ಮಗುವಿನ ಸಾಂದರ್ಭಿಕ ಚಿತ್ರ
ಮಗುವಿನ ಸಾಂದರ್ಭಿಕ ಚಿತ್ರ

ವೈದ್ಯರು ನೀಡಿದ ನೋವು ನಿವಾರಕ ಇಂಜೆಕ್ಷನ್ ನಿಂದ ಮಗು ಸಾವು

ರಾಷ್ಟ್ರ ರಾಜಧಾನಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ಮತ್ತೊಂದು ಮಗು ಸಾವನ್ನಪ್ಪಿದೆ. ವೈದ್ಯರು ನೀಡಿದ ನೋವು ನಿವಾರಕ ಇಂಜಿಕ್ಷನ್ ನಿಂದ ನಾಲ್ಕು ತಿಂಗಳ ಹಸುಗೂಸು ಮೃತಪಟ್ಟಿದೆ.

ದೆಹಲಿ:  ರಾಷ್ಟ್ರ ರಾಜಧಾನಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ಮತ್ತೊಂದು ಮಗು ಸಾವನ್ನಪ್ಪಿದೆ. ವೈದ್ಯರು ನೀಡಿದ ನೋವು ನಿವಾರಕ ಇಂಜಿಕ್ಷನ್ ನಿಂದ ನಾಲ್ಕು ತಿಂಗಳ ಹಸುಗೂಸು ಮೃತಪಟ್ಟಿದೆ.

ಮಗುವಿನ  ತುಟ್ಟಿಯ ಮೇಲ್ಭಾಗ  ತುಂಡಾಗಿದ್ದರಿಂದ   ರೋಹಿಣಿ ಬಡಾವಣೆಯ
ಜೈಪುರ ಗೋಲ್ಡೆನ್ ಆಸ್ಪತ್ರೆಗೆ ದಾಖಲಿಸಿದ್ದ ಮಗು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.

 ತುಂಡಾಗಿದ್ದ ಮಗುವಿನ ತುಟ್ಟಿಗೆ ಹೊಲಿಗೆ ಹಾಕಲು ಯೋಚಿಸಿದ್ದ ವೈದ್ಯರು ನೋವು ನಿವಾರಕ ನೀಡಿದ್ದ ನಂತರ ಮಗು ಸಂಪೂರ್ಣವಾಗಿ ನಿಶಬ್ದಗೊಂಡಿತು. ನಂತರ ತುರ್ತು ನಿಗಾ ಘಟಕಕ್ಕೆ ಸೇರಿಸಿ ತಪಾಸಣೆ ನಡೆಸಿ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದರು  ಎಂದು ಮೃತ ಮಗುವಿನ ಸಂಬಂಧಿಕರು ಹೇಳಿದ್ದಾರೆ.

ವೈದ್ಯರು ಸರಿಯಾದ ವೇಳೆಗೆ ಚಿಕಿತ್ಸೆ ನೀಡದೆ ಇರುವುದರಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಪೋಷಕರು ಆಸ್ಪತ್ರೆ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com