ಜಮ್ಮು: ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪದ ಮೇಲೆ ಇಬ್ಬರು ಕಾಶ್ಮೀರಿ ಯುವಕರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
ಸಿನೆಮಾಗೆ ಮುಂಚಿತವಾಗಿ ಪ್ರಸಾರವಾದ ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ತೋರದ್ದಕ್ಕೆ ಕಾಶ್ಮೀರ ಕಣಿವೆಯ ಅನಂತನಾಗ್ ಮತ್ತು ಕುಪ್ವಾರ ಜಿಲ್ಲೆಗಳ ಇಬ್ಬರು ಯುವಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
"ರಾಷ್ಟ್ರೀಯ ಗೌರವ ಧಕ್ಕೆಗೆ ಪ್ರತಿಬಂಧ ಕಾಯ್ದೆ ೧೯೭೧ ರ ವಿಭಾಗ ೨/೩ ಅಡಿಯಲ್ಲಿ ಈ ಬಾಲಕರ ವಿರುದ್ಧ ಎಫ್ ಐ ಆರ್ ದಾಖಲಿಸಕೊಳ್ಳಲಾಗಿದೆ" ಎಂದು ಪೊಲೀಸರು ಹೇಳಿದ್ದಾರೆ.
ರಾಷ್ಟ್ರದಾದ್ಯಂತ ಪ್ರತಿ ಸಿನೆಮಾ ಪ್ರದರ್ಶನಕ್ಕೂ ಮುಂಚಿತವಾಗಿ ರಾಷ್ಟ್ರಗೀತೆ ಪ್ರದರ್ಶನ ಮತ್ತು ಪ್ರೇಕ್ಷಕರು ಅದಕ್ಕೆ ಎದ್ದು ನಿಂತು ಗೌರವ ಸಲ್ಲಿಸುವುದು ಕಡ್ಡಾಯ ಎಂದು ಅಪೆಕ್ಸ್ ನ್ಯಾಯಾಲಯ ಕಳೆದ ನವೆಂಬರ್ ನಲ್ಲಿ ಆದೇಶಿಸಿತ್ತು.