ಕೈಯಲ್ಲಿದ್ದಾಗಲೇ "ರಿಲಯನ್ಸ್ ಜಿಯೋ" ಮೊಬೈಲ್ ಸ್ಫೋಟ!; ಫೇಸ್ ಬುಕ್ ನಲ್ಲಿ ವೈರಲ್

ಜಿಯೋ ಮೊಬೈಲ್ ಗಾಗಿ ಹಾತೊರೆಯುತ್ತಿರುವ ಗ್ರಾಹಕರಿಗೆ ಆಘಾತ ನೀಡಬಲ್ಲ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಿಲಯನ್ಸ್ ಜಿಯೋ ಮೊಬೈಲ್ (ಫೇಸ್ ಬುಕ್ ಚಿತ್ರ)
ರಿಲಯನ್ಸ್ ಜಿಯೋ ಮೊಬೈಲ್ (ಫೇಸ್ ಬುಕ್ ಚಿತ್ರ)

ನವದೆಹಲಿ: ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ತೀರಾ ಅಗ್ಗದ ಆಫರ್ ಗಳ ಮೂಲಕ ಗ್ರಾಹಕರ ಸೆಳೆಯುತ್ತಿರುವ ರಿಲಯನ್ಸ್ ಸಂಸ್ಥೆಯ ಜಿಯೋ ಮೊಬೈಲ್ ಗಳಿಗಾಗಿ ಭಾರಿ ಬೇಡಿಕೆ  ವ್ಯಕ್ತವಾಗುತ್ತಿರುವಂತೆಯೇ, ಜಿಯೋ ಮೊಬೈಲ್ ಗಾಗಿ ಹಾತೊರೆಯುತ್ತಿರುವ ಗ್ರಾಹಕರಿಗೆ ಆಘಾತ ನೀಡಬಲ್ಲ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ರಿಲಯನ್ಸ್ ಜಿಯೋ ಲೈಫ್ ವಾಟರ್ 1 ಸ್ಮಾರ್ಟ್ ಫೋನ್ ಸ್ಫೋಟಗೊಂಡ ಕುರಿತು ಸಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿದ್ದು, ಈ ಸುದ್ದಿ ಇದೀಗ ವೈರಲ್ ಆಗಿದೆ.

ರಿಲಯನ್ಸ್ ಜಿಯೋ ಲೈಫ್ ವಾಟರ್ 1 ಸ್ಮಾರ್ಟ್ ಫೋನ್ ಸ್ಫೋಟಗೊಂಡಿದೆ ಎಂದು ಆರೋಪಿಸಿ "ಗೆಡಿ ರೂಟ್ ಜಮ್ಮು" ಎಂಬ ಫೇಸ್ ಬುಕ್ ಖಾತೆದಾರನೊಬ್ಬ ಬರೆದುಕೊಂಡಿದ್ದಾನೆ. ರಿಲಯನ್ಸ್  ಜಿಯೋ ಸ್ಮಾರ್ಟ್ ಫೋನ್ ಕೈಯಲ್ಲಿದ್ದ ವೇಳೆಯಲ್ಲಿ ಸ್ಫೋಟಗೊಂಡು ಕೈಗೆ ಗಾಯವಾಗಿದೆ ಎಂದು ಖಾತೆದಾರ ಆರೋಪಿಸಿದ್ದಾನೆ. ಅಲ್ಲದೆ ಈ ಸಂಬಂಧ ಕೆಲ ಫೋಟೋಗಳನ್ನು ಕೂಡ  ಹಂಚಿಕೊಂಡಿದ್ದಾನೆ.

ಫೇಸ್ ಬುಕ್ ಖಾತೆಯ ಪ್ರಕಾರ ಈ ಘಟನೆ ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಖಾತೆಯಲ್ಲಿ ಬರೆದುಕೊಂಡಿರುವಂತೆ ರಿಲಯನ್ಸ್ ಜಿಯೋ ಲೈಫ್ ವಾಟರ್  1 ಸ್ಮಾರ್ಟ್ ಫೋನ್ ನಲ್ಲಿ ಫೇಸ್ ಬುಕ್ ಬ್ರೌಸ್ ಮಾಡುತ್ತಿದ್ದಾಗ ಮೊಬೈಲ್ ಹೆಚ್ಚು ಹೀಟ್ ಆಗಿ ಸ್ಫೋಟಗೊಂಡಿದೆ ಎಂದು ಆತ ಹೇಳಿಕೊಂಡಿದ್ದಾನೆ.

ಇತ್ತೀಚೆಗಷ್ಟೇ ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಸ್ಯಾಮ್ ಸಂಗ್ ಕೂಡ ಇದೇ ಬ್ಯಾಟರಿಯಲ್ಲಿ ತಾಂತ್ರಿಕ ದೋಷದಿಂದಾಗಿ ತನ್ನ ನೋಟ್ 7 ಮೊಬೈಲ್ ಗಳನ್ನು ಹಿಂಪಡೆಯಲು ಮುಂದಾಗಿತ್ತು.  ಇದರ ಬೆನ್ನಲ್ಲೇ ರಿಲಯನ್ಸ್ ಜಿಯೋ ಮೊಬೈಲ್ ಕೂಡ ಸ್ಫೋಟವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com