ಯುಬಿ ಸಿಟಿ ಸೇರಿ 1, 411 ಕೋಟಿ ರು. ಮೌಲ್ಯದ ಮಲ್ಯ ಆಸ್ತಿ ಜಪ್ತಿ

ವಿವಿಧ ಬ್ಯಾಂಕುಗಳಿಂದ ಸಾಲಪಡೆದ ವಿದೇಶದಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಮದ್ಯದ ದೊರೆ ವಿಜಯ ಮಲ್ಯಗೆ ಸೇರಿದ ಸುಮಾರು 1,411 ಕೋಟಿ ರು.ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ..
ವಿಜಯ್ ಮಲ್ಯ (ಸಂಗ್ರಹ ಚಿತ್ರ)
ವಿಜಯ್ ಮಲ್ಯ (ಸಂಗ್ರಹ ಚಿತ್ರ)

ನವದೆಹಲಿ: ವಿವಿಧ ಬ್ಯಾಂಕುಗಳಿಂದ ಸಾಲಪಡೆದ ವಿದೇಶದಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಮದ್ಯದ ದೊರೆ ವಿಜಯ ಮಲ್ಯಗೆ ಸೇರಿದ ಸುಮಾರು 1,411 ಕೋಟಿ ರು.ಮೌಲ್ಯದ  ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

ಸುಮಾರು 9 ಸಾವಿರ ಕೋಟಿ ರು. ಸಾಲಪಡೆದು ಸುಸ್ತಿದಾರರಾಗಿರುವ ಉದ್ಯಮಿ ವಿಜಯ್ ಮಲ್ಯಗೆ ಸೇರಿದ ಬೆಂಗಳೂರು, ಮುಂಬೈ ಹಾಗೂ ಚೆನ್ನೈನಲ್ಲಿನ 1,411 ಕೋಟಿ ರು. ಮೌಲ್ಯದ  ಆಸ್ತಿಯನ್ನು ಜಾರಿ ನಿರ್ದೇಶನಾಲಯ ಶನಿವಾರ ಜಪ್ತಿ ಮಾಡಿದೆ. ಈ ಪೈಕಿ ಮಲ್ಯಾಗೆ ಸೇರಿದೆ ವಿವಿಧ ಬ್ಯಾಂಕುಗಳ ಖಾತೆಯಲ್ಲಿರುವ ಸುಮಾರು 34 ಕೋಟಿ ರು. ನಗದು, ಬೆಂಗಳೂರು ಮತ್ತು  ಮುಂಬೈನಲ್ಲಿರುವ ಫ್ಲಾಟ್ ಗಳು, ಚೆನ್ನೈನಲ್ಲಿರುವ 4.5 ಎಕರೆ ವಿಸ್ತೀರ್ಣದಲ್ಲಿರುವ ಕೈಗಾರಿಕಾ ಪ್ರದೇಶ, ಬೆಂಗಳೂರಿನ ಪ್ರತಿಷ್ಠಿತ ಯುಬಿ ಸಿಟಿ, ಕಿಂಗ್​ಫಿಷರ್ ಟವರ್ ಹಾಗೂ ಕೊಡಗಿನಲ್ಲಿರುವ  28.75 ಎಕರೆ ಕಾಫಿ ತೋಟ ಸೇರಿ ಹಲವು ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.

ಈ ಪೈಕಿ ಬೆಂಗಳೂರಿನ ಪ್ರತಿಷ್ಠಿತ ಯುಬಿ ಸಿಟಿ ಕೂಡ ಸೇರಿದ್ದು, ಯುಬಿ ಸಿಟಿ ಬೆಂಗಳೂರಿನ ಪ್ರತಿಷ್ಠಿತ ವಾಣಿಜ್ಯ ಪ್ರದೇಶಗಳಲ್ಲೊಂದಾಗಿದ್ದು. ಪ್ರೆಸ್ಟೀಜ್ ಗ್ರೂಪ್ ಸಹಭಾಗಿತ್ವದಲ್ಲಿ ಮಲ್ಯ ಒಡೆತನದ  ಯುಬಿ ಗ್ರೂಪ್ 2008ರಲ್ಲಿ ಈ ಟವರ್ ನಿರ್ಮಾಣ ಮಾಡಿತ್ತು. ಈ ಲಕ್ಷುರಿ ಕಾಂಪ್ಲೆಕ್ಸ್ 13 ಎಕರೆ ವಿಸ್ತಾರದಲ್ಲಿದ್ದು, ಒಟ್ಟು ಮೌಲ್ಯ 500 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. ಆದರೆ ಮಲ್ಯ  ಷೇರು ಇದರಲ್ಲಿ 160 ಕೋಟಿ ರು. ಇದೆ ಎಂದು ತಿಳಿದುಬಂದಿದೆ.

ಐಡಿಬಿಐ ಬ್ಯಾಂಕಿನಿಂದ ಪಡೆದ 900 ಕೋಟಿ ರು. ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಈ ಪ್ರಕರಣದ ಅಡಿಯಲ್ಲಿ ಆಸ್ತಿ ಮುಟ್ಟುಗೋಲು  ಹಾಕಿಕೊಳ್ಳಲಾಗಿದೆ. ಈಗಾಗಲೇ ಕೆಲವು ಸ್ವತ್ತುಗಳನ್ನು ಮಲ್ಯ ವಿಲೇವಾರಿ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಹೀಗಾಗಿ ಮುಂದಿನ ಕ್ರಮಕ್ಕೆ ಯಾವುದೇ ತೊಂದರೆ  ಉಂಟಾಗಬಾರದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ. ಸಾಲ ಮಾಡಿದ ವೇಳೆ 807 ಕೋಟಿ ರು. ಮೌಲ್ಯ ಹೊಂದಿದ್ದ  ಆಸ್ತಿಯನ್ನು ಈಗ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಈಗ ಇದರ ಮೌಲ್ಯ 1,411 ಕೋಟಿ ರು. ಆಗಿದೆ.

ಇಡಿ ವಶಪಡಿಸಿಕೊಂಡ ಆಸ್ತಿ ವಿವರ
34 ಕೋಟಿ ರೂ. ಬ್ಯಾಂಕ್ ಬ್ಯಾಲೆನ್ಸ್, ಬೆಂಗಳೂರಿನಲ್ಲಿನ 2,291 ಚದರಡಿಯ ಫ್ಲ್ಯಾಟ್, ಮುಂಬೈನ 1,300 ಚದರಡಿಯ 2 ಫ್ಲ್ಯಾಟ್, ಚೆನ್ನೈನಲ್ಲಿರುವ 4.5 ಎಕರೆ ಔದ್ಯಮಿಕ ಪ್ಲಾಟ್,  ಕೊಡಗಿನಲ್ಲಿರುವ 28.75 ಎಕರೆ ಕಾಫಿ ಪ್ಲಾಂಟೇಶನ್, ಬೆಂಗಳೂರಿನ ಯುಬಿ ಸಿಟಿ ಮತ್ತು ಕಿಂಗ್​ಫಿಷರ್ ಟವರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com