ಮೆಲ್ಬರ್ನ್: ನಾಲ್ಕು ವರ್ಷದ ಮಗನೊಂದಿಗೆ 31 ವರ್ಷದ ಭಾರತೀಯ ಮಹಿಳೆ ಮೆಲ್ಬರ್ನ್ ನ ಬಹುಮಹಡಿ ಕಟ್ಟಡ (ಅಪಾರ್ಟ್ಮೆಂಟ್) ನಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ನಡೆಯಿದೆ.
ಸುಪ್ರಜಾ ಶ್ರೀನಿವಾಸ್ ಮತ್ತು ಮಗು ಶ್ರೀಹನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 29 ಮಹಡಿಯ ಸಿಟಿ ಪಾಯಿಂಟ್ ಅಪಾರ್ಟ್ಮೆಂಟ್ ಕಟ್ಟಡದ ಮುಂಭಾಗದಲ್ಲಿ ಇಬ್ಬರ ದೇಹವೂ ಪತ್ತೆಯಾಗಿದೆ.
ಮಾಧ್ಯಮಗಳ ವರದಿ ಪ್ರಕಾರ ಮೃತಪಟ್ಟವರ ಕುಟುಂಬ ಮೃತ ದೇಹಗಳನ್ನು ಭಾರತಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಸುಪ್ರಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಂಬಲಾಗಿದೆ.
ಸುಪ್ರಜಾ ಪತಿ ಶ್ರೀನಿವಾಸ್ ಗನ್ನಾರಾಮ್ ಟೆಕ್ ಮಹಿಂದ್ರಾ ದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು ಈ ಘಟನೆ ನಡೆದ ಸ್ಥಳದಲ್ಲೇ ಕುಸಿದು ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಜೋಡಿಗೆ ಐದು ವರ್ಷದ ಮಗಳು ಕೂಡ ಇದ್ದಾಳೆ.
ಒಳಾಂಗಣ ಬಾಲ್ಕನಿಯಿಂದ ಮಹಿಳೆ ಮತ್ತು ಮಗು ಬಿದ್ದಿರುವ ಸಾಧ್ಯತೆ ಇದೆ ಎಂದು ವಿಕ್ಟೊರಿಯಾ ಪೊಲೀಸ್ ವಕ್ತಾರ ತಿಳಿಸಿದ್ದಾರೆ.