ನಾವು ಕೂಡ ೧೯೬೨ಕ್ಕಿಂತ ಭಿನ್ನವಾಗಿದ್ದೇವೆ: ಚೈನಾ

ಗಡಿಯಲ್ಲಿ ಉದ್ವಿಘ್ನತೆ ಹೆಚ್ಚುತ್ತಿರುವ ಸಮಯದಲ್ಲಿ, ಭಾರತ ನೀಡಿರುವ ಹೇಳಿಕೆಯಂತೆಯೇ ಬೀಜಿಂಗ್ ಸೋಮವಾರ ಪ್ರತಿಕ್ರಿಯಿಸಿದ್ದು, ೨೦೧೭ ರ ಚೈನಾ ಕೂಡ ೧೯೬೨ರ ಚೈನಾ ಅಲ್ಲ ಎಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೀಜಿಂಗ್: ಗಡಿಯಲ್ಲಿ ಉದ್ವಿಘ್ನತೆ ಹೆಚ್ಚುತ್ತಿರುವ ಸಮಯದಲ್ಲಿ, ಭಾರತ ನೀಡಿರುವ ಹೇಳಿಕೆಯಂತೆಯೇ ಬೀಜಿಂಗ್ ಸೋಮವಾರ ಪ್ರತಿಕ್ರಿಯಿಸಿದ್ದು, ೨೦೧೭ ರ ಚೈನಾ ಕೂಡ ೧೯೬೨ರ ಚೈನಾ ಅಲ್ಲ ಎಂದಿದೆ. 
"ಒಂದು ಹಂತಕ್ಕೆ ಅವರು ಹೇಳಿರುವುದು ನಿಜ ೨೦೧೭ ರ ಭಾರತ ೧೯೬೨ರ ಭಾರತಕ್ಕಿಂತಲೂ ಭಿನ್ನ ಹಾಗೆಯೇ ಚೈನಾ ಕೂಡ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್, ಭಾರತದ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. 
೧೯೬೨ ರಲ್ಲಿ ಆದ ನಷ್ಟದಿಂದ ಪಾಠ ಕಲಿಯಿರಿ ಎಂದು ಕಳೆದ ವಾರ ಚೈನಾ ಭಾರತಕ್ಕೆ ತಾಕೀತು ಮಾಡಿತ್ತು ಆಗ ಅದಕ್ಕೆ ಪ್ರತಿಕ್ರಿಯಿಸಿದ್ದ ಅರುಣ್ ಜೇಟ್ಲಿ ೨೦೧೭ ರ ಭಾರತ ೧೯೬೨ರ ಭಾರತವಲ್ಲ ಎಂದು ಪ್ರತಿಕ್ರಿಯಿಸಿದ್ದರು. 
ಚೈನಾ ಮತ್ತು ಭೂತಾನ್ ನಡುವಿನ ವಿವಾದಾತ್ಮಕ ಗಡಿಯಾದ ದೋಕ್ಲಮ್ ಮತ್ತು ಡೊಂಗ್ಲೊಂಗ್ ನಲ್ಲಿ ಭಾರತ ಮತ್ತು ಚೈನಾ ಪಡೆಗಳು ಸೆಣಸಿದ್ದವು. ಡೊಂಗ್ಲೊಂಗ್ ಪ್ರದೇಶದಿಂದ ಭಾರತ ತನ್ನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದ್ದ ಬೀಜಿಂಗ್, ಭೂತಾನ್ ನ ಸಾರ್ವಭೌಮತೆಗೆ ಭಾರತ ಧಕ್ಕೆ ತರುತ್ತಿದೆ ಎಂದು ಆರೋಪಿಸಿತ್ತು. 
ಭೂತಾನ್ ಗೆ ಸರಿ ಮತ್ತು ತಪ್ಪಿನ ಗೊಂದಲ ಸೃಷ್ಟಿಸುತ್ತಿದೆ ಭಾರತ ಎಂದು ಕೂಡ ಬೀಜಿಂಗ್ ಆರೋಪಿಸಿತ್ತು. "ಭಾರತ ಗಡಿ ರಕ್ಷಕರು ಕಾನೂನುಬಾಹಿರವಾಗಿ ಒಳಹೊಕ್ಕಿರುವುದನ್ನು ಸಮರ್ಥಿಸಿಕೊಳ್ಳಲು ಮಾಹಿತಿಯನ್ನು ತಿರುಚುತ್ತಿದ್ದಾರೆ" ಎಂದು ಗೆಂಗ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com