ಆರು ಅಣು ಸ್ಥಾವರ ಸ್ಥಾಪನೆ ಒಪ್ಪಂದಕ್ಕೆ ಸಹಿ ಹಾಕಿದ ಭಾರತ, ಫ್ರಾನ್ಸ್

ಮಹಾರಾಷ್ಟ್ರದ ಜೈತ್ಪುರದಲ್ಲಿ ಆರು ಅಣು ಸ್ಥಾವರಗಳ ಸ್ಥಾಪನೆಯ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್ ಸಹಿ ಹಾಕಿವೆ. ಎರಡು ದೇಶಗಳು ಉನ್ನತ ಅಧಿಕಾರಿಗಳು ಭೇಟಿ ಮಾಡಿ ಮಂಗಳವಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮಹಾರಾಷ್ಟ್ರದ ಜೈತ್ಪುರದಲ್ಲಿ ಆರು ಅಣು ಸ್ಥಾವರಗಳ ಸ್ಥಾಪನೆಯ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್ ಸಹಿ ಹಾಕಿವೆ. ಎರಡು ದೇಶಗಳು ಉನ್ನತ ಅಧಿಕಾರಿಗಳು ಭೇಟಿ ಮಾಡಿ ಮಂಗಳವಾರ ಈ ಒಪ್ಪಂದವನ್ನು ಅಂತಿಮಗೊಳಿಸಿವೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ಅಣು ವಿದುಚ್ಚಕ್ತಿಯ ಉತ್ಪಾದನೆಗೆ ಫ್ರಾನ್ಸ್ ಸಹಕಾರ ನೀಡುವುದಕ್ಕೆ ಬದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಭಾರತದ ಫ್ರಾನ್ಸ್ ರಾಯಭಾರಿ ಫ್ರಾಂಕೋಯಿಸ್ ರಿಚಿಯರ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹಾಲ್ಲೇಂಡ್ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಈ ಮಾತುಕತೆಗಳು ಪ್ರಾರಂಭವಾಗಿದ್ದವು. ಫ್ರಾನ್ಸ್ ನ ಇ ಡಿ ಎಫ್ ಮತ್ತು ಭಾರತದ ಎನ್ ಪಿ ಸಿ ಐ ಎಲ್ ಸಹಯೋಗದಲ್ಲಿ ಈ ವರ್ಷದ ಕೊನೆಗೆ ಅಣು ಸ್ಥಾವರಗಳ ಸ್ಥಾಪನೆಗೆ ರೂಪುರೇಶೆ ನಿರ್ಮಿಸಲಾಗಿದೆ ಎಂದು ತಿಳಿಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com