ಸಿನಿಮಾ ಸುದ್ದಿ'ನನಗೆ ಕುಡಿತ, ಸಿಗರೇಟು, ಮಾಂಸ ಸೇವನೆಯ ಚಟ ಇತ್ತು, ಪತ್ನಿ ಲತಾಳ ಪ್ರೀತಿ ನನ್ನನ್ನು ಬದಲಾಯಿಸಿತು, ಪತ್ನಿಯೇ ನನ್ನ ಶಕ್ತಿ': ಸೂಪರ್ ಸ್ಟಾರ್ ರಜನಿಕಾಂತ್
ಭಾರತೀಯ ಚಿತ್ರರಂಗದ ಜೀವಂತ ದಂತಕಥೆ, ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚುಮೆಚ್ಚು. ಅವರ ಸ್ಟೈಲ್, ನಟನೆ, ಮ್ಯಾನರಿಸಂಗೆ ಮನಸೋಲದವರಿಲ್ಲ, ಇಂತಹ ಹೊತ್ತಿನಲ್ಲಿ ಅವರು ತಮ್ಮ ಹಿಂದಿನ ಜೀವನವೆಲ್ಲ ನೆನಪಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಪತ್ನಿಯನ್ನು ಮನಸಾರೆ ಹೊಗಳಿದ್ದಾರೆ.