ಮುಲಾಯಂ ಮುಂದಿನ ಹೆಜ್ಜೆಗೆ ಚಿಂತನೆ; ತಂದೆಯನ್ನು ಎರಡು ಬಾರಿ ಭೇಟಿ ಮಾಡಿದ ಅಖಿಲೇಶ್

ಸಮಾಜವಾದಿ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಬಣಕ್ಕೆ ಚುನಾವಣಾ ಆಯೋಗ ನೀಡಿರುವ ಹಿನ್ನಲೆಯಲ್ಲಿ, ಹಿರಿಯ ಮುಖಂಡ ಮತ್ತು
ಅಖಿಲೇಶ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್
ಅಖಿಲೇಶ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್
Updated on: 
ಲಖನೌ: ಸಮಾಜವಾದಿ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಬಣಕ್ಕೆ ಚುನಾವಣಾ ಆಯೋಗ ನೀಡಿರುವ ಹಿನ್ನಲೆಯಲ್ಲಿ, ಹಿರಿಯ ಮುಖಂಡ ಮತ್ತು ಮುಖ್ಯಮಂತ್ರಿಯವರ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಮುಂದಿನ ನಡೆಯ ಬಗ್ಗೆ ಚಿಂತಿಸುತ್ತಿದ್ದು, ಸೋಮವಾರ ಸಂಜೆ ಪುತ್ರ ಎರಡು ಬಾರಿ ತಂದೆಯವರನ್ನು ಭೇಟಿ ಮಾಡಿದ್ದಾರೆ. 
೭೭ ವರ್ಷದ ಮುಖಂಡ ಮುಲಾಯಂ ಅವರ ಮುಂದಿನ ನಡೆಯ ಬಗ್ಗೆ ಇನ್ನು ಅಧಿಕೃತ ಮಾಹಿತಿ ಇಲ್ಲವಾದರೂ, ಮುಲಾಯಂ ಸುಮ್ಮನೆ ಕೂರುತ್ತಾರೋ ಅಥವಾ ಪುತ್ರ ಅಖಿಲೇಶ್ ಬಣದ ವಿರುದ್ಧ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸತ್ತಾರೋ ಎಂದು ಮಂಗಳವಾರ ನಿಶ್ಚಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
ಇಂತಹ ನಡೆಯಿಂದ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ಊಹಿಸಿರುವ ಅಖಿಲೇಶ್, ೧೨ ಘಂಟೆಗಳ ಅವಧಿಯಲ್ಲಿ ಎರಡು ಬಾರಿ ತಂದೆಯನ್ನು ಭೇಟಿ ಮಾಡಿದ್ದು, ಅಧಿಕೃತ ಪಕ್ಷದ ವಿರುದ್ಧ ಯಾವುದೇ ಅಭ್ಯರ್ಥಿಗಳನ್ನು ನಿಲ್ಲಿಸದಂತೆ ಕೋರಿದ್ದಾರೆ ಎನ್ನಲಾಗಿದೆ. 
ಸದ್ಯಕ್ಕೆ ಸಮಾಜವಾದಿ ಪಕ್ಷ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು, ಮುಲಾಯಂ ಬಣ ಇದರ ವಿರುದ್ಧ ನಿಂತರೆ ಮೈತ್ರಿಗೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. 
ಈ ಎರಡೂ ಭೇಟಿಯ ಸಂದರ್ಭದಲ್ಲಿ ಮುಲಾಯಂ ಅವರು ಮೌನವಾಗಿದ್ದು, ಪುತ್ರನ ಮಾತುಗಳನ್ನು ಆಲಿಸಿದ್ದಾರಾದರು ಯಾವುದೇ ಭರವಸೆಯನ್ನು ನೀಡಿಲ್ಲ ಎನ್ನುತ್ತವೆ ಮೂಲಗಳು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com