ಪಶ್ಚಿಮ ಬಂಗಾಳದಲ್ಲಿ 200 ಕೋಟಿ ಮೌಲ್ಯದ ಹಾವಿನ ವಿಷ ವಶ; ನಾಲ್ವರ ಬಂಧನ
ಸಿಕ್ಕ ಸುಳಿವೊಂದರ ಬೆನ್ನುಹತ್ತಿದ ಅರಣ್ಯ ಅಧಿಕಾರಿಗಳು ಉತ್ತರ ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ, ಫುಲ್ಬರಿ ಪ್ರದೇಶದಲ್ಲಿ 200 ಕೋಟಿ ಮೌಲ್ಯದ ಹಾವಿನ ವಿಷವಿದ್ದ ಐದು ಡಬ್ಬಗಳನ್ನು ವಶಪಡಿಸಿಕೊಂಡು,
ಸಿಲಿಗುರಿ: ಸಿಕ್ಕ ಸುಳಿವೊಂದರ ಬೆನ್ನುಹತ್ತಿದ ಅರಣ್ಯ ಅಧಿಕಾರಿಗಳು ಉತ್ತರ ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ, ಫುಲ್ಬರಿ ಪ್ರದೇಶದಲ್ಲಿ 200 ಕೋಟಿ ಮೌಲ್ಯದ ಹಾವಿನ ವಿಷವಿದ್ದ ಐದು ಡಬ್ಬಗಳನ್ನು ವಶಪಡಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ.
"ನಾಲ್ವರನ್ನು ಬಂಧಿಸಲಾಗಿದೆ ಮತ್ತು 200 ಕೋಟಿ ಮೌಲ್ಯದ ಹಾವಿನ ವಿಷವಿದ್ದ ಐದು ಗುಂಡು ನಿರೋಧಕ ಡಬ್ಬಗಳನ್ನು ವಶಪಡಿಸಕೊಳ್ಳಲಾಗಿದೆ. ನಾವು ಒಂದು ರಿವಾಲ್ವರ್ ಮತ್ತು ಗುಂಡುಗಳನ್ನು ಕೂಡ ವಶಪಡಿಸಿಕೊಂಡಿದ್ದೇವೆ" ಎಂದು ರೇಂಜ್ ಅಂಧಿಕಾರಿ ಸಂಜಯ್ ದತ್ತ ಹೇಳಿದ್ದಾರೆ.
ಆಪಾದಿತರನ್ನು ಸುಜೋಯ್ ಕುಮಾರ್ ದಾಸ್, ವಿಪುಲ್ ಸರ್ಕಾರ್, ಪಿಂಟು ಬ್ಯಾನರ್ಜಿ ಮತ್ತು ಅಮಲ್ ನುಬಿಯಾ ಎಂದು ಗುರುತಿಸಲಾಗಿದ್ದು ಅವರನ್ನು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಈ ಆಪಾದಿತರು ಅಂತಾರಾಷ್ಟ್ರೀಯ ಕಳ್ಳಸಾಗಾಣಿಕಾ ಜಾಲದ ಸದಸ್ಯರು ಎಂದು ತಿಳಿಯಲಾಗಿದೆ.