ಭಾರತೀಯ ಸೇನೆಗೆ ಸೇರಲು ಸ್ವದೇಶಿ ನಿರ್ಮಿತ ಎಲ್ ಯುಹೆಚ್ ಸಿದ್ಧ; ತಾಂತ್ರಿಕ ಹಾರಾಟ ಯಶಸ್ವಿ

ಭಾರತೀಯ ಸೇನೆಗೆ ಸೇರ್ಪಡೆಯಾಗಲು ಮತ್ತೊಂದು ಸ್ವದೇಶಿ ನಿರ್ಮಿತ ಹೆಲಿಕಾಪ್ಟರ್ ಎಲ್ ಯುಹೆಚ್ ಸಿದ್ಧವಾಗಿದ್ದು, ಮಂಗಳವಾರ ಹೆಎಚ್ ಎಲ್ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ತಾಂತ್ರಿಕ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ.
ಹೆಚ್ ಎಎಲ್ ನಿರ್ಮಿತ ಎಲ್ ಯು ಹೆಚ್ ಹೆಲಿಕಾಪ್ಟರ್ (ಸಂಗ್ರಹ ಚಿತ್ರ)
ಹೆಚ್ ಎಎಲ್ ನಿರ್ಮಿತ ಎಲ್ ಯು ಹೆಚ್ ಹೆಲಿಕಾಪ್ಟರ್ (ಸಂಗ್ರಹ ಚಿತ್ರ)

ಬೆಂಗಳೂರು: ಭಾರತೀಯ ಸೇನೆಗೆ ಸೇರ್ಪಡೆಯಾಗಲು ಮತ್ತೊಂದು ಸ್ವದೇಶಿ ನಿರ್ಮಿತ ಹೆಲಿಕಾಪ್ಟರ್ ಎಲ್ ಯುಹೆಚ್ ಸಿದ್ಧವಾಗಿದ್ದು, ಮಂಗಳವಾರ ಹೆಎಚ್ ಎಲ್ ವಿಮಾನ ನಿಲ್ದಾಣದಲ್ಲಿ  ಹೆಲಿಕಾಪ್ಟರ್ ತಾಂತ್ರಿಕ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ.

ಬೆಂಗಳೂರಿನಲ್ಲಿರುವ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ ಎಎಲ್) ಸಂಸ್ಥೆ ನಿರ್ಮಿಸಿರುವ ಹಗುರ ಯುದ್ಧ ಹೆಲಿಕಾಪ್ಟರ್ ಅನ್ನು ಮಂಗಳವಾರ ಪರೀಕ್ಷಾರ್ಥ ಹಾರಾಟ  ನಡೆಸಲಾಗಿದ್ದು,ತಾಂತ್ರಿಕವಾಗಿ ಹೆಲಿಕಾಪ್ಟರ್ ಎಲ್ಲ ವಿಭಾಗಗಳಲ್ಲಿಯೂ ಯಶಸ್ವಿಯಾಗಿದೆ. ಹೆಚ್ ಎಎಲ್ ನ ಇಬ್ಬರು ನುರಿತ ಪೈಲಟ್ ಗಳು ಎಲ್ ಯು ಹೆಚ್ ಅನ್ನು ಸುಮಾರು 15 ನಿಮಿಷಗಳ  ಕಾಲ ಚಲಾಯಿಸಿದ್ದು, ಹೆಲಿಕಾಪ್ಟರ್ ತಾಂತ್ರಿಕವಾಗಿ ಸಮರ್ಥವಾಗಿದೆ ಎಂದು ಹೇಳಿದ್ದಾರೆ.

ನಿನ್ನೆ ಮಧ್ಯಾಹ್ನ ಸುಮಾರು 12.10ರಲ್ಲಿ ಮೊದಲ ಹಾರಾಟ ಆರಂಭಿಸಿದ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ 15 ನಿಮಿಷಗಳ ಕಾಲ ಯಶಸ್ವಿಯಾಗಿ ಹಾರಾಟ ನಡೆಸಿತು. ಎಚ್‌ಎಎಲ್‌ನ ನುರಿತ  ಪೈಲೆಟ್‌ಗಳು ಈ ತಾಂತ್ರಿಕ ಹಾರಾಟ ನಡೆಸಿದರು. ಇದರೊಂದಿಗೆ ಲೈಟ್ ಯುಟಿಲಿಟಿ ಹೆಲಿಕಾಪ್ಟರ್‌ನ ಮಾದರಿ ಪರೀಕ್ಷೆಯನ್ನು ಅಧಿಕೃತವಾಗಿ ಎಚ್‌ಎಎಲ್ ಆರಂಭಿಸಿದೆ. ಎಚ್‌ಎಎಲ್‌ನ 3ನೇ  ಸ್ವದೇಶಿ ನಿರ್ಮಿತ ಹೆಲಿಕಾಪ್ಟರ್ ಇದಾಗಿದ್ದು, ಈ ಹಿಂದೆ ‘ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್’(ಎಲ್‌ಸಿಎಚ್) ಹಾಗೂ ‘ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್’(ಎಎಲ್‌ಎಚ್) ಅನ್ನು ಎಚ್‌ಎಎಲ್  ನಿರ್ಮಿಸಿತ್ತು.

ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿರುವಂತೆ ಹಾಲಿ ಇರುವ ಭಾರತೀಯ ಸೇನೆಯ ಹಳೆಯ ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್ ಗಳಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಲು  ಹೆಚ್ಎಎಲ್ ಈ ಎಲ್ ಯುಹೆಚ್ ಹೆಲಿಕಾಪ್ಟರ್ ಅನ್ನು ಸಿದ್ಧಪಡಿಸಿದೆ ಎಂದು ಹೇಳಲಾಗುತ್ತಿದೆ.

ಹೆಎಚ್ ಎಲ್ ನಿರ್ಮಿತ ಎಲ್ ಯುಹೆಚ್ ಹೆಲಿಕಾಪ್ಟರ್  750 ಕಿ.ವ್ಯಾಟ್‌ನ ಸಫ್ರಾನ್ ಎಚ್‌ಇ ಆರ್ಡಿಡೆನ್ 1 ಯು. ಇಂಜಿನ್ ಹೊಂದಿದ್ದು, ತನ್ನ ಭಾರ ಸೇರಿದಂತೆ ಒಟ್ಟು 3,150 ಕೆ.ಜಿ. ತೂಕದ  ಸಾಮಗ್ರಿ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಈ ಹೆಲಿಕಾಪ್ಟರ್ ಗೆ ಒಮ್ಮೆ ಇಂಧನ ತುಂಬಿಸಿದರೆ ಸುಮಾರು 350 ಕಿ.ಮೀ ಗಳ ವರೆಗೂ ಸಾಗ ಬಲ್ಲ ಸಾಮರ್ಥ್ಯವನ್ನು ಈ ಕಾಪ್ಟರ್ ಹೊಂದಿದ್ದು,   6.5 ಕಿ.ಮೀ. ಎತ್ತರದಲ್ಲಿ ಹಾರಬಲ್ಲದಾಗಿದೆ. ಇಬ್ಬರು ಪೈಲಟ್ ಗಳು ಸೇರಿದಂತೆ ಒಟ್ಟು 8 ಮಂದಿ ಆಸೀನರಾಗಬಹುದಾಗಿದ್ದು, ಸಮುದ್ರ ಮಟ್ಟದಿಂದ ಹಿಮಾಲಯದ ಎತ್ತರದವರೆಗೂ ಈ ಲಘು  ಹೆಲಿಕಾಪ್ಟರ್ ಹಾರುವ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖವಾಗಿ ರಕ್ಷಣಾ ವಲಯಕ್ಕೆ, ಸಾರಿಗೆ ಕ್ಷೇತ್ರಕ್ಕೆ, ರಕ್ಷಣಾ ಕಾರ್ಯ ಮತ್ತು ಸಾಮಗ್ರಿಗಳ ಸಾಗಣೆಗೆ ಈ ಲಘು ಹೆಲಿಕಾಪ್ಟರ್ ಅನ್ನು ಬಳಕೆ ಮಾಡಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com