ಇಂದು ವಿಧಾನಸೌಧದಲ್ಲಿ ನಡೆದ ಕರ್ನಾಟಕ ರೇಷ್ಮೆ ನಿಗಮದ ಕಾರ್ಯಕ್ರಮದಲ್ಲಿ ಸಚಿವ ಎ.ಮಂಜು ಅವರು ನಿಗಮದ ವಿಮೋಚನಾ ಷೇರು ಬಂಡವಾಳದ 22 ಕೋಟಿ ರುಪಾಯಿಗಳ ಚೆಕ್‌ಅನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು. ಬಳಿಕ ಮೂರು ಗಿಫ್ಟ್ ಬಾಕ್ಸಗಳನ್ನು ಸಿಎಂ ಕೈಗೆ ಮಂಜು ನೀಡಿದರು. ಕೂಡಲೇ ಇದರಲ್ಲೇನಿದೆ ಎಂದು ಸಿಎಂ ಪ್ರಶ್ನಿಸಿದರು. ರೇಷ್ಮೆ ಜುಬ್ಬಾ ಎಂದು ಮಂಜು ಉತ್ತರಿಸಿದಾಗ..ಬೇಡ...ಬೇಡ.. ನಾನು ರೇಷ್ಮೆ ಜುಬ್ಟಾ ಧರಿಸುವುದಿಲ್ಲ.. ಎಂದು ಸ್ವೀಕರಿಸಲು ನಿರಾಕರಿಸಿದರು.