ತ.ನಾಡು ವಿಧಾನಸಭೆಯಲ್ಲಿ ಹೈಡ್ರಾಮಾ; ಮತದಾನದ ನಡುವೆಯೇ ಸ್ಟಾಲಿನ್ ಭಾಷಣ

ಕುತೂಹಲ ಕೆರಳಿಸಿರುವ ಪಳನಿ ಸ್ವಾಮಿ ವಿಶ್ವಾಸ ಮತ ಯಾಚನೆ ಸಂಬಂಧ ತಮಿಳುನಾಡು ವಿಶೇಷ ಅಧಿವೇಶನ ಆರಂಭಗೊಂಡಿದ್ದು, ಸಿಎಂ ಪಳನಿ ಸ್ವಾಮಿ ರಾಜ್ಯಪಾಲರ ಸೂಚನೆಯಂತೆ ವಿಶ್ವಾಸ ಮತ ನಿರ್ಣಯ ಮಂಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಭಾರಿ ಕುತೂಹಲ ಕೆರಳಿಸಿರುವ ಪಳನಿ ಸ್ವಾಮಿ ವಿಶ್ವಾಸ ಮತ ಯಾಚನೆ ಸಂಬಂಧ ತಮಿಳುನಾಡು ವಿಶೇಷ ಅಧಿವೇಶನ ಆರಂಭಗೊಂಡಿದ್ದು, ಸಿಎಂ ಪಳನಿ ಸ್ವಾಮಿ ರಾಜ್ಯಪಾಲರ ಸೂಚನೆಯಂತೆ ವಿಶ್ವಾಸ ಮತ ನಿರ್ಣಯ  ಮಂಡಿಸಿದ್ದಾರೆ.

ಇಂದು  ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗಿದ್ದು, ರಾಜ್ಯಪಾಲ ಸಿ ವಿದ್ಯಾಸಾಗರ್ ರಾವ್ ಅವರ ಸೂಚನೆ ಮೇರೆಗೆ ಸಿಎಂ ಪಳನಿ ಸ್ವಾಮಿ ಅವರು ವಿಶ್ವಾಸ ಮತ ನಿರ್ಣಯ ಮಂಡಿಸಿದ್ದಾರೆ. ಬಳಿಕ ವಿಶ್ವಾಸ ಮತ ನಿರ್ಣಯದ  ಕುರಿತಂತೆ ಚರ್ಚೆ ನಡೆಸಲಾಗಿದ್ದು, ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಗುಪ್ತ ಮತದಾನಕ್ಕೆ ಆಗ್ರಹಿಸಿದರು. ಸ್ಟಾಲಿನ್ ಅವರಂತೆಯೇ ಪನ್ನೀರ್ ಸೆಲ್ವಂ ಬಣ ಹಾಗೂ ಕಾಂಗ್ರೆಸ್ ಶಾಸಕರು ಗುಪ್ತ ಮತದಾನಕ್ಕೆ ಆಗ್ರಹಿಸಿದರು. ಈ ವೇಳೆ  ಮಾತನಾಡಿದ ಸ್ಟಾಲಿನ್ ಮತದಾನಕ್ಕೆ ಏಕೆ ಇಷ್ಟೊಂದು ತರಾತುರಿ ನಡೆಸಲಾಗುತ್ತಿದೆ ನಮಗೆ ತಿಳಿದಿಲ್ಲ. ಶಾಸಕರನ್ನೇಕೆ ಪೊಲೀಸ್ ರಕ್ಷಣೆಯಲ್ಲಿ ಕರೆತರಲಾಗುತ್ತಿದೆ. ಆದರೆ ಸಂವಿಧಾನ ಬದ್ಧ ಪ್ರಜಾತಂತ್ರ ಎತ್ತಿ ಹಿಡಿಯಲು ಗುಪ್ತ  ಮತದಾನಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.

ಇದೇ ವೇಳೆ ಪನ್ನೀರ್ ಸೆಲ್ವಂ ಬಣದ ಮುಖ್ಯ ಸಚೇತಕ ಮತ್ತು ಶಾಸಕ ಸೆಮ್ಮೈಲೈ ಅವರು ಮಾತನಾಡಿ, ಎಐಎಡಿಎಂಕೆ ಶಾಸಕರ ಜೀವಕ್ಕೆ ಬೆದರಿಕೆ ಇದೆ. ಹೀಗಾಗಿ ಶಾಸಕರನ್ನು ರಕ್ಷಿಸಿ ಎಂದು ಹೇಳಿದರು. ಅವರ ಈ  ಮಾತಿನಿಂದಾಗಿ ಕಲಾಪದಲ್ಲಿ ದೊಡ್ಡ ಹೈಡ್ರಾಮಾ ಸೃಷ್ಟಿಯಾಯಿತು. ಈ ವೇಳೆ ಮಾತನಾಡಿದ ಡಿಎಂಕೆ ಪಕ್ಷದ ಮುಖ್ಯಸ್ಥ ಎಂಕೆ ಸ್ಟಾಲಿನ್ ಶಾಸಕರನ್ನೇಕೆ ಪೊಲೀಸ್ ರಕ್ಷಣೆಯಲ್ಲಿ ಕರೆತರಲಾಗುತ್ತಿದೆ. ಅವರಿಗೆ ಜೀವ ಬೆದರಿಕೆ ಇದೆಯೇ  ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಧನ್ ಪಾಲ್ ಅವರು ಶಾಸಕರಿಗೆ ರಕ್ಷಣೆ ಒದಗಿಸುವಂತೆ ಸೂಚನೆ ನೀಡಿದರು.

ಪನ್ನೀರ್ ಸೆಲ್ವಂ ಬಣ, ಡಿಎಂಕೆ ಮತ್ತು ಕಾಂಗ್ರೆಸ್ ನಿಂದ ಗುಪ್ತ ಮತದಾನಕ್ಕೆ ಆಗ್ರಹ
ಇನ್ನು ಡಿಎಂಕೆ, ಕಾಂಗ್ರೆಸ್ ಮತ್ತು ಪನ್ನೀರ್ ಸೆಲ್ವಂ ಬಣದ ಶಾಸಕರು ಗುಪ್ತಮತದಾನಕ್ಕೆ ಆಗ್ರಹಿಸದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಪೀಕರ್ ಮತದಾನ ಹೇಗೆ ಮಾಡಬೇಕು ಎಂಬುದು ನನ್ನ ವಿವೇಚನದೆ ಬಿಟ್ಟ  ವಿಚಾರವಾಗಿದ್ದು, ಮತದಾನ ಹೇಗೆ ನಡೆಸಬೇಕು ಎಂಬುದನ್ನು ನಾನು ನಿರ್ಧರಿಸುತ್ತೇನೆ. ಇದರಲ್ಲೇ ಬೇರೇ ಯಾರೂ ಮಧ್ಯ ಪ್ರವೇಶಿಸುವಂತಿಲ್ಲ ಎಂದು ಹೇಳಿದರು. ಬಳಿಕ ವಿಶ್ವಾಸ ಮತದ ನಿರ್ಣಯ ಕುರಿತಂತೆ ಮತದಾನಕ್ಕೆ  ಚಾಲನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com