ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಫೋಟೋ; ಯುವತಿ ಆತ್ಮಹತ್ಯೆ

ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಗೆಳೆಯನೊಬ್ಬ ಪ್ರಕಟಿಸಿದ್ದಕ್ಕೆ ಮನನೊಂದ 17 ವರ್ಷದ ಬಾಲಕಿ ದಕ್ಷಿಣ ಪಶ್ಚಿಮ ಬಂಗಾಳದ 24- ಪರ್ಗನ್ಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಕೋಲ್ಕತ್ತಾ: ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಗೆಳೆಯನೊಬ್ಬ ಪ್ರಕಟಿಸಿದ್ದಕ್ಕೆ ಮನನೊಂದ 17 ವರ್ಷದ ಬಾಲಕಿ ದಕ್ಷಿಣ ಪಶ್ಚಿಮ ಬಂಗಾಳದ 24- ಪರ್ಗನ್ಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸೋಮವಾರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. 
ಈ ಅಪ್ರಾಪ್ತ ಯುವತಿ ಎರಡು ವರ್ಷಗಳಿಂದ 20 ವರ್ಷದ ಯುವಕನೊಂದಿಗೆ ಸಂಬಂಧದಲ್ಲಿದ್ದರು ಆದರೆ ಇತ್ತೀಚೆಗಷ್ಟೇ ಈ ಜೋಡಿ ಬೇರ್ಪಟ್ಟಿತು ಎಂದು ಕುಟುಂಬ ತಿಳಿಸಿದೆ. 
"ಹುಡುಗ ಬಾಲಕಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಲ್ಲದೆ, ಬೆದರಿಕೆ ಕೂಡ ಹಾಕುತ್ತಿದ್ದ. ಭಾನುವಾರ ರಾತ್ರಿ ಬಾಲಕ ಫೇಸ್ಬುಕ್ ನಲ್ಲಿ ಅಶ್ಲೀಲ ಚಿತ್ರಗಳನ್ನು ಹಾಕಿದ್ದ" ಎಂದು ಮೃತ ಬಾಲಕಿಯ ಸಹೋದರ ಸಂಬಂಧಿ ಹೇಳಿದ್ದಾರೆ. 
ಆಗ ಬಾಲಕಿಯ ತಾಯಿ ಪೊಲೀಸ್ ಠಾಣೆಗೆ ಕರೆ ಮಾಡಿದ್ದರು, ಆಗ ಕಾರ್ಯನಿರತರಾಗಿದ್ದ ಪೊಲೀಸ್ ಅಧಿಕಾರಿ ಬಳಿ ಹೋಗುವಂತೆ ಸೂಚಿಸಲಾಗಿದೆ. ಆಗ ಮಧ್ಯರಾತ್ರಿಯಾಗಿದ್ದರಿಂದ, ಬೆಳಗ್ಗೆ ಪೊಲೀಸ್ ಠಾಣೆಗೆ ಹೋಗಲು ತಾಯಿ ನಿರ್ಧರಿಸಿದ್ದಾರೆ. 
"ಆದರೆ ಏನಾದರೂ ಮಾಡುವುದಕ್ಕೆಮುಂಚಿತವಾಗಿಯೇ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ" ಎಂದು ಸಹೋದರ ಸಂಬಂಧಿ ಹೇಳಿದ್ದಾರೆ. 
ಫೇಸ್ಬುಕ್ ನಲ್ಲಿ ಆ ಫೋಟೋಗಳನ್ನು ನೋಡಿ ಬಾಲಕಿ ದೀರ್ಘ ಕಾಲದವರೆಗೆ ಅಳುತ್ತಲೇ ಇದ್ದಳು ಎಂದು ಕುಟುಂಬ ತಿಳಿಸಿದೆ. "ಆ ಬಾಲಕ ಬೆದರಿಸಿದ್ದಲ್ಲದೆ, ತಾಯಿಗೆ ಮಧ್ಯೆ ಬರದಂತೆ ಕೂಡ ಎಚ್ಚರಿಸಿದ್ದ" ಎಂದು ಸಂಬಂಧಿ ಪಿಯು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com