ಭಾರತೀಯ ಸೇನೆಗೆ ದೇಶಿ ನಿರ್ಮಿತ ಯುದ್ಧ ವಿಮಾನ "ತೇಜಸ್" ಸೇರ್ಪಡೆ

ಸ್ವದೇಶಿ ನಿರ್ಮಿತ ಯುದ್ಧ ವಿಮಾನವನ್ನು ಬಳಕೆ ಮಾಡಬೇಕು ಎಂಬ ಭಾರತೀಯ ವಾಯು ಸೇನೆಯ ದಶಕಗಳ ಕನಸು ಇದೀಗ ನನಸಾಗಿದ್ದು, ಶುಕ್ರವಾರ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನ ಅಧಿಕೃತವಾಗಿ ಸೇನೆಗೆ ಸೇರ್ಪಡೆಯಾಗಿದೆ...
ತೇಜಸ್ ಯುದ್ಧ ವಿಮಾನ (ಸಂಗ್ರಹ ಚಿತ್ರ)
ತೇಜಸ್ ಯುದ್ಧ ವಿಮಾನ (ಸಂಗ್ರಹ ಚಿತ್ರ)

ನವದೆಹಲಿ: ಸ್ವದೇಶಿ ನಿರ್ಮಿತ ಯುದ್ಧ ವಿಮಾನವನ್ನು ಬಳಕೆ ಮಾಡಬೇಕು ಎಂಬ ಭಾರತೀಯ ವಾಯು ಸೇನೆಯ ದಶಕಗಳ ಕನಸು ಇದೀಗ ನನಸಾಗಿದ್ದು, ಶುಕ್ರವಾರ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನ ಅಧಿಕೃತವಾಗಿ ಸೇನೆಗೆ ಸೇರ್ಪಡೆಯಾಗಿದೆ.

ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ತೇಜಸ್ ಯುದ್ಧ ವಿಮಾನಕ್ಕೆ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ವಾಯು ಸೇನೆಗೆ ಸೇರ್ಪಡೆಗೊಳಿಸಲಾಯಿತು. ಹೆಚ್ ಎಎಲ್ ನ ವ್ಯವಸ್ಥಾಪಕ ಶ್ರೀಧರನ್ ಅವರು ವಾಯು ಸೇನೆಯ ಮುಖ್ಯಾಧಿಕಾರಿ ಜಸ್ಬೀರ್ ವಾಲಿಯಾ ಅವರಿಗೆ ತೇಜಸ್ ವಿಮಾನಗಳನ್ನು ಹಸ್ತಾಂತರಿಸಿದರು.

ಈ ವೇಳೆ ತೇಜಸ್ ವಿಮಾನಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಎಲ್ಲ ಸಮುದಾಯದ ಧಾರ್ಮಿಕ ಗುರುಗಳು ಪ್ರಾರ್ಥನೆ ಸಲ್ಲಿಸಿ, ತೇಜಸ್ ಗೆ ಶುಭ ಕೋರಿದರು. ಬಳಿಕ ತೇಜಸ್ ವಿಮಾನವನ್ನೇರಿದ ವಾಯುಸೇನೆ ಗ್ರೂಪ್ ಕ್ಯಾಪ್ಟನ್ ಮಾಧವ್ ರಂಗಾಚಾರಿ ತೇಜಸ್ ವಿಮಾನದಲ್ಲಿ ಹಾರಾಟಾ ನಡೆಸಿದರು.

ಹಿಂದೂಸ್ತಾನ್ ಏರೋನಾಟಿಕಲ್ಸ್ ಸಂಸ್ಥೆ ನಿರ್ಮಾಣ ಮಾಡಿರುವ ತೇಜಸ್ ಯುದ್ಧ ವಿಮಾನಗಳು ಭಾರತೀಯ ಸೇನೆಗೆ ಸೇರ್ಪಡೆಯಾಗಿದೆ. ಈ ಹಿಂದೆಯೇ ತೇಜಸ್ ಯುದ್ಧ ವಿಮಾನ ವಾಯು ಸೇನೆಗೆ ಸೇರ್ಪಡೆಗೊಳ್ಳಬೇಕಿತ್ತಾದರೂ, ತಾಂತ್ರಿಕ ದೋಷ ಮತ್ತು ಕಾರಣಾಂತರಗಳಿಂದ ತೇಜಸ್ ವಾಯು ಸೇನೆ ಸೇರ್ಪಡೆ ಮುಂದಕ್ಕೆ ಸಾಗುತ್ತಾ ಬಂದಿತ್ತು. ಇದೀಗ ಅಂತಿಮವಾಗಿ ತನ್ನ ಎಲ್ಲ ತೊಡಕಗಳನ್ನು ನಿವಾರಿಸಿಕೊಂಡಿರುವ ತೇಜಸ್ ಅಧಿಕೃತವಾಗಿ ಇಂದು ವಾಯು ಸೇನೆಗೆ ಸೇರ್ಪಡೆಯಾಗಿದೆ. ಸ್ವದೇಶಿ ಯುದ್ಧ  ವಿಮಾನ ನಿಮಿ೯ಸಬೇಕೆ೦ಬ ಆಲೋಚನೆ 1970ರಲ್ಲೇ ಭಾರತ ಸರ್ಕಾರಕ್ಕೆ ಬಂದಿತ್ತಾದರೂ, ಇದಕ್ಕೆ ಸ್ಪಷ್ಟ ರೂಪ ಸಿಕ್ಕಿದ್ದು 1980 ದಶಕದಲ್ಲಿ.

33 ವಷ೯ಗಳಲ್ಲಿ ಕಾರಣಾ೦ತರಗಳಿ೦ದ ವಿಮಾನ ನಿಮಾ೯ಣ ವಿಳ೦ಬಗೊ೦ಡಿತ್ತು. ಇದೀಗ ಸೇನೆಯಲ್ಲಿ  ಬಳಕೆಯಲ್ಲಿರುವ ಮಿಗ್‍-25ರ ಬದಲಾಗಿ ತೇಜಸ್ ಸೇಪ೯ಡೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದೆ. ಪ್ರಸಕ್ತ ಆಥಿ೯ಕ ವಷ೯ದಲ್ಲಿ ಎಚ್‍ಎಎಲ್ ಸಂಸ್ಥೆ ಒಟ್ಟು 4 ತೇಜಸ್ ವಿಮಾನಗಳನ್ನು  ಹಸ್ತಾ೦ತರಿಸಲಿದ್ದು, ಮು೦ದಿನ ಸಾಲಿನಲ್ಲಿ 8 ವಿಮಾನಗಳ ಪೂರೈಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಮೊದಲ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ಎಂಬ ಖ್ಯಾತಿಗೆ ಭಾಜನವಾಗಿರುವ ತೇಜಸ್ ಯುದ್ಧ ವಿಮಾನ ಸೇಪ೯ಡೆಗೆ 33 ವಷ೯ಗಳು ಬೇಕಾಯಿತು. 1990ರ ಏರೋನಾಟಿಕಲ್ ಡೆವಲಪ್‍ಮೆ೦ಟ್ ಏಜೆನ್ಸಿಯು ತೇಜಸ್‍ನ ವಿನ್ಯಾಸ ತಯಾರಿಸಿ ಎಚ್‍ಎಎಲ್ ಗೆ ಹಸ್ತಾ೦ತರಿಸಿತ್ತು. ಇದಕ್ಕೆ ಡಿಆರ್‍ ಡಿಒ ಸ೦ಸ್ಥೆಯ ವಿಜ್ಞಾನಿಗಳು ದೇಶಿ ನಿಮಿ೯ತ ಇ೦ಜಿನ್ ನಿಮಿ೯ಸಿಕೊಡುವ ಭರವಸೆ ನೀಡಿದ್ದರು. ಆದರೆ ಇ೦ಜಿನ್‍ನಲ್ಲಿ ದೋಷ ಕ೦ಡುಬ೦ದ ಹಿನ್ನಲೆಯಲ್ಲಿ ಅದನ್ನು ಸರಿಪಡಿಸಲು ವಿಳ೦ಬವಾದ್ದರಿ೦ದ ವಿಮಾನ ತಯಾರಿಕಾ ಯೋಜನೆಯೂ ತಡವಾಯಿತು. ಅಂತಿಮವಾಗಿ ಎಲ್ಲ ತಾಂತ್ರಿಕ ದೋಷಗಳನ್ನು ಸರಿಪಡಿಸಕೊಂಡ ತೇಜಸ್ ಮಾದರಿ ವಿಮಾನ ಕೊನೆಗೂ ಸಿದ್ಧಗೊ೦ಡು ಈ ವಷ೯ ಹಾರಾಟಕ್ಕೆ ಅನುಮತಿ ಸಿಕ್ಕಿದೆ. ಇದೀಗ ವಾಯುಸೇನೆ ಕೂಡ ಗುಣಮಟ್ಟದ ಬಗ್ಗೆ ಸ೦ತಸ ವ್ಯಕ್ತಪಡಿಸಿದೆ.

ಸ್ವತಃ ವಾಯುಪಡೆ ಮುಖ್ಯಸ್ಥ ಅರೂಪ್ ರಹಾ ಅವರು ಈ ಹಿಂದೆ ಬೆ೦ಗಳೂರಿನ ಎಚ್‍ಎಎಲ್‍ನಲ್ಲಿ ತೇಜಸ್ ಯುದ್ಧ ವಿಮಾನದಲ್ಲಿ ಮೊದಲ ಬಾರಿ ಹಾರಾಟ ನಡೆಸಿ, ಭಾರತೀಯ ವಾಯುಪಡೆಗೆ  ಸೇರಿಸಿಕೊಳ್ಳಲು ತೇಜಸ್ ಯೋಗ್ಯವಾಗಿದೆ ಎ೦ದು ಅಭಿಪ್ರಾಯಪಟ್ಟಿದ್ದರು.

ಮೂರು ಮಾದರಿಯ ತೇಜಸ್ ಯುದ್ಧ ವಿಮಾನ ಕರ್ತವ್ಯಕ್ಕೆ ಸಿದ್ಧ
ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನ ಮೂರು ಮಾದರಿಗಳಲ್ಲಿ ಲಭ್ಯವಿದ್ದು, ಅದರಲ್ಲಿ ಒ೦ದು ತರಬೇತಿಗೆ ಬಳಸುವ ಯುದ್ಧ ವಿಮಾನವಾದರೆ,  ಮತ್ತೊಂದು ವಾಯುಪಡೆಗೆ ಹಾಗೂ ಇನ್ನೊ೦ದು ನೌಕಾಪಡೆಗೆ ಬಳಸುವ ವಿಮಾನವಾಗಿದೆ. ತರಬೇತಿ ವಿಮಾನದಲ್ಲಿ ಎರಡು ಆಸನದ ವ್ಯವಸ್ಥೆಯಿದ್ದರೆ, ಉಳಿದ ಎರಡು ಮಾದರಿಗಳಲ್ಲಿ ಒ೦ದೇ  ಆಸನವಿರುತ್ತದೆ. ಇವು ರಾಕೆಟ್, ಕ್ಷಿಪಣಿ, ಬಾ೦ಬ್ ಮತ್ತಿತರ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊ೦ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com