ರಾಜ್ಯಪುನೀತ್ ಜನ್ಮದಿನ ಮಾ. 17, ಸ್ಪೂರ್ತಿ ದಿನವಾಗಿ ಆಚರಿಸಲು ಸರ್ಕಾರ ನಿರ್ಧಾರ
ಯುವಕರ ಪಾಲಿಗೆ ಸ್ಪೂರ್ತಿಯಾಗಿದ್ದ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಅತ್ಯುನ್ನತ ಗೌರವ ಸಿಗುತ್ತಿದೆ. ಅವರ ಜನ್ಮ ದಿನವಾದ ಮಾರ್ಚ್ 17ನ್ನು ಇನ್ನು ಮುಂದೆ ಸ್ಪೂರ್ತಿ ದಿನವಾಗಿ ಸರ್ಕಾರದ ವತಿಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದೆ.