ಪಾಕಿಸ್ತಾನ ಕಾನೂನಿನ ಪ್ರಕಾರ ಜಾಧವ್ ಪ್ರಕರಣ ನಿಭಾಯಿಸುತ್ತೇವೆ: ಸಚಿವ

ಭಾರತೀಯ ಬೇಹುಗಾರ ಎಂದು ಆರೋಪಿಸಲಾಗಿ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರನ್ನು "ನಮ್ಮ ಕಾನೂನಿನ ಪ್ರಕಾರ" ನಿಭಾಯಿಸಲಿದ್ದೇವೆ ಎಂದು ಆಂತರಿಕ
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್
Updated on
ಇಸ್ಲಮಾಬಾದ್: ಭಾರತೀಯ ಗೂಢಚಾರ ಎಂದು ಆರೋಪಿಸಲಾಗಿ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರನ್ನು "ನಮ್ಮ ಕಾನೂನಿನ ಪ್ರಕಾರ" ನಿಭಾಯಿಸಲಿದ್ದೇವೆ ಎಂದು ಆಂತರಿಕ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಶನಿವಾರ ಹೇಳಿದ್ದಾರೆ. 
ಜಾಧವ್ ಪ್ರಕರಣವನ್ನು ಗೂಢಚರ್ಯೆ ಪ್ರಕರಣವನ್ನಾಗಿ ಪಾಕಿಸ್ತಾನದ ಕಾನೂನಿನ ಪ್ರಕಾರ ನಿಭಾಯಿಸಲಾಗುತ್ತದೆ ಎಂದು ಜಿಯೋ ಟಿವಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ಜಾಧವ್ ಬಂಧನದಿಂದ ಪಾಕಿಸ್ತಾನದಲ್ಲಿ ಸಂಭವಿಸಲಿದ್ದ ಹಲವು ಭಯೋತ್ಪಾದಕ ಚಟುವಟಿಕೆಗಳನ್ನು ನಿಲ್ಲಿಸಲು ಸಾಧ್ಯವಾಗಿದೆ ಎಂದು ಕೂಡ ಸಚಿವರು ಹೇಳಿದ್ದಾರೆ. 
ಜಾಧವ್ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಿ ಅಂತಾರಾಷ್ಟ್ರೀಯ ನ್ಯಾಯಾಲಯ (ಐ ಸಿ ಜೆ) ಆದೇಶ ಹೊರಡಿಸಿದ ಎರಡು ದಿನಗಳ ನಂತರ ಸಚಿವರು ಈ ಹೇಳಿಕೆ ನೀಡಿದ್ದಾರೆ 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com