ಭಯೋತ್ಪಾದನೆ ನಿವಾರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಸಂಪೂರ್ಣ ವಿಫಲ: ಭಾರತ

ಭಯೋತ್ಪಾದನೆ ಪಿಡುಗನ್ನು ನಿವಾರಿಸುವ ವಿಚಾರದಲ್ಲಿ ವಿಶ್ವಸ೦ಸ್ಥೆ ಸ೦ಪೂರ್ಣ ವಿಫಲವಾಗಿದೆ ಎ೦ದು ಭಾರತ ಟೀಕಿಸಿದೆ.
ಭಾರತದ ವಿಶ್ವಸಂಸ್ಥೆ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ (ಸಂಗ್ರಹ ಚಿತ್ರ)
ಭಾರತದ ವಿಶ್ವಸಂಸ್ಥೆ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ (ಸಂಗ್ರಹ ಚಿತ್ರ)
Updated on

ಜಿನೀವಾ: ಭಯೋತ್ಪಾದನೆ ಪಿಡುಗನ್ನು ನಿವಾರಿಸುವ ವಿಚಾರದಲ್ಲಿ ವಿಶ್ವಸ೦ಸ್ಥೆ ಸ೦ಪೂರ್ಣ ವಿಫಲವಾಗಿದೆ ಎ೦ದು ಭಾರತ ಟೀಕಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶಾ೦ತಿ ಮತ್ತು ಭದ್ರತೆ ವಿಚಾರಕ್ಕೆ ಸ೦ಬ೦ಧಿಸಿದಂತೆ ನಡೆದ ಚಚೆ೯ಯಲ್ಲಿ ಮಾತನಾಡಿದ ಭಾರತದ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರು,  ಶಾ೦ತಿ, ಭದ್ರತೆಗೆ ಮಾರಕವಾಗಿರುವ ಭಯೋತ್ಪಾದನೆ ಪರಿಣಾಮ ವಿಶ್ವದ ಎಲ್ಲ ರಾಷ್ಟ್ರಗಳ ಮೇಲಾಗುತ್ತಿದೆ. ಅಭಿವೃದ್ಧಿ ಹೊ೦ದುತ್ತಿರುವ ಮತ್ತು ಅಭಿವೃದ್ಧಿ ಹೊ೦ದಿದ ರಾಷ್ಟ್ರಗಳೂ  ಭಯೋತ್ಪಾದನೆ ಪಿಡುಗನ್ನು ದಶಕಗಳಿಂದ ಎದುರಿಸುತ್ತಿವೆ ಎ೦ದು ಸೈಯದ್ ಅಕ್ಬರುದ್ದೀನ್ ಹೇಳಿದರು.

"ಭಯೋತ್ಪಾದನೆ ಸಿದ್ಧಾ೦ತದ ಹರಡುವಿಕೆ, ಉಗ್ರರ ನೇಮಕಾತಿ, ಉಗ್ರ ಸ೦ಘಟನೆಗಳಿಗೆ ಹಣಕಾಸಿನ ನೆರವು ಒದಗಿಸುವುದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ  ಇದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇಡಬೇಕು ಎಂದು ಅಕ್ಬುರದ್ದೀನ್ ಹೇಳಿದರು.

ಇನ್ನು ಭಾರತದ ಆರೋಪಕ್ಕೆ ಪ್ರತ್ಯುತ್ತರ ಎನ್ನುವಂತೆ ಮಾತನಾಡಿದ ಪಾಕಿಸ್ತಾನ ಸದಸ್ಯರು, ಕಾಶ್ಮೀರಿಗಳಿಗೆ ಅನ್ಯಾವಾಗುತ್ತಿದೆ ಎಂದು ಹೇಳುವ ಮೂಲಕ ಭಾರತಕ್ಕೆ ತಿರುಗೇಟು ನೀಡಲು  ಮುಂದಾದರು. "ಕಾಶ್ಮೀರಿಗಳಿಗೆ ಮೂಲಭೂತ ಹಕ್ಕು ನಿರಾಕರಿಸುವುದು ಅನ್ಯಾಯ ಎ೦ದು ಹೇಳಿದ ಪಾಕ್, ವಿಶ್ವಸ೦ಸ್ಥೆಯ ನಿರ್ಣಯಗಳನ್ನು ಅಳವಡಿಸುವುದು ಜಾಗತಿಕ ಸಮುದಾಯದ  ಕತ೯ವ್ಯ. ರಾಷ್ಟ್ರಗಳ ಪರಮಾಧಿಕಾರ ಮತ್ತು ಅ೦ತಾರಾಷ್ಟ್ರೀಯ ವಿವಾದ ಗಳನ್ನು ಶಾ೦ತಿಯಿ೦ದ ಬಗೆಹರಿಸಬೇಕಿದೆ" ಎ೦ದು ವಿಶ್ವಸ೦ಸ್ಥೆಯ ಪಾಕಿಸ್ತಾನದ ಕಾಯ೦ ಪ್ರತಿನಿಧಿ ಮಲೀಹಾ  ಲೋಧಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com