• Tag results for Covid19

ಸೋನಿಯಾ ಗಾಂಧಿ ಕೋವಿಡ್ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡಿದ್ದಾರೆ, ಸರ್ಕಾರ ಎಲ್ಲರಿಗೆ ಲಸಿಕೆ ಒದಗಿಸಲಿ: ಕಾಂಗ್ರೆಸ್

ಸೋನಿಯಾ ಗಾಂಧಿ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಗಳನ್ನು ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದ್ದು, ಬಿಜೆಪಿ ಪ್ರಶ್ನೆ ಕೇಳುವುದನ್ನು ಬಿಟ್ಟು ಎಲ್ಲಾ ಭಾರತೀಯರಿಗೆ ಲಸಿಕೆ ಒದಗಿಸುವ "ರಾಜಧರ್ಮ" ಪಾಲಿಸಲಿ ಎಂದು ಗುರುವಾರ ಹೇಳಿದೆ.

published on : 17th June 2021

ಕೋವಿಡ್-19: ಭಾರತದಲ್ಲಿ 24 ಗಂಟೆಗಳ ಅವಧಿಯಲ್ಲಿ 2.40 ಲಕ್ಷ ಹೊಸ ಕೇಸ್ ಪತ್ತೆ, 3,741 ಮಂದಿ ಸಾವು

ಭಾರತದಲ್ಲಿ ಕೊರೋನಾ 2ನೇ ಅಲೆಯ ಆರ್ಭಟ ಕೊಂಚ ತಗ್ಗಿದ್ದು, ದೇಶದಲ್ಲಿ ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳಲ್ಲಿ ಭಾರತದಲ್ಲಿ 2,40,842 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

published on : 23rd May 2021

ಮಂಗಳೂರು: 24 ವರ್ಷದ ಪ್ರೊಬೇಷನರಿ ಮಹಿಳಾ ಸಬ್ ಇನ್ಸ್ ಪೆಕ್ಟರ್ ಕೋವಿಡ್ ಗೆ ಬಲಿ

24 ವರ್ಷದ ಪ್ರೊಬೇಷನರಿ ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ.

published on : 18th May 2021

ಕೊರೋನಾ ಲಾಕ್ ಡೌನ್ ಇದ್ದರೂ 'ಎಣ್ಣೆ ಪ್ರಿಯ'ರಿಗೇನೂ ಇಲ್ಲ ಬರ, ಭರ್ಜರಿಯಾಗಿಯೇ ಸಾಗುತ್ತಿದೆ ವ್ಯಾಪಾರ!

ಕೊರೋನಾ ಸಾಂಕ್ರಾಮಿಕ ವ್ಯಾಪಕವಾಗಿ ಹರಡಿ ಲಾಕ್ ಡೌನ್ ಹೇರಿಕೆಯಾದರೂ ಕೂಡ ಮದ್ಯ ಮಾರಾಟದ ಮೇಲೆ ರಾಜ್ಯದಲ್ಲಿ ಅಷ್ಟೊಂದು ಹೊಡೆತ ಬಿದ್ದಿಲ್ಲ.

published on : 15th May 2021

ಮಂಗಳೂರು: 29 ಗರ್ಭಿಣಿಯರು, ಎರಡು ಶಿಶು, ಹೊಸ ತಾಯಂದಿರಿಗೆ ಕೋವಿಡ್ ಪಾಸಿಟಿವ್!

ದಕ್ಷಿಣ ಕನ್ನಡ ಆರೋಗ್ಯ ಇಲಾಖೆ ಮಂಗಳೂರಿನ ಸರ್ಕಾರಿ ಲೇಡಿ ಗೊಸ್ಚೆನ್ ಆಸ್ಪತ್ರೆಯಲ್ಲಿ ಹೆಚ್ಚುವರಿ 14 ಬೆಡ್ ಗಳ ವಾರ್ಡ್ ಅನ್ನು ಗರ್ಭಿಣಿಯರು ಮತ್ತು ಕೋವಿಡ್ ಪಾಸಿಟಿವ್ ಬಂದಿರುವ ಹೊಸ ತಾಯಂದಿರಿಗಾಗಿ ನಿಗದಿಪಡಿಸಿದೆ. 

published on : 13th May 2021

ಮಾಧ್ಯಮಗಳಿಗೆ ನ್ಯಾಯಾಲಯದ ವಿಚಾರಣೆಯನ್ನು ವರದಿ ಮಾಡುವ ಹಕ್ಕಿದೆ: ಮದ್ರಾಸ್ ಹೈಕೋರ್ಟ್ ಹೇಳಿಕೆ ತಳ್ಳಿ ಹಾಕಲು 'ಸುಪ್ರೀಂ' ನಕಾರ

ದೇಶದಲ್ಲಿ ಕೋವಿಡ್-19 ಪ್ರಕರಣಗಳ ಉಲ್ಬಣಕ್ಕೆ ಕಾರಣವಾದ ಚುನಾವಣಾ ಆಯೋಗದ ವಿರುದ್ಧ ಟೀಕೆಗಳನ್ನು ಮಾಡಿರುವ ಮದ್ರಾಸ್ ಹೈಕೋರ್ಟ್ ವಾದಗಳನ್ನು ತಳ್ಳಿ ಹಾಕಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.

published on : 6th May 2021

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೊರೋನಾದಿಂದ ಗುಣಮುಖ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೊರೋನಾ ಸೋಂಕಿನಿಂದ ಗುಣಮುಖವಾಗಿದ್ದಾರೆ.

published on : 30th April 2021

ಕೊರೋನಾ ಸಂಕಷ್ಟದ ಸಮಯದಲ್ಲಿ ಆತಂಕ: ನಿಭಾಯಿಸುವುದು ಹೇಗೆ?

ಕೊರೋನಾ ಸೋಂಕಿನ ಆರೋಗ್ಯ ಸಮಸ್ಯೆ, ಆರ್ಥಿಕ ದುಸ್ಥಿತಿ, ಕೆಲಸ ಕಳೆದುಕೊಳ್ಳುವ ಅಥವಾ ಇನ್ನು ಕೆಲವರು ಕೆಲಸ ಕಳೆದುಕೊಂಡು ಭವಿಷ್ಯ ಏನಾಗುತ್ತದೋ ಎಂಬ ಭೀತಿಯಲ್ಲಿ ಹೀಗೆ ಹತ್ತಾರು ಸಮಸ್ಯೆ ಇತ್ತೀಚೆಗೆ ಜನರನ್ನು ಕಾಡುತ್ತಿವೆ.

published on : 28th April 2021

ಭಾರತದ ಕೋವಿಡ್-19 ಪರೀಕ್ಷೆ ವರದಿಗಳು ವಿಶ್ವಾಸಾರ್ಹವಲ್ಲ ಅಥವಾ ನಿಖರವಲ್ಲ: ಪಶ್ಚಿಮ ಆಸ್ಟ್ರೇಲಿಯಾ ಪ್ರೀಮಿಯರ್

ಭಾರತ ನಡೆಸುತ್ತಿರುವ ಕೋವಿಡ್-19 ಪರೀಕ್ಷೆಗಳು ವಿಶ್ವಾಸಾರ್ಹವಲ್ಲ ಅಥವಾ ನಿಖರವಾಗಿಲ್ಲ ಎಂದು ಪಶ್ಚಿಮ ಆಸ್ಟ್ರೇಲಿಯಾದ ಪ್ರೀಮಿಯರ್ ಮಾರ್ಕ್ ಮೆಕ್‌ಗೊವನ್ ಕಳವಳ ವ್ಯಕ್ತಪಡಿಸಿದ್ದಾರೆ. 

published on : 27th April 2021

ಆಮ್ಲಜನಕ ಉತ್ಪಾದನೆಗಾಗಿ ಸ್ಟರ್ಲೈಟ್ ಸ್ಥಾವರ ಪುನರ್ ಕಾರ್ಯಾರಂಭಕ್ಕೆ ತಮಿಳುನಾಡು ಸರ್ಕಾರ ಗ್ರೀನ್ ಸಿಗ್ನಲ್

ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಆಮ್ಲಜನಕದ ತುರ್ತು ಅಗತ್ಯವನ್ನು ಪರಿಗಣಿಸಿ, ತೂತುಕುಡಿಯಲ್ಲಿನ ಸ್ಟರ್ಲೈಟ್ ತಾಮ್ರ ಘಟಕವನ್ನು ಆಮ್ಲಜನಕ ಉತ್ಪಾದನೆಗಾಗಿ ತೆರೆಯಬಹುದು ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಯಿತು.

published on : 26th April 2021

ಮಾಸ್ಕ್ ಧರಿಸದೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ: ಕೋವಿಡ್ ನಿಯಮ ಉಲ್ಲಂಘನೆ ಆರೋಪ

ಕೋವಿಡ್ 2ನೇ ಅಲೆ ತಾಂಡವವಾಡುತ್ತಿರುವ ಈ ಸಮಯದಲ್ಲಿ ಹೊರಗೆ ಓಡಾಡುವಾಗ, ಜನ ಸೇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮುಖಗವಸನ್ನು ಧರಿಸಬೇಕೆಂದು ಸರ್ಕಾರ ಕಡ್ಡಾಯ ಮಾಡಿದೆ. ಮಾಸ್ಕ್ ಧರಿಸದವರಿಗೆ ಪೊಲೀಸರು ದಂಡ ಹಾಕುತ್ತಾರೆ.

published on : 26th April 2021

ಸಂದೇಶ ಕಳುಹಿಸುವ ಮುನ್ನ ಗಮನಿಸಿ: ವೈದ್ಯಕೀಯ ಸೌಲಭ್ಯ, ರೆಮೆಡಿಸಿವಿರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಸುಳ್ಳು ಮಾಹಿತಿ!

ಕೊರೋನಾ ಸೋಂಕಿತ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಲಭ್ಯತೆ ಮತ್ತು ರೆಮೆಡಿಸಿವಿರ್ ಔಷಧಿಗೆ ಕೊರತೆ ಉಂಟಾಗಿದೆ. ಈ ಮಧ್ಯೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಗೊಂದಲದ, ಆತಂಕ ಹುಟ್ಟಿಸುವ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು ನಾಗರಿಕರ ಭಯ, ಆತಂಕಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.

published on : 26th April 2021

ಕೊರೋನಾದಿಂದಲ್ಲ.. ನಿಮ್ಮ ನಿರ್ಲಕ್ಷ್ಯತೆಯಿಂದಲೇ ಹೆಚ್ಚಿನ ಸಾವು: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಕಿಡಿ

ದೇಶದಲ್ಲಿ ಕೊರೋನಾ ವೈರಸ್ ನಿಂದಲ್ಲ... ಮೋದಿ ಸರ್ಕಾರದ ನಿರ್ಲಕ್ಷ್ಯದಿಂದಲೇ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

published on : 23rd April 2021

ಬೆಂಗಳೂರಿಗೆ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ, ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯ ಹೆಚ್ಚಿಸಬೇಕಾಗಿದೆ: ಸಚಿವ ಡಾ. ಕೆ.ಸುಧಾಕರ್

ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನ ನಾಗಾಲೋಟ ಮುಂದುವರಿದಿರುವುದರಿಂದ ರೋಗಿಗಳ ಚಿಕಿತ್ಸೆಗೆ ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ತುರ್ತು ಪರಿಸ್ಥಿತಿ ಬಂದಿದೆ. ಹೀಗಾಗಿ ಕರ್ನಾಟಕದಲ್ಲಿ ಬೆಂಗಳೂರಿಗೆ ಆರೋಗ್ಯ ತುರ್ತು ಪರಿಸ್ಥಿತಿ ಎಂದೇ ವ್ಯಾಖ್ಯಾನಿಸುವ ಅಗತ್ಯವಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.

published on : 22nd April 2021

ಭಿಕ್ಷೆ ಬೇಡುತ್ತೀರೊ, ಕದಿಯುತ್ತೀರೊ, ಸಾಲ ತರ್ತಿರೊ: ಆಕ್ಸಿಜನ್ ಒದಗಿಸಲು ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ತಾಕೀತು!

ಆಮ್ಲಜನಕವನ್ನು ಕೈಗಾರಿಕೆಗಳಿಗೆ ಬಳಸಲು ಅವಕಾಶ ನೀಡಿರುವುದಕ್ಕೆ ಆಕ್ರೋಶಗೊಂಡಿರುವ ದೆಹಲಿ ಹೈಕೋರ್ಟ್ ವಾಸ್ತವ ಅರ್ಥ ಮಾಡಿಕೊಳ್ಳಲು ನಿಮಗೇನು ದಾಡಿ ಎಂದು ಕೇಂದ್ರ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

published on : 22nd April 2021
1 2 3 >