ಮುಂಬೈ: ಮಹಿಳಾ ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಕಾರಾಗೃಹ ಇಲಾಖೆ, ಥಾನೆ ಜಿಲ್ಲಾ ಜೈಲಿನ ಸೂಪರಿಂಟೆಂಡೆಂಟ್ ಹೀರಾಲಾಲ್ ಜಾಧವ್ ಅವರನ್ನು ವಜಾ ಮಾಡಿದೆ. ಈ ಉಚ್ಛಾಟನೆಯನ್ನು ಧೃಢೀಕರಿಸಿರುವ ಡಿ ಐ ಜಿ ಭೂಷಣ್ ಉಪಾಧ್ಯಾಯ "ಜಾಧವ್ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಮತ್ತು ಹಿರಿಯ ಪೊಲೀಸರಿಂದ ಇಂತಹ ನಡೆ ಆಕ್ಷೇಪಣೀಯ" ಎಂದು ಹೇಳಿದ್ದಾರೆ.