ಶಕ್ತಿ ಪ್ರದರ್ಶನಕ್ಕೆ ಮುಂದಾದ ದಿನಕರನ್; ಬೆಂಬಲಿಗ ಶಾಸಕರ ಸಭೆ!

ಅತ್ತ ಪನ್ನೀರ್ ಸೆಲ್ವಂ ಹಾಗೂ ಪಳನಿ ಸ್ವಾಮಿ ಒಂದಾಗಿ ಶಶಿಕಲಾ ಮತ್ತು ತಂಡವನ್ನು ಪಕ್ಷದಿಂದ ಉಚ್ಛಾಟಿಸಲು ಮುಂದಾಗಿರುವಂತೆಯೇ ಇತ್ತ ಟಿಟಿವಿ ದಿನಕರನ್ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಅತ್ತ ಪನ್ನೀರ್ ಸೆಲ್ವಂ ಹಾಗೂ ಪಳನಿ ಸ್ವಾಮಿ ಒಂದಾಗಿ ಶಶಿಕಲಾ ಮತ್ತು ತಂಡವನ್ನು ಪಕ್ಷದಿಂದ ಉಚ್ಛಾಟಿಸಲು ಮುಂದಾಗಿರುವಂತೆಯೇ ಇತ್ತ ಟಿಟಿವಿ ದಿನಕರನ್ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಚೆನ್ನೈನಲ್ಲಿ ಇಂದು ತಮ್ಮ ಬೆಂಬಲಿಗ ಶಾಸಕರ ತುರ್ತು ಸಭೆ ಕರೆದಿರುವ ದಿನಕರನ್ ಸಭೆಗೆ ಹಾಜರಾಗುವಂತೆ ಶಾಸಕರಿಗೆ, ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಿಗೆ ಹಾಗೂ ಪಕ್ಷದ ಪದಾಧಿಕಾರಿಗಳಿಗೆ ಆಹ್ವಾನ ನೀಡಿದ್ದಾರೆ ಎಂದು  ತಿಳಿದುಬಂದಿದೆ. ನಿನ್ನೆ ರಾತ್ರಿ ಪಕ್ಷದ ಕಚೇರಿಯಲ್ಲಿ ನಡೆದ ಸಭೆ ಬಳಿಕ ಶಶಿಕಲಾ ಬಣದ 7 ಶಾಸಕರು ದಿನಕರನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಚರ್ಚೆ ಬಳಿಕ ದಿನಕರನ್ ತುರ್ತು ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷದ ಕಾರ್ಯದರ್ಶಿ ಶಶಿಕಲಾನೇಮಕ ಕಾನೂನು ಬಾಹಿರ ಎಂದು ಘೋಷಿಸುವಂತೆ ಚುನಾವಣಾ ಆಯೋಗಕ್ಕೆ ಎಐಎಡಿಎಂಕೆ ಪತ್ರ
ಏತನ್ಮಧ್ಯೆ ಸಂಧಾನ ಯಶಸ್ವಿಯಾದ ಬೆನ್ನಲ್ಲೇ ಎಐಎಡಿಎಂಕೆ ಪಕ್ಷ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಶಶಿಕಲಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಶಶಿಕಲಾ ಆಯ್ಕೆಯನ್ನು ಕಾನೂನು ಬಾಹಿರ ಎಂದು  ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com