- Tag results for Adani issue
![]() | ಅದಾನಿ ಭ್ರಷ್ಟಾಚಾರದ ಪ್ರತೀಕ; ಪ್ರಧಾನಿ ನರೇಂದ್ರ ಮೋದಿ ಗುರಿಯಾಗಿಸಿ ರಾಹುಲ್ ಗಾಂಧಿ ವಾಗ್ದಾಳಿಅದಾನಿ 'ಭ್ರಷ್ಟಾಚಾರ' ವಿಷಯವನ್ನು ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. |
![]() | ಅದಾನಿ ವಿಚಾರದಲ್ಲಿ ಪ್ರಧಾನಿ ವಿರುದ್ಧ ಆರೋಪ: ರಾಹುಲ್ ಗಾಂಧಿ 'ಪುನರಾವರ್ತಿತ ಅಪರಾಧಿ' ಎಂದ ನಿರ್ಮಲಾ ಸೀತಾರಾಮನ್ಅದಾನಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತೀವ್ರವಾಗಿ ಟೀಕಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅಂತಹ ಆರೋಪಗಳನ್ನು ಹೊರಿಸುವಲ್ಲಿ ರಾಹುಲ್ 'ಪುನರಾವರ್ತಿತ ಅಪರಾಧಿ' ಎಂದು ಗುರುವಾರ ಬಣ್ಣಿಸಿದ್ದಾರೆ. |
![]() | ಲೋಕಸಭೆ, ರಾಜ್ಯಸಭೆ ಕಲಾಪ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆಇತ್ತೀಚೆಗೆ ನಿಧನರಾದ ಪುಣೆ ಸಂಸದ ಗಿರೀಶ್ ಬಾಪಟ್ ಮತ್ತು ಕೇರಳದ ಮಾಜಿ ಸಂಸದ ಇನ್ನೋಸೆಂಟ್ ವರೀದ್ ಅವರಿಗೆ ಸಂತಾಪ ಸೂಚಕವಾಗಿ ಲೋಕಸಭೆಯ ಕಲಾಪವನ್ನೂ ಸೋಮವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. |
![]() | ಅದಾನಿ ವಿಚಾರದಲ್ಲಿ ತನಿಖೆ ಯಾಕಿಲ್ಲ, ಇಷ್ಟು ಭಯ ಯಾಕೆ: ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಗಾಂಧಿ ಪ್ರಶ್ನೆಅದಾನಿ ಗ್ರೂಪ್‌ನಲ್ಲಿ ಜನರ ನಿವೃತ್ತಿ ನಿಧಿಯ ಹೂಡಿಕೆಯ ಬಗ್ಗೆ ಹಲವಾರು ಆರೋಪಗಳು ಕೇಳಿಬಂದಿದ್ದರೂ, ಏಕೆ ತನಿಖೆ ನಡೆಸಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ. |
![]() | ವಿರೋಧ ಪಕ್ಷದ ಸದಸ್ಯರ ಗದ್ದಲದ ನಡುವೆ ಸಂಸತ್ತಿನ ಉಭಯ ಸದನಗಳ ಕಲಾಪ ಮುಂದೂಡಿಕೆವಿರೋಧ ಪಕ್ಷದ ಸದಸ್ಯರ ಘೋಷಣೆಗಳ ನಡುವೆಯೇ ಲೋಕಸಭೆಯ ಕಲಾಪವನ್ನು ಸೋಮವಾರ ಸಂಜೆ 4 ಗಂಟೆಗೆ ಮುಂದೂಡಲಾಯಿತು. ಇತ್ತ ರಾಜ್ಯಸಭೆಯಲ್ಲೂ ಅದಾನಿ ವಿಚಾರವಾಗಿ ವಿಪಕ್ಷಗಳು ಎಬ್ಬಿಸಿದ ಗದ್ದಲದಿಂದಾಗಿ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. |
![]() | ಅದಾನಿ ಗ್ರೂಪ್ ಮೇಲಿನ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ ಸಂಸತ್ ಭವನದಲ್ಲಿ ವಿರೋಧ ಪಕ್ಷ ನಾಯಕರ ಪ್ರತಿಭಟನೆಅದಾನಿ ವಿವಾದದ ಕುರಿತು ಜಂಟಿ ಸಂಸದೀಯ ಸಮಿತಿ (JPC) ತನಿಖೆಗೆ ಆಗ್ರಹಿಸಿ ಹಲವು ವಿರೋಧ ಪಕ್ಷದ ನಾಯಕರು ಮಂಗಳವಾರ ಸಂಸತ್ ಭವನದ ಕಾರಿಡಾರ್‌ನಲ್ಲಿ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದ್ದಾರೆ. |
![]() | ಅದಾನಿ ವಿಚಾರವಾಗಿ ಜೆಪಿಸಿ ತನಿಖೆ, ಲಂಡನ್‌ನಲ್ಲಿ ರಾಹುಲ್ ಗಾಂಧಿ ಹೇಳಿಕೆ ವಿಷಯಗಳಿಂದ ಸಂಸತ್ತು ನಿಷ್ಕ್ರಿಯಅದಾನಿ ವಿಚಾರದಲ್ಲಿ ಜಂಟಿ ಸಂಸದೀಯ ತನಿಖೆಗೆ (ಜೆಪಿಸಿ) ಪ್ರತಿಪಕ್ಷಗಳು ಒತ್ತಾಯಿಸುವುದರೊಂದಿಗೆ ಮತ್ತು ಲಂಡನ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆಗೆ ಕ್ಷಮೆಯಾಚಿಸುವಂತೆ ಆಡಳಿತ ಪಕ್ಷದ ಸದಸ್ಯರ ಒತ್ತಾಯದಿಂದಾಗಿ ಬಜೆಟ್ ಅಧಿವೇಶನದ ಎರಡನೇ ಭಾಗದ ಆರಂಭದಿಂದಲೂ ಸಂಸತ್ತು ನಿಷ್ಕ್ರಿಯವಾಗಿದೆ. |
![]() | ವಿಪಕ್ಷ ಸಂಸದರ ಗದ್ದಲ: ಮಧ್ಯಾಹ್ನ 2 ವರೆಗೆ ಉಭಯ ಸದನ ಕಲಾಪ ಮುಂದೂಡಿಕೆ, ರಾಹುಲ್ ಗಾಂಧಿ ಭಾಷಣ ಸಾಧ್ಯತೆಸಂಸತ್ ನಲ್ಲಿ ವಿಪಕ್ಷಗಳು ಅದಾನಿ ವಿಷಯವಾಗಿ ಗದ್ದಲವನ್ನು ಮುಂದುವರೆಸಿದ್ದು, ಗುರುವಾರದ ಕಲಾಪ ಆರಂಭವಾಗುತ್ತಿದಂತೆಯೇ ಗದ್ದಲದ ಪರಿಣಾಮ ಮಧ್ಯಾಹ್ನ 2 ವರೆಗೂ ಕಲಾಪವನ್ನು ಮುಂದೂಡಲಾಗಿದೆ. |
![]() | ಅದಾನಿ ಗ್ರೂಪ್ -ಹಿಂಡನ್ ಬರ್ಗ್ ವರದಿ ಪ್ರಕರಣ: ಮಾಧ್ಯಮಗಳಿಗೆ ನಿರ್ಬಂಧಕಾಜ್ಞೆ ಹೊರಡಿಸಲು ಸುಪ್ರೀಂ ಕೋರ್ಟ್ ನಕಾರನ್ಯಾಯಾಲಯವು ತನ್ನ ಆದೇಶವನ್ನು ಪ್ರಕಟಿಸುವವರೆಗೆ ಅದಾನಿ-ಹಿಂಡೆನ್‌ಬರ್ಗ್ ವಿಷಯದ ಕುರಿತು ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. |
![]() | ಅದಾನಿ ವಿವಾದ: ಸರ್ಕಾರದ ಮುಚ್ಚಿದ ಲಕೋಟೆಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ನಕಾರಅದಾನಿ ಪ್ರಕರಣದ ವಿಚಾರವಾಗಿ ಸರ್ಕಾರದ ಮುಚ್ಚಿದ ಲಕೋಟೆಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. |
![]() | ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ತನಿಖೆಗೆ ಆರ್‌ಬಿಐ, ಸೆಬಿಗೆ ಕಾಂಗ್ರೆಸ್‌ನ ಜೈರಾಮ್ ರಮೇಶ್ ಪತ್ರಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಅವರಿಗೆ ಪತ್ರ ಬರೆದಿದ್ದು, ಅದಾನಿ ಗ್ರೂಪ್ ವಿರುದ್ಧದ ಹಣಕಾಸು ಅಕ್ರಮಗಳು ಮತ್ತು ಸ್ಟಾಕ್ ಮ್ಯಾನಿಪುಲೇಷನ್ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದಾರೆ. |
![]() | ಅದಾನಿ ವಿಚಾರವಾಗಿ ವಿಪಕ್ಷಗಳ ಗದ್ದಲ; ಮಾರ್ಚ್ 13ರವರೆಗೆ ರಾಜ್ಯಸಭೆ ಕಲಾಪ ಮುಂದೂಡಿಕೆಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಅವರ ಅಮಾನತು ಹಿಂಪಡೆಯಲು ಮತ್ತು ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ತನಿಖೆಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಸದನಕ್ಕೆ ಅಡ್ಡಿಪಡಿಸಿದ್ದರಿಂದ ರಾಜ್ಯಸಭೆಯ ಕಲಾಪವನ್ನು ಸೋಮವಾರ ಮಾರ್ಚ್ 13ಕ್ಕೆ ಮುಂದೂಡಲಾಯಿತು. |
![]() | ಸಂಸತ್ತಿನ ಒಳಗೆ ಮತ್ತು ಹೊರಗೆ ಅದಾನಿ ವಿಷಯ ಪ್ರಸ್ತಾಪಿಸುತ್ತಲೇ ಇರುತ್ತೇವೆ, ಇದೊಂದು ದೊಡ್ಡ ಹಗರಣ: ಖರ್ಗೆಸಂಸತ್ತಿನ ಒಳಗೆ ಮತ್ತು ಹೊರಗೆ ಅದಾನಿ ವಿಷಯವನ್ನು ಕಾಂಗ್ರೆಸ್ ಪ್ರಸ್ತಾಪಿಸುತ್ತಲೇ ಇರುತ್ತದೆ. ಆದರೂ ಸರ್ಕಾರ ಪ್ರಜಾಸತ್ತಾತ್ಮಕವಾಗಿ ಕೆಲಸ ಮಾಡಲು ಸಿದ್ಧವಿಲ್ಲದಿದ್ದರೆ ಜನರೇ ಅಧಿಕಾರದಿಂದ ಕೆಳಗಿಳಿಸುತ್ತಾರೆ... |
![]() | ಅದಾನಿ ವಿವಾದ: ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸಲು ಬಹುತೇಕ ವಿರೋಧ ಪಕ್ಷಗಳು ನಿರ್ಧರಅದಾನಿ ಗ್ರೂಪ್ ವಿರುದ್ಧದ ವಂಚನೆ ಆರೋಪಗಳ ಕುರಿತು ಉಭಯ ಸದನಗಳಲ್ಲಿ ಮೂರು ದಿನಗಳ ಕಲಾಪದ ಗದ್ದಲದ ನಂತರ ಸಂಸತ್ತಿನ ಕಲಾಪದಲ್ಲಿ ಭಾಗವಹಿಸಲು ಕಾಂಗ್ರೆಸ್ ಸೇರಿದಂತೆ ಹೆಚ್ಚಿನ ವಿರೋಧ ಪಕ್ಷಗಳು ಮಂಗಳವಾರ ನಿರ್ಧರಿಸಿವೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಿಳಿಸಿದ್ದಾರೆ. |
![]() | ಅದಾನಿ ವಿಚಾರದ ತನಿಖೆಗೆ ಒತ್ತಾಯಿಸಿ ಸಂಸತ್ ಆವರಣದಲ್ಲಿ ಪ್ರತಿಪಕ್ಷಗಳ ಸಂಸದರಿಂದ ಪ್ರತಿಭಟನೆಅದಾನಿ ವಿವಾದಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ ತನಿಖೆ ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಸೋಮವಾರ ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. |