ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ರಾಜಸ್ಥಾನದ ಡುಂಗರಪುರ್ ರಾಜಮನೆತನದ ಮಗಳು ತ್ರಿಷಿಕಾ ಕುಮಾರಿ ಸಿಂಗ್ ಅವರನ್ನು ವರಿಸುವ ಮೂಲಕ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್...
ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಬೆಂಗಳೂರು: ರಾಜಸ್ಥಾನದ ಡುಂಗರಪುರ್ ರಾಜಮನೆತನದ ಮಗಳು ತ್ರಿಷಿಕಾ ಕುಮಾರಿ ಸಿಂಗ್ ಅವರನ್ನು ವರಿಸುವ ಮೂಲಕ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸೋಮವಾರ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿವಾಹದ ಮೂಲಕ ವರ್ಷಗಳ ಬಳಿಕ ಮೈಸೂರು ರಾಜಮನೆತನದಲ್ಲಿ ಮತ್ತೆ ಸಂತಸ ಮರುಕಳಿಸಿದೆ. ಕರ್ಕಾಟಕ ಲಗ್ನದಲ್ಲಿ ರಾಜವಂಶಸ್ಥ ಯದುವೀರ ಅವರು ಮತ್ತು ತ್ರಿಷಿಕಾ ಕುಮಾರಿ ಅವರನ್ನು ವರಿಸಿದ್ದಾರೆ. ರಾಜಮನೆತನದ ಈ ವಿವಾಹಕ್ಕೆ ರಾಜವಂಶಸ್ಥರ ಕುಟುಂಬಸ್ಥರು, ದೇಶ-ವಿದೇಶಗಳಿಂದ ಬಂದ ಅತಿಥಿಗಳು ಹಾಗೂ ಇನ್ನಿತರೆ ಆಹ್ವಾನಿತ ಗಣ್ಯರು ಸಾಕ್ಷಿಯಾದರು.

ರಾಜಮನೆತನದ ವಿಧಿವಿಧಾನದಂತೆಯೇ ಯದುವೀರ ಅವರ ವಿವಾಹ ಸಂಪೂರ್ಣಗೊಂಡಿದ್ದು, ಮಾಂಗಲ್ಯ ಧಾರಣೆ ನಂತರ ಆರುಂಧತಿ ನಕ್ಷತ್ರ ಧ್ರುವ ನಕ್ಷತ್ರ ದರ್ಶನ ಸಂಪ್ರದಾಯಗಳನ್ನು ಮುಂದಿವರೆಸಲಾಗುತ್ತಿದೆ. ಸಂಜೆ 7.30ರ ಸುಮಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಯಧುವೀರ ಹಾಗೂ ತ್ರಿಷಿಕಾ ಅವರಿಗೆ ದರ್ಬಾರ್ ಸಂಭಾಂಗಣದಲ್ಲಿ ವಿಶೇಷವಾಗಿ ಅಲಂಕರಿಸಿರುವ ತೂಗುಯ್ಯಾಲೆಯಲ್ಲಿ ಕುಳ್ಳಿರಿಸಿ ಹೂವಿನ ಚೆಂಡಾಟವನ್ನು ಆಡಿಸಲಾಗುತ್ತದೆ. ಇದರಂತೆ ರಾಜಮನೆತನದ ಇನ್ನಿತರೆ ಸಂಪ್ರದಾಯಗಳನ್ನು ಮುಂದುವರೆಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com