ತೊಡಗಿಸಿಕೊಂಡಿದ್ದಾರೆ, ಮಿತಿಮೀರಿ ಆಸ್ತಿ ಮಾಡಿದ್ದಾರೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ದೇವೇಗೌಡರು ತಮ್ಮ ಮಾತಿನ ಛಾಟಿ ಬೀಸಿದರು. ನ್ಯಾಯಾಂಗ ವ್ಯವಸ್ಥೆಯಲ್ಲಿ  ತುಂಬಾ ಜನ ಗೌರವಾನ್ವಿತ ನ್ಯಾಯಮೂರ್ತಿಗಳು ಸಿಗುತ್ತಾರೆ. ಯಾರನ್ನು ಆಯ್ಕೆ ಮಾಡಿದರೂ ಸರಿಯೇ. ಆದರೆ ಸರ್ಕಾರ ಮತ್ತು ಬಿಜೆಪಿ ಕೇವಲ ವ್ಯಕ್ತಿಯೊಬ್ಬರಿಗೇ ಅಂಟಿಕೊಂಟಿರುವುದು ಸಲ್ಲದು  ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com