ಭಾರತ 'ಬೌಗೋಳಿಕ-ರಾಜಕೀಯ ಮೈತ್ರಿ ರಾಷ್ಟ್ರ': ರಿಪಬ್ಲಿಕನ್ ಪಕ್ಷದ ಪ್ರಣಾಳಿಕೆ

ರಾಷ್ಟ್ರೀಯ ಸಮಾವೇಶಕ್ಕೂ ಮುಂಚಿತವಾಗಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಅಮೆರಿಕಾದ ರಿಪಬ್ಲಿಕನ್ ಪಕ್ಷ ಭಾರತವನ್ನು 'ಬೌಗೋಳಿಕ-ರಾಜಕೀಯ ಮೈತ್ರಿ ರಾಷ್ಟ್ರ' ಎಂದಿದ್ದು ವಾಣಿಜ್ಯಾತ್ಮಕವಾಗಿಯೂ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕ್ಲಿವ್ಲ್ಯಾಂಡ್: ರಾಷ್ಟ್ರೀಯ ಸಮಾವೇಶಕ್ಕೂ ಮುಂಚಿತವಾಗಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಅಮೆರಿಕಾದ ರಿಪಬ್ಲಿಕನ್ ಪಕ್ಷ ಭಾರತವನ್ನು 'ಬೌಗೋಳಿಕ-ರಾಜಕೀಯ ಮೈತ್ರಿ ರಾಷ್ಟ್ರ' ಎಂದಿದ್ದು ವಾಣಿಜ್ಯಾತ್ಮಕವಾಗಿಯೂ ಮಿತ್ರ ದೇಶ ಎಂದಿದೆ. 
58 ಪುಟಗಳ ಪ್ರಣಾಳಿಕೆಯಲ್ಲಿ ಭಾರತದೊಂದಿಗೆ ಭದ್ರತೆಯನ್ನು ಒಳಪಡಿಸಿದಂತೆ ಗಟ್ಟಿ ಭಾಂದವ್ಯಕ್ಕೆ ಕರೆ ನೀಡಿದ್ದು, ಭಾರತೀಯ-ಅಮೆರಿಕನ್ ಸಮುದಾಯದ ಕೊಡುಗೆಯನ್ನು ಪಕ್ಷ ಪ್ರಶಂಸಿಸಿದೆ. 
"ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ರಕ್ಷಣಾ ಕ್ಷೇತ್ರಗಳಲ್ಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಜೊತೆಗೆ ಗಟ್ಟಿ ಬಾಂಧವ್ಯವನ್ನು ಸ್ವಾಗತಿಸುತ್ತೇವೆ... ಭಾರತವನ್ನು 'ಬೌಗೋಳಿಕ-ರಾಜಕೀಯ ಮೈತ್ರಿ ರಾಷ್ಟ್ರ' ಎಂದಿದ್ದು ವಾಣಿಜ್ಯಾತ್ಮಕವಾಗಿಯೂ ಮಿತ್ರ ದೇಶ ಎಂದು ಈ ಮೂಲಕ ಧೃಢೀಕರಿಸಿ ಘೋಷಿಸುತ್ತಿದ್ದೇವೆ" ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. 
ಭಾರತದಲ್ಲಿ ಇನ್ನು ಹೆಚ್ಚಿನ ವಿದೇಶಿ ಬಂಡವಾಳ ಮತ್ತು ಹೂಡಿಕೆಗೆ ಅವಕಾಶ ನೀಡುವಂತೆ ರಿಪಬ್ಲಿಕನ್ ಪಕ್ಷದ ಪ್ರಣಾಳಿಕೆಯಲ್ಲಿ ಉತ್ತೇಜಿಸಲಾಗಿದೆ. 
"ಭಾರತದ ಎಲ್ಲ ಧರ್ಮಗಳ ಬೆಂಬಲಿಗರ ರಕ್ಷಣೆಗೆ ನಾವು ಕರೆ ನೀಡುತ್ತಿದ್ದೇವೆ. ಅಮರಿಕನ್ನರು ಮತ್ತು ರಿಪಬ್ಲಿಕನ್ನರಾಗಿ ಭಾರತ ಮೂಲದ ಅಮೆರಿಕಾ ನಾಗರಿಕರು ದೇಶಕ್ಕೆ ನೀಡಿರುವ ಕೊಡುಗೆಯನ್ನು ಹೆಮ್ಮೆಯಿಂದ ಗುರುತಿಸುತ್ತೇವೆ" ಎಂದು ಪ್ರಣಾಳಿಕೆ ತಿಳಿಸಿದೆ. 
ಮೂರು ದಿನದ ಸಮಾವೇಶ ಓಹಿಯೋದ ಕ್ಲಿವ್ಲ್ಯಾಂಡ್ ನಲ್ಲಿ ಸೋಮವಾರ ಪ್ರಾರಂಭವಾಗಿದೆ. ಅಮೆರಿಕಾದ 50 ರಾಜ್ಯಗಳಿಂದ ಸುಮಾರು 5000 ಪ್ರತಿನಿಧಿಗಳು ಭಾಗವಹಿಸಿದ್ದು ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ದೇಶದ ಭವಿಷ್ಯದ ನಾಯಕನಾಗುವ ಬಗ್ಗೆ ಚಿಂತನ ಮಂಥನ ನಡೆಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com