ಲಾರಿ ಗುದ್ದಿ ಮೂವರು ಚೆನ್ನೈ ಕಾಲೇಜು ವಿದ್ಯಾರ್ಥಿನಿಯರ ಸಾವು

ವೇಗವಾಗಿ ಅಡ್ಡಾದಿಡ್ಡಿ ಓಡಿಸುತ್ತಿದ್ದ ನೀರಿನ ಟ್ಯಾಂಕರ್ ಲಾರಿ ಗುದ್ದಿ ಗುರುವಾರ ಮೂವರು ಕಾಲೇಜು ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಚೆನ್ನೈ: ವೇಗವಾಗಿ ಅಡ್ಡಾದಿಡ್ಡಿ ಓಡಿಸುತ್ತಿದ್ದ ನೀರಿನ ಟ್ಯಾಂಕರ್ ಲಾರಿ ಗುದ್ದಿ ಗುರುವಾರ ಮೂವರು ಕಾಲೇಜು ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ. 
ಮೂಲಗಳ ಪ್ರಕಾರ ಗಿಂಡಿ ಬಳಿ, ಚೆಲ್ಲಮಾಳ್ ಮಹಿಳಾ ಕಾಲೇಜಿನ ಎದುರು ಜನನಿಬಿಡ ಜಿ ಎಸ್ ಟಿ ರಸ್ತೆಯನ್ನು ಸುಮಾರು ಮಧ್ಯಾಹ್ನ 1:30 ರ ಸಮಯದಲ್ಲಿ ಐದು ಜನ ದಾಟುತ್ತಿದ್ದರು. ಆಗ ವೇಗವಾಗಿ ಬಂದ ನೀರಿನ ಟ್ಯಾಂಕರ್ ಲಾರಿಯೊಂದು ಅವರಿಗೆ ಗುದ್ದಿ, ಮೂರು ಜನ ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 
ಈ ನೀರಿನ ಟ್ಯಾಂಕರ್ ಲಾರಿ ಯಾವ ಸಂಸ್ಥೆಗೆ ಒಳಪಟ್ಟಿದೆ ಎಂದು ಇನ್ನು ಧೃಢಪಟ್ಟಿಲ್ಲ. ಮೃತಪಟ್ಟವರನ್ನು ಚಿತ್ರ, ಗಾಯತ್ರಿ ಮತ್ತು ಐಶಾ ಎಂದು ಗುರುತಿಸಲಾಗಿದ್ದು, ಮೂವರೂ ಚೆಲ್ಲಮಾಳ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು. ಈ ದುರ್ಘಟನೆ ನಡೆದಾಗ ಅವರು ಮನೆಗೆ ಹಿಂದಿರುಗುತ್ತಿದ್ದರು ಎಂದು ತಿಳಿದುಬಂದಿದೆ. ಈ ವಿದ್ಯಾರ್ಥಿಗಳಿಗೆ ಗುದ್ದಿ ನಂತರ ಒಂದು ಆಟೋಗೆ ಕೂಡ ಗುದ್ದಿ ನಂತರ ಲಾರಿ ನಿಂತಿದೆ. 
ಲಾರಿ ಮತ್ತು ಚಾಲಕನ ವಿವರಗಳನ್ನು ಪೊಲೀಸರು ಇನ್ನು ತಿಳಿಸಿಲ್ಲ. ಈ ಅಪಘಾತ ಆ ರಸ್ತೆಯ ಸುತ್ತಮುತ್ತ ಭಾರಿ ವಾಹನದಟ್ಟಣೆ ಸೃಷ್ಟಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com