ಸಿನಿಮಾ ಸುದ್ದಿಕೊಲ್ಕತ್ತಾ ಚಲಚಿತ್ರೋತ್ಸವದಲ್ಲಿ ಕೊಡಗಿನ ಮಹಿಳೆ ನಿರ್ದೇಶನದ 'ಕಂದೀಲು' ಪ್ರದರ್ಶನ
ಕೊಡಗಿನ ಮಹಿಳೆಯೊಬ್ಬರು ನಿರ್ದೇಶಿಸಿರುವ ಕನ್ನಡ ಚಿತ್ರವೊಂದು ಡಿಸೆಂಬರ್ 5ರಿಂದ 12ರವರೆಗೆ ನಡೆಯಲಿರುವ 29ನೇ ಕೊಲ್ತತ್ತಾ ಚಲನಚಿತ್ರೋತ್ಸದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದೆ. ಮಡಿಕೇರಿಯ ಯಶೋಧ ಪ್ರಕಾಶ್ ನಿರ್ದೇಶಿಸಿರುವ 'ಕಂದೀಲು' ಏಕೈಕ ಕನ್ನಡ ಚಿತ್ರ ಮಾತ್ರ ಈ ವರ್ಷದ ಭಾರತೀಯ ಭಾಷೆಗಳ ಚಿತ್ರಗಳಲ್ಲಿ ಸ್ಪರ್ಧೆಗೆ ಆಯ್ಕೆಯಾಗಿದೆ.