ಕರ್ನಾಟಕದ ದಾವಣಗೆರೆ-ಬೆಳಗಾವಿಗೆ ಮೊದಲ ಹಂತದ ಸ್ಮಾರ್ಟ್ ಸಿಟಿ ಭಾಗ್ಯ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆ ಮೊದಲ ಹಂತದಲ್ಲಿ ಕರ್ನಾಟಕದ ಆರು ಜಿಲ್ಲೆಗಳ ಪೈಕಿ ದಾವಣಗೆರೆ, ಬೆಳಗಾವಿ ನಗರಗಳ ಹೆಸರು...
ಸ್ಮಾರ್ಟ್ ಸಿಟಿ(ಸಾಂದರ್ಭಿಕ ಚಿತ್ರ)
ಸ್ಮಾರ್ಟ್ ಸಿಟಿ(ಸಾಂದರ್ಭಿಕ ಚಿತ್ರ)

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆ ಮೊದಲ ಹಂತದಲ್ಲಿ ಕರ್ನಾಟಕದ ಆರು ಜಿಲ್ಲೆಗಳ ಪೈಕಿ ದಾವಣಗೆರೆ, ಬೆಳಗಾವಿ ನಗರಗಳ ಹೆಸರು ಘೋಷಣೆಯಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಗೆ ದೇಶದ 20 ನಗರಗಳ ಹೆಸರನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ನಿನ್ನೆ ಸಮಾರಂಭವೊಂದರಲ್ಲಿ ಮಾತನಾಡಿದ್ದ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಮೊದಲ ಹಂತದ ಸ್ಮಾರ್ಟ್ ಸಿಟಿಗಳ ಹೆಸರನ್ನು ಗುರುವಾರ ಪ್ರಕಟಿಸುವುದಾಗಿ ತಿಳಿಸಿದ್ದರು.

ಸ್ಮಾರ್ಟ್‌ಸಿಟಿ ಯೋಜನೆಗೆ ಕರ್ನಾಟಕದ ದಾವಣಗೆರೆ, ಮಂಗಳೂರು, ಶಿವಮೊಗ್ಗ, ತುಮಕೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ನಗರಗಳು ಸೇರಿದಂತೆ ವಿವಿಧ ರಾಜ್ಯಗಳ 97 ನಗರಗಳು ತಮ್ಮ ಪ್ರಸ್ತಾಪಗಳನ್ನು ಸಲ್ಲಿಸಿದ್ದವು. ಈ ಪ್ರಸ್ತಾಪಗಳು ಕುರಿತು ಕೇಂದ್ರ ಸರ್ಕಾರ ರಚಿಸಿದ್ದ ಮೂರು ಸಮಿತಿಗಳು ಅಧ್ಯಯನ ನಡೆಸಿ, ಅತ್ಯುತ್ತಮ ಎನ್ನಿಸಿದ 20 ನಗರಗಳ ಹೆಸರನ್ನು ಅಂತಿಮಗೊಳಿಸಿ ಗುರುವಾರ ನಗರಗಳ ಹೆಸರನ್ನು ಘೋಷಿಸಿದೆ.

ಪಟ್ಟಿಯಲ್ಲಿ ಸ್ಥಾನಪಡೆದ 20 ನಗರಗಳಿಗೆ ಮೊದಲ ವರ್ಷ ಕೇಂದ್ರ ಸರ್ಕಾರ 200 ಕೋಟಿ ರು. ನೆರವು ನೀಡಲಿದ್ದು, ನಂತರದ 3 ವರ್ಷಗಳಲ್ಲಿ ತಲಾ 100 ಕೋಟಿ ರು. ಹಣಕಾಸಿನ ನೆರವನ್ನು ನೀಡಲಿದೆ.

ಮೊದಲ ಕಂತಿನ 20 ಸ್ಮಾರ್ಟ್ ಸಿಟಿಗಳ ಹೆಸರು:
ಭುವನೇಶ್ವರ್, ಪುಣೆ, ಜೈಪುರ್, ಕೊಚ್ಚಿ, ಚೆನ್ನೈ, ಉದಯ್ ಪುರ್, ಅಹ್ಮದ್ ನಗರ್, ಸೊಲ್ಲಾಪುರ್, ಲೂಧಿಯಾನಾ, ಭೋಪಾಲ್, ಇಂದೋರ್,  ನವದೆಹಲಿ, ಗುವಾಹಟಿ,  ಸೂರತ್, ಜಬಲ್ಪುರ್, ಕೊಯಂಬತ್ತೂರ್, ಕಾಕಿನಾಡ, ವಿಶಾಖಪಟ್ಟಣಂ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com