2014ರ ಜುಲೈ 1 ರ ರಾತ್ರಿ ಯುಬಿ ಸಿಟಿಯ ಸ್ಕೈಬಾರ್ನಲ್ಲಿ ಕುಟುಂಬ ಸಮೇತ ಪಾರ್ಟಿ ಮಾಡಿದ್ದ ಶಾಸಕ ಕಾಶಪ್ಪನವರ್ ಗಲಾಟೆ ನಡೆಸಿದ್ದರು. ರಾತ್ರಿ 1 ಗಂಟೆಯ ನಂತರವೂ ಬಾರ್ನಲ್ಲಿ ಶಾಸಕ ಮತ್ತವರ ಬೆಂಬಲಿಗರು ಅವಧಿ ಮೀರಿದ ನಂತರವೂ ಕುಳಿತಿದ್ದರು. ಅವಧಿ ಮೀರಿದ ನಂತರ ಹೋಟೆಲ್ ತೆರೆದಿದ್ದನ್ನು ನೋಡಿ ಕಬ್ಬನ್ ಪಾರ್ಕ್ ಠಾಣೆ ಪೇದೆಗಳಾದ ಕಿರಣ್ ಹಾಗೂ ಪ್ರಶಾಂತ ನಾಯ್ಕ್ ಪ್ರಶ್ನಿಸಿದ್ದರು. ಇದರಿಂದ ಆಕ್ರೋಶಗೊಂಡ ಶಾಸಕ ಹಾಗೂ ಅವರ ಬೆಂಬಲಿಗರು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಸಿ, ಬೂಟ್ ತೋರಿಸಿ ಹಲ್ಲೆ ನಡೆಸಿದ್ದರು.