ದೇಶದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯಂತೆ ನಟಿಸಿ 12.7 ಲಕ್ಷ ರೂ. ವಂಚನೆ, ವ್ಯಕ್ತಿಯ ಬಂಧನ
ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯಂತೆ ನಟಿಸಿ ಹಲವಾರು ಜನರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಂಚಕನು ಆನ್ಲೈನ್ ಸೇವೆ ಒದಗಿಸುವುದಾಗಿ ಲಕ್ಷಗಟ್ಟಲೆ ವಂಚಿಸಿದ್ದಾನೆ. ಈ ಕುರಿತು ಐಪಿಸಿ ಕಲಂ 419/420 ಅಡಿಯಲ್ಲಿ ಶಾಹದಾರ ಪೊಲೀಸ್ ಠಾಣೆ ಸೈಬರ್ ನಲ್ಲಿ ಪ್ರಕರಣ ದಾಖಲಾಗಿದೆ.